ಸನ್ನಿಗಿಂತ ನಾನೇನ್ ಕಮ್ಮಿ? ಸನ್ನಿಗೆ ಸಿಕ್ಕ ಗೌರವ ತನಗ್ಯಾಕಿಲ್ಲ? ಬೇಸರ ಹೊರಹಾಕಿದ ಶಕೀಲಾ!

ಚೆನ್ನೈನಲ್ಲಿ ನೆಲೆಸಿರೋ ಶಕೀಲಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಮಗಿರೋ ಬೇಸರ ಹೊರಹಾಕಿದ್ದಾರೆ. ಏನದು ಶಕೀಲಾ ಬೇಸರ..? ಈ ಸ್ಟೋರಿ ನೋಡಿ.

Share this Video
  • FB
  • Linkdin
  • Whatsapp

1990 ದಶಕದಲ್ಲಿ ಮಲಯಾಳಂ ಸಿನಿ ಇಂಡಸ್ಟ್ರಿಯನ್ನ ತನ್ನ ಮಾದಕ ಸಿನಿಮಾಗಳ ಮೂಲಕ ರೂಲ್ ಮಾಡಿದ ನಟಿ ಶಕೀಲಾ. ಸದ್ಯ ಚೆನ್ನೈನಲ್ಲಿ ನೆಲೆಸಿರೋ ಶಕೀಲಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಮಗಿರೋ ಬೇಸರ ಹೊರಹಾಕಿದ್ದಾರೆ. ಏನದು ಶಕೀಲಾ ಬೇಸರ..? ಈ ಸ್ಟೋರಿ ನೋಡಿ. ಮಲಯಾಳಂ ಇಂಡಸ್ಟ್ರಿಯ ಮಾದಕ ತಾರೆ ಶಕೀಲಾ ಯಾರಿಗೆ ತಾನೇ ಗೊತ್ತಿಲ್ಲ. 1990ರ ದಶಕದಲ್ಲಿ ಕೇರಳದಲ್ಲಿ ಮಲಯಾಳಂ ಸೂಪರ್ ಸ್ಟಾರ್​ಗಳಾದ ಮಮ್ಮುಟ್ಟಿ, ಮೋಹನ್​ಲಾಲ್​ಗಿಂತಲೂ ಫೇಮಸ್ ಆಗಿದ್ರು ಶಕೀಲಾ. ಆಗೆಲ್ಲಾ ಮಲಯಾಳಂ ಇಂಡಸ್ಟ್ರಿ ಅಂದ್ರೆ ಒನ್ ಌಂಡ್ ಓನ್ಲಿ ಶಕೀಲಾ ನಟಿಸಿದ ವಯಸ್ಕರ ಚಿತ್ರಗಳು ಅನ್ನುವಂತೆ ಆಗಿತ್ತು. ಶಕೀಲಾ ಕೆಲವು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ರು. ಬಿಗ್ ಬಾಸ್ ಕನ್ನಡ ಸೀಸನ್​-2 ನಲ್ಲಿ ಸ್ಪರ್ಧಿ ಕೂಡ ಆಗಿದ್ರು. ಇದೀಗ ಶಕೀಲಾ ಚೆನ್ನೈನಲ್ಲಿ ನೆಲೆಸಿದ್ದಾರೆ. ತನ್ನದೇ ಯುಟ್ಯೂಬ್ ಚಾನೆಲ್ ಮಾಡಿಕೊಂಡಿರೋ ಶಕೀಲಾ ವಿವಾದಿತ ವ್ಯಕ್ತಿಗಳನ್ನ ಸಂದರ್ಶನ ಮಾಡ್ತಾ ಇರ್ತಾರೆ.

ಜೊತೆಗೆ ಕೆಲ ಸಂದರ್ಶನಕ್ಕೆ ಹೋಗಿ ತನ್ನ ಬದುಕಿನ ಕಥೆಯನ್ನೂ ವರ್ಣರಂಜಿತವಾಗಿ ಹೇಳ್ತಾ ಇರ್ತಾರೆ. ಇತ್ತೀಚಿಗೆ ತಮಿಳು ವಾಹಿನಿಯೊಂದಕ್ಕೆ ಕೊಟ್ಟಿರುವ ಸಂದರ್ಶನದಲ್ಲಿ ಶಕೀಲಾ , ಸನ್ನಿ ಲಿಯೋನ್ ಬಗ್ಗೆ ಮಾತನಾಡಿದ್ದಾರೆ. ಸನ್ನಿ ನೀಲಿ ಚಿತ್ರಗಳಲ್ಲಿ ನಟಿಸಿದಾಕೆ, ಆದ್ರೆ ಅದನ್ನ ತೊರೆದು ಈಗ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ತನ್ನ ಸಮಾಜ ಸೇವಾ ಕಾರ್ಯಗಳ ಮೂಲಕ ಜನರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾರೆ. ಸನ್ನಿಯ ಹಳೆಯ ದಿನಗಳನ್ನ ಮರೆತು ಜನ ಆಕೆಯನ್ನ ಗೌರವದಿಂದ ನೋಡ್ತಾ ಇದ್ದಾರೆ. ಆದ್ರೆ ತನ್ನನ್ನ ಮಾತ್ರ ಈಗಲೂ ಕೆಟ್ಟ ದೃಷ್ಟಿಯಿಂದಲೇ ನೋಡ್ತಾರೆ ಅಂತ ಬೇಸರ ಹಂಚಿಕೊಂಡಿದ್ದಾರೆ ಶಕೀಲಾ. ಶಕೀಲಾ ಹೀಗೆ ಬೇಸರ ಮಾಡಿಕೊಂಡಿದರನ್ನ ನೋಡಿ ಇವರ ಫ್ಯಾನ್ಸ್ ಕೂಡ ಬೇಸರಿಸಿಕೊಂಡಿದ್ದಾರೆ.. ಸನ್ನಿಗಿಂತ ಶಕೀಲಾ ಏನ್ ಕಮ್ಮಿ ಅಂತಿದ್ದಾರೆ ಆ ಕಾಲದ ಮಲಯಾಳಿ ಸಿನಿರಸಿಕರು. 

Related Video