ಭಾರತ ಲಾಕ್‌ಡೌನ್‌: ಅಗತ್ಯ ವಸ್ತುಗಳ ಬೆಲೆ ಏರಿಕೆ, ಗ್ರಾಹಕರ ಸುಲಿಗೆಗೆ ಮುಂದಾದ ವ್ಯಾಪಾರಸ್ಥರು

ಗ್ರಾಹಕರನ್ನ ಸುಲಿಗೆ ಮಾಡಲು ಮುಂದಾದ ವ್ಯಾಪಾರಸ್ಥರು| ದುಪ್ಪಟ್ಟು ಬೆಲೆ ಹೇಳುತ್ತಿರುವ ತರಕಾರಿ, ದಿನಸಿ ವ್ಯಾಪಾರಸ್ಥರು| ತರಕಾರಿ ಪೂರೈಕೆಯಲ್ಲಿ ಅಭಾವ ಇಲ್ಲದಿದ್ದರೂ ಬೆಲೆ ಮಾತ್ರ ಏರಿಕೆ| 

First Published Mar 28, 2020, 3:15 PM IST | Last Updated Mar 28, 2020, 3:15 PM IST

ಬೆಂಗಳೂರು(ಮಾ.28): ದೇಶಾದ್ಯಂತ ಲಾಕ್‌ಡೌನ್‌ ಇರುವ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಇದನ್ನೇ ಬಂಡವಾಳ ಮಾಡಿಕೊಂಡು ಗ್ರಾಹಕರನ್ನ ಸುಲಿಗೆ ಮಾಡುತ್ತಿದ್ದಾರೆ. ಅದರಲ್ಲೂ ತರಕಾರಿ, ದಿನಸಿ ವ್ಯಾಪಾರಸ್ಥರು ದುಪ್ಪಟ್ಟು ಬೆಲೆ ಹೇಳುತ್ತಿದ್ದಾರೆ. ಇದರಿಂದ ಗ್ರಾಹಕರು ಕಂಗಾಲಾಗಿ ಹೋಗಿದ್ದಾರೆ. 

ಮಂಗಳೂರು: ಸೆಂಟ್ರಲ್ ಮಾರ್ಕೆಟ್ ಬೀದಿಯಲ್ಲೇ ಭರ್ಜರಿ ವ್ಯಾಪಾರ

ವ್ಯಾಪಾರಸ್ಥರು ಮನಸ್ಸಿಗೆ ಬಂದಂತೆ ರೇಟ್‌ ಹೇಳುತ್ತಿದ್ದಾರೆ. ತರಕಾರಿ ಪೂರೈಕೆಯಲ್ಲಿ ಅಭಾವ ಇಲ್ಲದಿದ್ದರೂ ಬೆಲೆ ಮಾತ್ರ ಏರತೊಡಗಿದೆ. ವ್ಯಾಪಾರಸ್ಥರೇ ತರಕಾರಿ, ದಿನಸಿ ಪದಾರ್ಥಗಳ ಬೆಲೆಯನ್ನ ಮನಸೋ ಇಚ್ಚೆ ಏರಿಸಿದ್ದಾರೆ. ಇದರಿಂದ ಮಧ್ಯಮ ವರ್ಗದ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. 
 

Video Top Stories