ಆಂಧ್ರದಲ್ಲಿ ರಿಷಬ್ ಶೆಟ್ಟಿಗೆ ಎಚ್ಚರಿಕೆಯ ಗಂಟೆ: ಕಾಂತಾರ ಆಟಕ್ಕೆ ಡಿಸಿಎಂ ಫುಲ್ ಸಪೋರ್ಟು!

ಆಂಧ್ರದಲ್ಲಿ ಕಾಂತಾರಕ್ಕೆ ಎಚ್ಚರಿಕೆಯ ಗಂಟೆಯೊಂದು ಮೊಳಗಿತ್ತು. ಆ ಗಂಟೆ ಸದ್ದನ್ನ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ತಣ್ಣಗಾಗಿಸಿದ್ದಾರೆ. ಕರ್ನಾಟಕದ ಪ್ರೈಡ್​ ಕಾಂತಾರ ಚಾಪ್ಟರ್​ ಒನ್​ ಸಿನಿಮಾ ಸಪ್ತ ಸಾಗರದಾಚೆಗೂ ದಾಟಿದೆ. ಕಾಂತಾರ ತೆರೆಗೆ ಬರಲಿಕ್ಕೆ ಇನ್ನೊಂದು ದಿನ ಮಾತ್ರ ಬಾಕಿ.

Share this Video
  • FB
  • Linkdin
  • Whatsapp

ದೇಶಾದ್ಯಂತ ಕಾಂತಾರ ಚಾಪ್ಟರ್​ ಸಿನಿಮಾ ನೋಡೋ ಕನಸು ಕಟ್ಟೆ ಒಡೆದಿದೆ. ಈ ಸಿನಿಮಾಗಾಗಿ ಜನ ಮುಗಿ ಬಿದ್ದು ಟಿಕೆಟ್​ ಬುಕ್ಕಿಂಗ್ ಮಾಡುತ್ತಿದ್ದಾರೆ. ಒಟ್ಟು ಏಳು ಭಾಷೆಯಲ್ಲಿ ತೆರೆಗೆ ಬರುತ್ತಿರೋ ಕಾಂತಾರ ಚಾಪ್ಟರ್​ ಇನ್ ಸಿನಿಮಾ ಲಂಡನ್​​ನಲ್ಲಿ ದೊಡ್ಡ ಕ್ರೇಜ್ ಸೃಷ್ಟಿಸಿಬಿಟ್ಟಿದೆ. ಈ ಕಡೆ ಆಂಧ್ರದಲ್ಲಿ ಕಾಂತಾರಕ್ಕೆ ಎಚ್ಚರಿಕೆಯ ಗಂಟೆಯೊಂದು ಮೊಳಗಿತ್ತು. ಆ ಗಂಟೆ ಸದ್ದನ್ನ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ತಣ್ಣಗಾಗಿಸಿದ್ದಾರೆ. ಕರ್ನಾಟಕದ ಪ್ರೈಡ್​ ಕಾಂತಾರ ಚಾಪ್ಟರ್​ ಒನ್​ ಸಿನಿಮಾ ಸಪ್ತ ಸಾಗರದಾಚೆಗೂ ದಾಟಿದೆ. ಕಾಂತಾರ ಚಾಪ್ಟರ್ -1 ತೆರೆಗೆ ಬರಲಿಕ್ಕೆ ಇನ್ನೊಂದು ದಿನ ಮಾತ್ರ ಬಾಕಿ. ಪ್ರಚಾರ ಮಾಡದೇ ಹೋದ್ರೂ ಸೈಲೆಂಟ್ ಆಗೇ ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗ್ತಿದೆ. ಅದ್ರಲ್ಲೂ 7 ಭಾಷೆಗಳಲ್ಲಿ ಬರ್ತಾ ಇರೋ ಈ ಸಿನಿಮಾ 30 ದೇಶಗಳಲ್ಲಿ ತೆರೆಕಾಣಲಿದೆ. ಅದರಲ್ಲೊಂದು ಲಂಡನ್​.

ಯೆಸ್ ಕಾಂತಾರ ಚಾಪ್ಟರ್-1 ತೆರೆಗೆ ಬರ್ತಾ ಇರೋದು ಬರೊಬ್ಬರಿ 30 ದೇಶಗಳಲ್ಲಿ. 6 ಭಾರತೀಯ ಭಾಷೆಗಳ ಜೊತೆಗೆ ಇಂಗ್ಲೀಷ್ ಭಾಷೆಯಲ್ಲೂ ಈ ಸಿನಿಮಾ ಸಿದ್ಧವಾಗಿದೆ. ರಿಷಬ್ ಶೆಟ್ಟಿ ಈ ಭಾರಿ ಅದೇನ್ ಮಾಡಿದ್ದಾರೆ ಅಂತ ನೋಡೋದಕ್ಕೆ ಕೌಂಟ್​ ಡೌನ್ ಸ್ಟಾರ್ಟ್ ಅಗಿದೆ. ಭಾರತ ಮಾತ್ರವಲ್ಲ, ನಮ್ಮ ಕನ್ನಡದ ಸಿನಿಮಾವನ್ನ ವೆಲ್​​ಕಮ್​ ಮಾಡೋದಕ್ಕೆ ಲಂಡನ್ ಗ್ರ್ಯಾಂಡ್ ಆಗಿ ಸಜ್ಜಾಗಿದೆ. ಯುಕೆ ದೇಶಗಳಲ್ಲಿ ಕನ್ನಡದ ಕಾಂತಾರ ಕ್ರೇಜ್ ಹೇಗಿದೆ ಅಂದ್ರೆ ಇದೇ ಮೊದಲ ಭಾರಿಗೆ 400ಕ್ಕು ಹಚ್ಚಿನ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗ್ತಾ ಇದೆ. ಅದರಲ್ಲಿ ಕನ್ನಡದ ವರ್ಷನ್ 100 ಥಿಯೇಟರ್​ನಲ್ಲಿ ಬಿಡುಗಡೆ ಆಗ್ತಾ ಇದ್ದು, ಇನ್ನುಳಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರ್ತಾ ಇದೆ. ಅಷ್ಟೆ ಅಲ್ಲ ಲಂಡನ್ ಒಂದರಲ್ಲೇ ಬರೋಬ್ಬರಿ 180 ಸ್ಕ್ರೀನ್​ಗಳು ಕಾಂತಾರಕ್ಕೆ ಸಿಕ್ಕಿದ್ದು ರೆಕಾರ್ಡ್​​​​​​​​ ಬರೆದಿದೆ.

