KGF 2; ಅತೀ ದೊಡ್ಡ ಮೊಸಾಯಿಕ್ ಬುಕ್ ಪೋಟ್ರೇಟ್ ನಿರ್ಮಿಸಿ ದಾಖಲೆ ಬರೆದ ಯಶ್ ಫ್ಯಾನ್ಸ್

ಚಿನ್ನದ ನಾಡು ಕೋಲಾರದಲ್ಲೂ ರಾಕಿಂಗ್ ಸ್ಟಾರ್ ನಟನೆಯ ಕೆಜಿಎಫ್-2 ಹವಾ ಜೋರಾಗಿದೆ. ಕೋಲಾರದ ಯಶ್ ಅಭಿಮಾನಿಗಳು ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಅಭಿಮಾನಿಗಳು ಮೊಸಾಯಿಕ್ ಶೈಲಿಯ ಯಶ್ ಫೋಟೋ ನಿರ್ಮಿಸಿ ಗಮನ ಸೆಳೆಯುತ್ತಿದ್ದಾರೆ.

First Published Apr 11, 2022, 4:55 PM IST | Last Updated Apr 11, 2022, 4:55 PM IST

ಚಿನ್ನದ ನಾಡು ಕೋಲಾರದಲ್ಲೂ ರಾಕಿಂಗ್ ಸ್ಟಾರ್ ನಟನೆಯ ಕೆಜಿಎಫ್-2 ಹವಾ ಜೋರಾಗಿದೆ. ಅಲ್ಲದೆ ಕೋಲಾರದ ಯಶ್ ಅಭಿಮಾನಿಗಳು ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಅಭಿಮಾನಿಗಳು ಮೊಸಾಯಿಕ್ ಶೈಲಿಯ ಯಶ್ ಫೋಟೋ ನಿರ್ಮಿಸಿ ಗಮನ ಸೆಳೆಯುತ್ತಿದ್ದಾರೆ. ಸುಮಾರು 21 ಸಾವಿರ ಚದರಡಿ ನಿರ್ಮಿಸಿದ್ದು ಇದಕ್ಕೆ ಸುಮಾರು 24 ಸಾವಿರ ಬಣ್ಣದ ಪುಸ್ತಕಗಳನ್ನು ಬಳಸಿಕೊಳ್ಳಲಾಗಿದೆ. ಎಲ್ ಇ ಡಿ ಸ್ಕ್ರೀನ್ ಬಳಸಿ ಡ್ರೋಣ್ ಮೂಲಕ ಭಾವಚಿತ್ರ ಸೆರಿಹಿಡಿಯಲಾಗಿದೆ. ಮೊಸಾಯಿಕ್ ಶೈಲಿಯ ಫೋಟೋ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಅಂದಹಾಗೆ ಬಹುನಿರೀಕ್ಷೆಯ ಕೆಜಿಎಫ್-2 ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದ್ದು ಏಪ್ರಿಲ್ 14ರಂದು ತೆರೆಗೆ ಬರುತ್ತಿದೆ.