)
ಲಂಬಾಣಿ ತಾಂಡಾದ ಮುಗ್ದ ಗಾಯಕಿ ಮಂಗ್ಲಿ: ಕುಮಾರಿ ಸತ್ಯವತಿ ಡ್ರಗ್ಸ್ ರಾಣಿ ಆಗಿದ್ಹೇಗೆ?
ಗಾಯಕಿ ಮಂಗ್ಲಿ ಅಂದಕೂಲೇ ಎಲ್ಲರಿಗೂ ಆಕೆಯ ಮಾದಕ ಧ್ವನಿ ನೆನಪಿಗೆ ಬರುತ್ತೆ. ಮಂಗ್ಲಿ ವಾಯ್ಸ್ನಲ್ಲೊಂದು ಮಾದಕತೆ ಇದೆ. ಈಕೆಯ ಧ್ವನಿಯಲ್ಲಿರೋ ಹಾಡುಗಳನ್ನ ಕೇಳಿದ್ರೆ ನಶೆ ಏರಿದಂತಾಗಿ ತಲೆ ಗಿರ ಗಿರ ಅನ್ನುತ್ತೆ.
ಮಂಗ್ಲಿ.. ಈ ಮಾದಕ ಕಂಠದ ಗಾಯಕಿಗೆ ಈಗ ಮಾದಕ ಲೋಕದ ನಂಟಿರೋದು ಜಗಜ್ಜಾಹೀರಾಗಿದೆ. ಮಂಗಳವಾರ ರಾತ್ರಿ ಹೈದ್ರಾಬಾದ್ನಲ್ಲಿ ನಡೀತಿದ್ದ ಮಂಗ್ಲಿ ಬರ್ತ್ಡೇ ಪಾರ್ಟಿಯಲ್ಲಿ ವಿದೇಶ ಮಧ್ಯ, ಗಾಂಜಾ ಸಿಕ್ಕಿದೆ. ಡ್ರಗ್ಸ್ ಕೂಡ ತರಿಸಲಾಗಿತ್ತಾ ತನಿಖೆ ನಡೀತಾ. ಮತ್ತೊಂದು ತೆಲುಗು ಚಿತ್ರರಂಗಕ್ಕಂಟಿರೋ ಮಾದಕ ನಂಟು ಬಟಾಬಯಲಾಗಿದೆ. ಅಷ್ಟಕ್ಕೂ ಲಂಬಾಣಿ ತಾಂಡಾದ ಮುಗ್ದ ಗಾಯಕಿ ಮಂಗ್ಲಿ ಡ್ರಗ್ಸ್ ರಾಣಿ ಆಹಿದ್ಹೇಗೆ.. ಆ ಕುರಿತ ಎಕ್ಸ್ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ. ಗಾಯಕಿ ಮಂಗ್ಲಿ ಅಂದಕೂಲೇ ಎಲ್ಲರಿಗೂ ಆಕೆಯ ಮಾದಕ ಧ್ವನಿ ನೆನಪಿಗೆ ಬರುತ್ತೆ. ಮಂಗ್ಲಿ ವಾಯ್ಸ್ನಲ್ಲೊಂದು ಮಾದಕತೆ ಇದೆ. ಈಕೆಯ ಧ್ವನಿಯಲ್ಲಿರೋ ಹಾಡುಗಳನ್ನ ಕೇಳಿದ್ರೆ ನಶೆ ಏರಿದಂತಾಗಿ ತಲೆ ಗಿರ ಗಿರ ಅನ್ನುತ್ತೆ.
ಆದ್ರೆ ಮಂಗ್ಲಿ ವಾಯ್ಸ್ನಲ್ಲಷ್ಟೇ ನಶೆಯಿಲ್ಲ. ಈಕೆಗೆ ಬರ್ತ್ಡೇ ಪಾರ್ಟಿನಲ್ಲಿ ಭರ್ತಿ ನಶಾ ಪದಾರ್ಥಗಳು ಸಿಕ್ಕಿವೆ. ಹೌದು ಮಂಗಳವಾರ ರಾತ್ರಿ ಹೈದ್ರಾಬಾದ್ ಹೊರ ವಲಯದಲ್ಲಿರೋ ಖಾಸಗಿ ರೆಸಾರ್ಟ್ನಲ್ಲಿ ಮಂಗ್ಲಿ ಹುಟ್ಟುಹಬ್ಬದ ಪಾರ್ಟಿ ಅರೇಂಜ್ ಆಗಿತ್ತು. ಮಂಗ್ಲಿ ಫ್ಯಾಮಿಲಿ, ಸ್ನೇಹಿತರು, ಚಿತ್ರರಂಗದ ಕೆಲ ಸಂಗೀತಗಾರರು ಸೇರಿದಂತೆ 50ಕ್ಕೂ ಹೆಚ್ಚು ಜನ ಅಲ್ಲಿ ಭಾಗಿಯಾಗಿದ್ರು. ಈ ಪಾರ್ಟಿನಲ್ಲಿ ಡ್ರಗ್ಸ್ ಪೂರೈಕೆಯಾಗ್ತಿದೆ ಅನ್ನೋ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದು, ನಶೇಯಲ್ಲಿ ತೇಲ್ತಾ ಇದ್ದವರನ್ನ ಎಳೆದೊಯ್ದು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ಇದ್ರಲ್ಲಿ ಅನೇಕರು ಗಾಂಜಾ ಸೇವನೆ ಮಾಡಿರೋದು ದೃಡಪಟ್ಟಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.