ಹೊಸ ನಾಯಕಿ ಹುಡುಕಿಕೊಂಡ ವಿಜಯ್ ದೇವರಕೊಂಡ: ಗೀತಗೋವಿಂದಂ ಪಾರ್ಟ್ 2ನಿಂದ ರಶ್ಮಿಕಾ ಔಟ್
ವಿಜಯ್ ದೇವರಕೊಂಡ ಹೊಸ ನಾಯಕಿ ಹುಡುಕಿಕೊಂಡಿದ್ದಾರೆ. ಗೀತಗೋವಿಂದಂ ಪಾರ್ಟ್ 2ನಿಂದ ರಶ್ಮಿಕಾ ಮಂದಣ್ಣ ಔಟ್ ಆಗಿದ್ದಾರೆ.
ವಿಜಯ್ ದೇವರಕೊಂಡ ಲೈಗರ್ ಸೇಲಿನ ಬಳಿಕ ಮತ್ತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಈಗಾಗಲೇ ಮೂರು ಸಿನಿಮಾ ದೇವರಕೊಂಡ ಕೈಯಲ್ಲಿದೆ. ಇದೀಗ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸೂಪರ್ ಹಿಟ್ ಗೀತಗೋವಿಂದಂ ಪಾರ್ಟ್ 2ನಲ್ಲಿ ವಿಜಯ್ ದೇವರಕೊಂಡ ನಟಿಸುತ್ತಿದ್ದಾರೆ. ಗೀತಗೋವಿಂದಂ ಮೂಲಕ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಫೇಮಲ್ ಆಗಿದ್ದರು. ವಿಜಯ್-ರಶ್ಮಿಕಾ ಜೋಡಿ ಕೂಡ ಹಿಟ್ ಆಗಿತ್ತು. ಆದರೀಗ ಪಾರ್ಟ್-2ನಲ್ಲಿ ರಶ್ಮಿಕಾ ಬದಲು ಮೃಣಾಲ್ ಠಾಕೂರ್ ನಟಿಸುತ್ತಿದ್ದಾರೆ.