ಸೌತ್​​ನಲ್ಲಿ ಸಿದ್ದವಾಗಲಿದೆ ಮತ್ತೊಂದು ರಾಮಾಯಣ: ಸೌತ್ ರಾಮ, ಬಾಲಿವುಡ್ ಸೀತೆ, ಉಲ್ಟಾಪಲ್ಟಾ ಕತೆ

ನಾರ್ತ್ ರಾಮನಿಗೆ ಸೌತ್ ಸೀತೆಯಾದ್ರೆ, ಈ ರಾಮಾಯಣದಲ್ಲಿ ಸೌತ್ ರಾಮನಿಗೆ ಬಾಲಿವುಡ್ ಸೀತೆ ಜೊತೆಯಾಗಲಿದ್ದಾರೆ. ಇನ್ನೂ ಈ ಸಿನಿಮಾದಲ್ಲಿ ಮೋಹನ್ ಬಾಬು ರಾವಣನ ಪಾತ್ರ ಮಾಡ್ತಾರಂತೆ.

Share this Video
  • FB
  • Linkdin
  • Whatsapp

ಬಾಲಿವುಡ್ ಟೀಂ ಜೊತೆ ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ವರ್ಲ್ಡ್ ರಾಮಾಯಣ ನಿರ್ಮಿಸ್ತಾ ಇರೋ ವಿಷ್ಯ ಗೊತ್ತೇ ಇದೆ. ಅದರ ಜೊತೆಗೆ ಈಗ ಸೌತ್​ನಲ್ಲಿ ಮತ್ತೊಂದು ರಾಮಾಯಣ ನಿರ್ಮಿಸೋದಕ್ಕೆ ತಂಡವೊಂದು ಸಜ್ಜಾಗಿದೆ. ಈ ಹೊಸ ರಾಮಾಯಣದಲ್ಲಿ ಯಾರೆಲ್ಲಾ ಲೀಡ್ ರೋಲ್ ಮಾಡ್ತಾರೆ ಗೊತ್ತಾ..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ. ನಿತೇಶ್ ತಿವಾರಿ ನಿರ್ದೇಶನದಲ್ಲಿ ಎರಡು ಭಾಗಗಳಲ್ಲಿ ರಾಮಾಯಣ ಪ್ರಾಜೆಕ್ಟ್ ಬರ್ತಿರೋ ವಿಷ್ಯ ಗೊತ್ತೇ ಇದೆ. ಈ ಸಿನಿಮಾದಲ್ಲಿ ರಣಬೀರ್​ ಕಪೂರ್ ರಾಮನಾದ್ರೆ, ಸಾಯಿ ಪಲ್ಲವಿ ಸೀತೆ ಪಾತ್ರ ಮಾಡ್ತಾ ಇದ್ದಾರೆ. ಮತ್ತು ನಮ್ಮ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಮಿಂಚ್ತಾ ಇದ್ದಾರೆ. ಇತ್ತೀಚಿಗೆ ಈ ರಾಮಾಯಣ ಮೂವಿಯ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿ ಎಲ್ಲರ ಮನಸು ಗೆದ್ದಿತ್ತು.

