ಹೂ ಬೆಳೆದವರ ಬಾಳು ಬಾಡಿಸಿದ ಕೊರೋನಾ, ಹಣ್ಣು ಬೆಳೆದವರ ಹಿಂಡಿದ ಮಾರಿ
ಕೊರೋನಾ ಅಬ್ಬರ/ ಉತ್ತಮ ಫಸಲು ಬಂದಿದ್ದರೂ ಸಿಗದ ದರ/ ಕಲ್ಲಂಗಡಿ-ಕರಬೂಜ ಬೆಳೆದ ರೈತರ ಗೋಳು ಕೇಳುವರಿಲ್ಲ/ ಹೂವು ಬೆಳೆದವರ ಬಾಳು ಬಾಡಿತು
ಕೋಲಾರ(ಮಾ. 31) ಕೊರೋನಾ ಅಬ್ಬರದ ನಡುವೆ ಬೆಳೆದ ಹೂವು, ಹಣ್ಣುಗಳಿಗೆ ದರ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಬೆಳೆದ ಹೂವನ್ನು ತಿಪ್ಪೆಗೆ ಸುರಿಯಲಾಗಿದೆ.
ಸೇವಂತಿಗೆ, ಚೆಂಡು ಹೂ ಯಾವುದು ಮಾರಾಟ ಆಗಿಲ್ಲ.
ಕಲ್ಲಂಗಡಿ ಮತ್ತು ಕರಬೂಜ ಕೂಡ ನಷ್ಟವಾಗುತ್ತಿದೆ. ಒಳ್ಳೆ ಬೆಳೆ ಬಂದರೂ ಮಾರುಕಟ್ಟೆ ಇಲ್ಲದ ಸ್ಥಿತಿಗೆ ಕೊರೋನಾ ಕಾರಣವಾಗಿದೆ.