Rashmika Mandanna: ಮುಂಬೈನಲ್ಲಿ ವಿಜಯ್ ದೇವರಕೊಂಡ ಜೊತೆ ಕಾಣಿಸಿಕೊಂಡ ಶ್ರೀವಲ್ಲಿ

'ಗೀತ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಮೋಡಿ ಮಾಡಿದ್ದಾರೆ. ಇದೀಗ ರಶ್ಮಿಕಾ ಮುಂಬೈನ ರೆಸ್ಟೋರೆಂಟ್​ವೊಂದರಲ್ಲಿ ವಿಜಯ್ ಜೊತೆ ಕಾಣಿಸಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

'ಗೀತ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದ ವಿಜಯ್ ದೇವರಕೊಂಡ (Vijay Devarakonda) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಜೋಡಿ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಮೋಡಿ ಮಾಡಿದ್ದಾರೆ. ಅನಂತರ ರಶ್ಮಿಕಾ ಬಾಲಿವುಡ್ (Bollywood) ರಂಗ ಪ್ರವೇಶಿಸಿ ಸಿನಿಮಾ ಶೂಟಿಂಗ್ ಅಂತ ಬ್ಯುಸಿ ಆಗ್ಬಿಟ್ರು. ಆದರೆ ವಿಜಯ್ ದೇವರಕೊಂಡಗೆ ಟೈಮ್ ಕೊಡೋದನ್ನ ಮಾತ್ರ ರಶ್ಮಿಕಾ ಮರೆತಿಲ್ಲ. ಹೈದರಾಬಾದ್‌ನಲ್ಲಿ ವಿಜಯ್ ಅವರನ್ನ ಭೇಟಿ ಮಾಡುತ್ತಿದ್ದ ರಶ್ಮಿಕಾ ಮುಂಬೈನ ರೆಸ್ಟೋರೆಂಟ್​ವೊಂದರಲ್ಲಿ ವಿಜಯ್ ಜೊತೆ ಕಾಣಿಸಿಕೊಂಡಿದ್ದಾರೆ. 

Rashmika Mandanna in Pushpa: ಡಬ್ಬಿಂಗ್ ವಿಚಾರಕ್ಕೆ ಟ್ರೋಲ್ ಆದ ರಶ್ಮಿಕಾ

ಮುಂಬೈನ ಗಲ್ಲಿಗಳಲ್ಲಿ ರಶ್ಮಿಕಾ ವಿಜಯ್ ದೇವಕೊಂಡ ಕೈ ಹಿಡಿದುಕೊಂಡು ಸುತ್ತುತ್ತಿದ್ದಾರೆ. ಇಬ್ಬರು ಒಟ್ಟಿಗೆ ಓಡಾಡೋ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ ಅಂತ ಬಾಲಿವುಡ್‌ನಲ್ಲಿ ಸುದ್ದಿ ಹರಿದಾಡುತ್ತಿದೆ. ಮುಂಬೈನ ರೆಸ್ಟೋರೆಂಟ್‌ವೊಂದರಿಂದ ಡಿನ್ನರ್ ಮುಗಿಸಿಕೊಂಡು ಹೊರ ಹೋಗುವಾಗ ಕ್ಯಾಮೆರಾ ಕಣ್ಣಲ್ಲಿ ಈ ಜೋಡಿ ಸೆರೆಯಾಗಿದೆ. ಹೀಗಾಗಿ ಪದೇ ಪದೇ ವಿಜಯ್ ದೇವರಕೊಂಡ ಮುಂಬೈ ಪ್ಲೈಟ್ ಹತ್ತಿ ರಶ್ಮಿಕಾ ಜೊತೆ ಕಾಣಿಸಿಕೊಳ್ಳುತ್ತಿರೋದೇಕೆ..? ಇಬ್ಬರ ಮಧ್ಯೆ ಏನ್ ನಡೀತಿದೆ ಅನ್ನೋ ಚರ್ಚೆ ಮತ್ತಷ್ಟು ಬಲವಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video