ಮತ್ತೀಗ ಸೌತ್​ನಲ್ಲಿ ಮತ್ತೊಂದು ರಾಮಾಯಣ ಪ್ರಾಜೆಕ್ಟ್ ಬರ್ತಾ ಇದೆ. ಇತ್ತೀಚಿಗೆ ಕಣ್ಣಪ್ಪ ಸಿನಿಮಾ ಮಾಡಿ ಸಕ್ಸಸ್ ಕಂಡಿರೋ ವಿಷ್ಣು ಮಂಚು ರಾಮಾಯಣ ಸಿನಿಮಾ ನಿರ್ಮಿಸೋದಕ್ಕೆ ಸಿದ್ದವಾಗಿದ್ದಾರೆ. ಬಾಲಿವುಡ್ ರಾಮಾಯಣದಲ್ಲಿ ರಣ್​ಬೀರ್ ರಾಮನಾಗಿ ಕಾಣಿಸಿಕೊಂಡ್ರೆ, ವಿಷ್ಣು ಮಂಚು ನಿರ್ಮಾಣದ ರಾಮಾಯಣದಲ್ಲಿ ಆಲಿಯಾ ಭಟ್ ಸೀತೆಯಾಗಲಿದ್ದಾರಂತೆ. ಗಂಡ ಹೆಂಡತಿ ಇಬ್ಬರೂ ರಾಮ-ಸೀತೆ ಪಾತ್ರ ಮಾಡ್ತಾ ಇದ್ದಾರೆ. ಆದ್ರೆ ಸಿನಿಮಾಗಳು ಮಾತ್ರ ಬೇರೆ ಬೇರೆ. ಹೌದು ವಿಷ್ಣು ಮಂಚು ನಿರ್ಮಾಣದ ರಾಮಾಯಣದಲ್ಲಿ ತಮಿಳು ನಟ ಸೂರ್ಯ ರಾಮನ ಪಾತ್ರ ಮಾಡಲಿದ್ದಾರಂತೆ. ಆಲಿಯಾ ಸೀತೆಯಾಗ್ತಾ ಇದ್ದಾರೆ. ಬಾಲಿವುಡ್ ರಾಮಾಯಣದಲ್ಲಿ ಬಾಲಿವುಡ್ ರಾಮ ಇದ್ರೆ, ಸೌತ್ ಬ್ಯೂಟಿ ಸಾಯಿ ಪಲ್ಲವಿ ಸೀತೆ ಪಾತ್ರ ಮಾಡ್ತಿದ್ದಾರೆ.

ಅಲ್ಲಿಗೆ ಆ ರಾಮಾಯಣದಲ್ಲಿ ನಾರ್ತ್ ರಾಮನಿಗೆ ಸೌತ್ ಸೀತೆಯಾದ್ರೆ, ಈ ರಾಮಾಯಣದಲ್ಲಿ ಸೌತ್ ರಾಮನಿಗೆ ಬಾಲಿವುಡ್ ಸೀತೆ ಜೊತೆಯಾಗಲಿದ್ದಾರೆ. ಇನ್ನೂ ಈ ಸಿನಿಮಾದಲ್ಲಿ ಮೋಹನ್ ಬಾಬು ರಾವಣನ ಪಾತ್ರ ಮಾಡ್ತಾರಂತೆ. ಸದ್ಯ ಕಣ್ಣಪ್ಪ ಸಿನಿಮಾ ಸಕ್ಸಸ್ ಖುಷಿಯಲ್ಲಿ ರಾಮಾಯಣ ಪ್ರಾಜೆಕ್ಟ್ ಅನೌನ್ಸ್ ಮಾಡಿದ್ದಾರೆ ವಿಷ್ಣು ಮಂಚು. ಇತ್ತೀಚಿಗೆ ಸಿನಿದುನಿಯಾ ಮತ್ತೆ ರಾಮಾಯಣದ ಹಿಂದೆ ಬಿದ್ದಿದೆ. 2023ರಲ್ಲಿ ಪ್ರಭಾಸ್ ನಟನೆಯಲ್ಲಿ ರಾಮಾಯಣ ಆಧರಿಸಿ ಆದಿಪುರುಷ್ ಸಿನಿಮಾ ಬಂದಿತ್ತು. ರಣ್​ಬೀರ್, ಸಾಯಿ ಪಲ್ಲವಿ, ಯಶ್ ನಟನೆಯಲ್ಲಿ ಪ್ಯಾನ್ ವರ್ಲ್ಡ್ ರಾಮಾಯಣ ಮೂಡಿಬರ್ತಿದೆ. ಮತ್ತೀಗ ಮತ್ತೊಂದು ರಾಮಾಯಣ ಕೂಡ ಶುರುವಾಗಿದೆ. ಒಟ್ಟಾರೆ ರಾಮಾಯಣ ಒಂದು ರಾಮ, ಸೀತೆ ಹಲವರು ಅನ್ನೋ ತರಹ ಆಗಿದೆ.

Related Video