ಯುಕೆ ದೇಶಗಳಲ್ಲಿ ಕಾಂತಾರ ರಿಲೀಸ್ ಮಾಡುತ್ತಿರೋ ಲಾಫೀಂಗ್ ವಾಟರ್​ ಪ್ರೊಡಕ್ಷನ್​​ ಮಾಲೀಕ ಸುನೀಲ್ ಕುಮಾರ್ ಲಂಡನ್​​ನಲ್ಲಿ ಕಾಂತಾರ ಚಾಪ್ಟರ್​ ಒನ್ ಸಿನಿಮಾದ ಅತಿ ದೊಡ್ಡ ಪ್ರೀಮಿಯರ್ ಶೋ ಮಾಡುತ್ತಿದ್ದಾರೆ. ಇಂದು ಸಂಜೆ ಏಳು ಗಂಟೆಗೆ ಈ ಪ್ರೀಮಿಯರ್ ನಡೆಯುತ್ತೆ. ಲಂಡನ್​​ನ ಮೇಯರ್​ಗಳು, ಸಚಿವರುಗಳು, ಅಲ್ಲಿನ ಸೆಲೆಬ್ರಿಟಿಗಳು ಈ ಸಿನಿಮಾ ನೋಡುತ್ತಿದ್ದಾರೆ. ಅಷ್ಟೆ ಅಲ್ಲ ಪುನೀತ್ ರಾಜ್​ ಕುಮಾರ್ ಪತ್ನಿ ಅಶ್ವಿನಿ ಪುನೀತ್ ಕೂಡ ಲಂಡನ್​​ನಲ್ಲಿದ್ದು, ಪ್ರೀಮಿಯರ್​​ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಏನ್ ಗೊತ್ತಾ..? ಯುಕೆ ದೇಶಗಳಲ್ಲಿ ಕನ್ನಡದ ಯಾವ ಸಿನಿಮಾವೂ 400 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿಲ್ಲ. ಅದು ಕೆಜಿಎಫ್​ ಸೀರಿಸ್ ಆಗಿರಲಿ, ಕಾಂತಾರ ಆಗಿರಲಿ ಸಲಾರ್​ ಸಿನಿಮಾವೇ ಆಗ್ಲಿ 35 ರಿಂದ 40 ಚಿತ್ರಮಂದಿರಗಳು ಮಾತ್ರ ಸಿಗ್ತಾ ಇದ್ವು.

ಆದ್ರೆ ಕಾಂತಾರ ಚಾಪ್ಟರ್​ ಒನ್ ಸಿನಿಮಾ ಆ ಎಲ್ಲಾ ರೆಕಾರ್ಡ್​ಗಳನ್ನ ಬಗ್ಗು ಬಡಿದು 400ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ತೆಲುಗು ನಾಡು ಸಿನಿಮಾ ಜಗತ್ತಿನ ಬಾಕ್ಸಾಫೀಸ್ ಹಬ್​.. ಬಾಲಿವುಡ್​ ಮಂದಿಗೆ ನಾರ್ತ್​ ಇಂಡಿಯಾ ಹೇಗೆ ಹಣ ತಂದುಕೊಡುತ್ತೋ ಹಾಗೆ ತೆಲುಗು ನಾಡು ಸೌತ್​ ಸಿನಿ ಜಗತ್ತಿಗೆ ಹಣದ ಮೂಲ. ಹೀಗಾಗೆ ಕಾಂತಾರ ಸಿನಿಮಾ ತೆಲುಗು ಗೆ ಡಬ್ ಆಗಿ ತೆಲುಗು ನಾಡಿನಾಧ್ಯಂತ ಬಿಡುಗಡೆ ಆಗ್ತಾ ಇದೆ. ಆದ್ರೆ ಈ ಸಿನಿಮಾವನ್ನ ಬಾಯ್​ಕಾಟ್ ಮಾಡಬೇಕು ಅಂತ ಸಣ್ಣದೊಂದು ಅಭಿಯಾನ ಟಾಲಿವುಡ್​​ನಲ್ಲಿ ಎದ್ದಿತ್ತು. ಬಟ್​ಅಭಿಯಾನ ಕಣ್ಣು ಬಿಡೋದ್ರ ಒಳಗೆ ಚಿವುಟಿ ಹಾಕಿದ್ದಾರೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್.. ಕಾಂತಾರ ಸಿನಿಮಾ ಬಿಡುಗಡೆಗೆ ಆಂಧ್ರದಲ್ಲಿ ಅಡ್ಡಪಡಿಸಬೇಡಿ ಅಂತ ತಮ್ಮ ನಾಡಿನ ಜನತೆಗೆ ಕೇಳಿದ್ದಾರೆ. ಹೀಗಾಗಿ ಆಂಧ್ರದಲ್ಲೂ ಕಾಂತಾರ ಹವಾ ದೊಡ್ಡದಾಗೆ ಹಬ್ಬಿದೆ.

Related Video