
ಹೃತಿಕ್ ರೋಷನ್ ಆ್ಯಂಡ್ NTR ಡ್ಯಾನ್ಸ್ ವಾರ್, ನಾಟು ನಾಟು ನೆನಪಿಸಿದ ವಾರ್-2 ಸಾಂಗ್
ಹೃತಿಕ್ ರೋಷನ್ ಮತ್ತು ಜೂ.ಎನ್.ಟಿ.ಆರ್ ನಟನೆಯ ವಾರ್-2 ಚಿತ್ರದ 'ಜನಾಬ್-ಎ-ಆಲಿ' ಹಾಡು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಇಬ್ಬರು ನಟರ ನಡುವಿನ ಡ್ಯಾನ್ಸ್ ಪೈಪೋಟಿ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಆಕ್ಷನ್ ಜೊತೆಗೆ ಡ್ಯಾನ್ಸ್ ಕೂಡ ಪ್ರಮುಖ ಆಕರ್ಷಣೆಯಾಗಲಿದೆ ಎಂಬುದನ್ನು ಈ ಹಾಡು ಸೂಚಿಸುತ್ತದೆ.
ಹೃತಿಕ್ ರೋಷನ್ ಆ್ಯಂಡ್ ಎನ್.ಟಿ.ಆರ್ ನಟನೆಯ ಬಹುನಿರೀಕ್ಷೆ ವಾರ್-2 ಮೂವಿ ರಿಲೀಸ್ಗೆ ಇನ್ನು ಕೆಲವೇ ದಿನ ಬಾಕಿ. ಸದ್ಯ ಈ ಸಿನಿಮಾದ ಡ್ಯಾನ್ಸ್ ನಂಬರ್ 'ಜನಾಬ್-ಎ-ಆಲಿ' ರಿಲೀಸ್ ಆಗಿದ್ದು, ವಾರ್ ಮೂವಿನಲ್ಲಿ ಬರೀ ವಾರ್ ಅಷ್ಟೇ ಅಲ್ಲ ಡ್ಯಾನ್ಸ್ ದಂಗಲ್ ಕೂಡ ಇರುತ್ತೆ ಅನ್ನೋ ಸೂಚನೆ ಕೊಟ್ಟಿದೆ.
ವಾರ್-2 ಮೂವಿ ರಿಲೀಸ್ಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಮತ್ತು ಸೌತ್ನ ಯಂಗ್ ಟೈಗರ್ ಜೂ.ಎನ್.ಟಿ.ಆರ್ ಡೆಡ್ಲಿ ಕಾಂಬಿನೇಷನ್ ಇರೋ ಸಿನಿಮಾ ಇದು. ಈಗಾಗ್ಲೇ ರಿಲೀಸ್ ಆಗಿರೊ ಟ್ರೈಲರ್ ಸಾಂಗ್ಸ್ ಚಿತ್ರದ ಕುರಿತ ನಿರೀಕ್ಷೆಯನ್ನ ಹೆಚ್ಚಿಸಿವೆ. ಮತ್ತೀಗ 'ಜನಾಬ್-ಎ-ಆಲಿ' ಅನ್ನೋ ಡ್ಯಾನ್ಸ್ ನಂಬರ್ ರಿಲೀಸ್ ಆಗಿದ್ದು ಫುಲ್ ಟ್ರೆಂಡ್ ಸೃಷ್ಟಿ ಮಾಡಿದೆ.
ಹೃತಿಕ್ ರೋಷನ್ ಡ್ಯಾನ್ಸಿಂಗ್ ಗಾಡ್ ಅಂತಾನೇ ಕರೆಸಿಕೊಂಡವರು. ಇನ್ನೂ ಎನ್.ಟಿ.ಆರ್ ನಾಟು ನಾಟು ಅಂತ ಕುಣಿದು ದೇಶವನ್ನೇ ಕುಣಿಸಿದವರು. ಸೋ ಈ ಇಬ್ಬರೂ ಡ್ಯಾನ್ಸ್ನಲ್ಲಿ ದೈತ್ಯರೇ. ಈ ಇಬ್ಬರ ನಡುವೆ ಬರೀ ಌಕ್ಷನ್ನಲ್ಲಷ್ಟೇ ಅಲ್ಲ ಡ್ಯಾನ್ಸ್ನಲ್ಲೂ ಪೈಪೋಟಿ ನಡೆದಿದೆ.
ಸದ್ಯ ಈ ಸಾಂಗ್ ಟೀಸರ್ನಲ್ಲಿ ಇಬ್ಬರ ಡ್ಯಾನ್ಸ್ ಕೂಡ ಹುಬ್ಬೇರಿಸುವಂತೆ ಇದೆ. ಇದನ್ನ ನೋಡಿದ ಫ್ಯಾನ್ಸ್ ಯಾರು ಬೆಸ್ಟ್ ಅಂತ ಪೈಪೋಟಿಗೆ ಬಿದ್ದು ಕಾಮೆಂಟ್ ಮಾಡ್ತಾ ಇದ್ದಾರೆ. ಈ ಸಾಂಗ್ ಟ್ರೆಂಡಿಂಗ್ನಲ್ಲಿದ್ದು, ವಾರ್-2 ನಲ್ಲಿ ಬರೀ ವಾರ್ ಅಲ್ಲ ಡ್ಯಾನ್ಸ್ ವಾರ್ ಕೂಡ ಇದೆ ಅನ್ನೋ ಸೂಚನೆ ನೀಡಿದೆ.