ಬಾಬಿ ಡಿಯೋಲ್ 'ಜಮಾಲ್ ಕುಡು' ಹಾಡಿನ ಅರ್ಥ ಇದೇ ನೋಡಿ!
ರಣ್ಬೀರ್ ಕಪೂರ್, ರಶ್ಮಿಕಾ, ಬಾಬಿ ಡಿಯೋಲ್ ಅಭಿನಯದ ಅನಿಮಲ್ 600 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಸದ್ದುಮಾಡುತ್ತಿದೆ. ಸಂದೀಪ್ ವಂಗಾ ನಿರ್ದೇಶಿಸಿ ನಿರ್ಮಾಣ ಮಾಡಿದ್ದ ಅನಿಮಲ್ ಸಿನಿಮಾದ ಒಂದು ಹಾಡು ಸಿಕ್ಕಾಪಟ್ಟೆ ಹಿಟ್ಟಾಗಿದೆ. ಈ ಸಿನಿಮಾದಲ್ಲಿ ಬಾಬಿ ಡಿಯೋಲ್ .. ಅಬ್ರಾರ್ ಪಾತ್ರದ ಎಂಟ್ರಿ ಹಾಡು ಇದೀಗ ಯುವ ಜನತೆಯ ಫೇವರಿಟ್ ಆಗಿದೆ.
ಸಂದೀಪ್ ರೆಡ್ಡಿ ವಂಗ ನಿರ್ದೇಶನದ 'ಅನಿಮಲ್' ಸಿನಿಮಾ(Animal movie) ಡಿಸೆಂಬರ್ 1 ರಂದು ಬಿಡುಗಡೆಯಾಗಿದ್ದು, ಹರ್ಷವರ್ಧನ್ ರಾಮೇಶ್ವರ್ ಸಂಗೀತ ಸಂಯೋಜನೆಯ 'ಜಮಾಲ್ ಜಮಾಲೂ ಕುಡು'(Jamal Kudu song ) ಎಂಬ ಬಾಬಿ ಡಿಯೋಲ್(Bobby Deol) ಎಂಟ್ರಿ ಸಾಂಗ್ ಪ್ರೇಕ್ಷಕರ ಮನಸೂರೆಗೊಂಡಿದೆ. ಜಮಾಲ್ ಕುಡು ಹಾಡೇನೋ ತುಂಬಾ ಚೆನ್ನಾಗಿದೆ. ಯಾರನ್ನೇ ಕೇಳಿದರೂ ಸಖತ್ತಾಗಿದೆ ಎಂದು ಹೇಳುತ್ತಾರೆ. ಆದರೆ, ಅದರ ಅರ್ಥವೇನು ಎಂದು ಪ್ರಶ್ನೆ ಮಾಡಿದರೆ ಬಹುತೇಕರು ಉತ್ತರಿಸಲಾರರು. ಅದಕ್ಕೆ ಉತ್ತರ ಇಲ್ಲಿದೆ. ಜಮಾಲ್ ಕುಡು ಎಂಬುದು ಒಂದು ಇರಾನಿಯನ್ ಹಾಡಾಗಿದೆ. ಸಂಗೀತ ಸಂಯೋಜಕ ಹರ್ಷವರ್ಧನ್ ರಾಮೇಶ್ವರ್ ಅವರು ಅನಿಮಲ್ ಚಿತ್ರದಲ್ಲಿ ಈ ಹಾಡಿಗೆ ಆಧುನಿಕ ಸ್ಪರ್ಶ ನೀಡಿದ್ದಾರೆ. ಮೂಲತಃ ಈ ಹಾಡನ್ನು ಇರಾನ್‌ನ ಖತರೆಹ್ ಗುಂಪು ಸಂಯೋಜನೆ ಮಾಡಿದೆ. 1950ರ ದಶಕದಲ್ಲಿ ಖರಾಜೆಮಿ ಗರ್ಲ್ಸ್ ಹೈಸ್ಕೂಲ್‌ನಲ್ಲಿ ಮೊದಲ ಬಾರಿಗೆ ಈ ಹಾಡನ್ನು ಹಾಡಲಾಯಿತು. ಅಂದಹಾಗೆ ಜಮಾಲ್ ಜಮಾಲೂ ಕುಡು ಹಾಡು ಪ್ರಸಿದ್ಧ ಇರಾನಿನ ಕವಿ ಬಿಜನ್ ಸಮಂದರ್ ಬರೆದ ಕವಿತೆಯ ರೂಪಾಂತರವಾಗಿದೆ. ಅನಿಮಲ್ ಸಿನಿಮಾದಲ್ಲಿ ಈ ಪ್ರಸಿದ್ಧವಾದ ಬೆನ್ನಲ್ಲೇ ಹಾಡಿನ ಹಳೆಯ ವರ್ಷನ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಮತ್ತೆ ಶೇರ್ ಮಾಡಲಾಗುತ್ತಿದೆ. ಜಮಾಲ್ ಜಮಾಲೇಕ್ ಜಮಾಲೂ ಜಮಲ್ ಕುಡು ಎಂದು ಆರಂಭವಾಗುವ ಹಾಡಿನ ಮೊದಲ ಸಾಲಿನ ಅರ್ಥವೇನೆಂದರೆ, ಓ ನನ್ನ ಪ್ರೀತಿಯೇ, ನನ್ನ ಪ್ರೀತಿಯೇ, ನನ್ನ ಸಿಹಿಯಾದ ಪ್ರೀತಿಯೇ! ಎಂಬುದಾಗಿದೆ.
ಇದನ್ನೂ ವೀಕ್ಷಿಸಿ: ಕಾಟೇರನ 1 ಸಾವಿರ ರುಪಾಯಿ ಟಿಕೆಟ್‌ಗೆ ಭಾರೀ ಡಿಮ್ಯಾಂಡ್! ಪೇಯ್ಡ್ ಶೋಗಳು ಸೋಲ್ಡ್ ಔಟ್!