ಮುಂಬೈ ಏರ್ಪೋರ್ಟ್‌ಲ್ಲಿ ಕಾಣಿಸಿಕೊಂಡ ಸುದೀಪ್; ಸ್ಟೈಲಿಶ್ ಕಿಚ್ಚನ ವಿಡಿಯೋ ವೈರಲ್

ಕಿಚ್ಚ ಸುದೀಪ್ ಮುಂಬೈಗೆ ತೆರಳಿದ್ದಾರೆ. ಮುಬೈ ಪ್ರಚಾರದಲ್ಲಿ ಭಾಗಿಯಾಗಲಿರುವ ಅಭಿನಯ ಚಕ್ರವರ್ತಿ ಮುಂಬೈ ಏರ್ಪೋರ್ಟ್‌ನಲ್ಲಿ ಪಾಪರಾಜಿಗಳ ಕ್ಯಾಮರಾಗೆ ಸೆರೆಯಾಗಿದ್ದಾರೆ. ಪತ್ನಿ ಪ್ರಿಯಾ ಜೊತೆ ಮುಂಬೈ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಪಾಪರಾಜಿಗಳ ಕಡೆ ಬೀಸಿ ವಿಕ್ರಾಂತ್ ರೋಣ ಸಿನಿಮಾ ಜುಲೈ 28ರಂದು ರಿಲೀಸ್ ಆಗುತ್ತಿದೆ ಎಂದು ಹೇಳಿದರು.

Share this Video
  • FB
  • Linkdin
  • Whatsapp

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ವಿಕ್ರಾಂತ್ ರೋಣ ಸಿನಿಮಾದ ರಿಲೀಸ್ ‌ನ ಬ್ಯುಸಿಯಲ್ಲಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಸುದೀಪ್ ಅನೇಕ ರಾಜ್ಯಗಳಿಗೆ ತೆರಳಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಇದೀಗ ಕಿಚ್ಚ ಮುಂಬೈಗೆ ತೆರಳಿದ್ದಾರೆ. ಮುಬೈ ಪ್ರಚಾರದಲ್ಲಿ ಭಾಗಿಯಾಗಲಿರುವ ಅಭಿನಯ ಚಕ್ರವರ್ತಿ ಮುಂಬೈ ಏರ್ಪೋರ್ಟ್‌ನಲ್ಲಿ ಪಾಪರಾಜಿಗಳ ಕ್ಯಾಮರಾಗೆ ಸೆರೆಯಾಗಿದ್ದಾರೆ. ಪತ್ನಿ ಪ್ರಿಯಾ ಜೊತೆ ಮುಂಬೈ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಪಾಪರಾಜಿಗಳ ಕಡೆ ಬೀಸಿ ವಿಕ್ರಾಂತ್ ರೋಣ ಸಿನಿಮಾ ಜುಲೈ 28ರಂದು ರಿಲೀಸ್ ಆಗುತ್ತಿದೆ ಎಂದು ಹೇಳಿದರು. ಸ್ಟೈಲಿಶ್ ಕಿಚ್ಚ ಬ್ಲ್ಯಾಕ್ ಡೆನಿಮ್ ಮತ್ತು ಬಿಳಿ ಟೀ ಶರ್ಟ್ ಮತ್ತು ಕೋಟ್ ಧರಿಸಿದ್ದಾರೆ. ಮಾಸ್ಕ್ ಧರಿಸಿ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿರುವ ಸುದೀಪ್ ಅವರು ಬಳಿಕ ಮಾಸ್ಕ್ ತೆಗೆದು ಕ್ಯಾಮರಾಗೆ ಪೋಸ್ ನೀಡಿದರು. ಸುದೀಪ್, ಜಾಕ್ವೆಲಿನ್ ಫರ್ನಾಂಡಿಸ್, ನಿರೂಪ್ ಭಂಡಾರಿ, ನೀತಾ ಅಶೋಕ್ ನಟನೆಯ ವಿಕ್ರಾಂತ್ ರೋಣ ಇದೇ ತಿಂಗಳು ಜುಲೈ 28ಕ್ಕೆ ರಿಲೀಸ್ ಆಗುತ್ತಿದೆ.


Related Video