ಬೆಂಗಳೂರಿನಲ್ಲಿ ‘ವೀರ ಧೀರ ಸೂರನ್’ ಚಿತ್ರತಂಡ: ಪ್ರಚಾರಕ್ಕೆ ಬಂದ ಚಿಯಾನ್ ವಿಕ್ರಂ, ಎಸ್.ಜೆ ಸೂರ್ಯ
ಚಿಯಾನ್ ವಿಕ್ರಂ - ಎಸ್.ಜೆ ಸೂರ್ಯ ನಟನೆಯ ವೀರ ಧೀರ ಸೂರನ್ ಸಿನಿಮಾ ಇದೇ ವಾರಂತ್ಯಕ್ಕೆ ತೆರೆಗೆ ಬರೋದಕ್ಕೆ ಸಜ್ಜಾಗಿದೆ. ಅರುಣ್ ಕುಮಾರ್ ಡೈರೆಕ್ಟ್ ಮಾಡಿರೋ ಈ ಸಿನಿಮಾದ ಟ್ರೈಲರ್ ಸಖತ್ ಸದ್ದು ಮಾಡ್ತಾ ಇದೆ.
ಚಿಯಾನ್ ವಿಕ್ರಂ - ಎಸ್.ಜೆ ಸೂರ್ಯ ನಟನೆಯ ವೀರ ಧೀರ ಸೂರನ್ ಸಿನಿಮಾ ಇದೇ ವಾರಂತ್ಯಕ್ಕೆ ತೆರೆಗೆ ಬರೋದಕ್ಕೆ ಸಜ್ಜಾಗಿದೆ. ಅರುಣ್ ಕುಮಾರ್ ಡೈರೆಕ್ಟ್ ಮಾಡಿರೋ ಈ ಸಿನಿಮಾದ ಟ್ರೈಲರ್ ಸಖತ್ ಸದ್ದು ಮಾಡ್ತಾ ಇದೆ. ವೀರ ಧೀರ ಸೂರನ್ ಪ್ಯಾನ್ ಇಂಡಿಯಾ ತೆರೆಗೆ ಬರಲಿದ್ದು ವಿಕ್ರಂ ಅಂಡ್ ಎಸ್.ಜೆ ಸೂರ್ಯ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಪ್ರಚಾರ ಮಾಡ್ತಾ ಇದ್ದಾರೆ. ಬೆಂಗಳೂರಿನಲ್ಲಿ ಕೂಡ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಡೆದಿದ್ದು ವೀರ ಧೀರ ಸೂರನ್ ತಾರೆಯರು ಹಾಜರಾಗಿದ್ದಾರೆ.
ಟ್ರೆಂಡಿಂಗ್ನಲ್ಲಿದೆ ನಿತಿನ್ ನಟನೆಯ ರಾಬಿನ್ ಹುಡ್ ಟ್ರೈಲರ್: ಈ ವಾರ ಟಾಲಿವುಡ್ನಲ್ಲಿ ತೆರೆಗೆ ಬರ್ತಾ ಇರೋದು ನಿತಿನ್ - ಶ್ರೀಲೀಲಾ ನಟನೆಯ ರಾಬಿನ್ ಹುಡ್ ಸಿನಿಮಾ. ರಿಲೀಸ್ ಹೊಸ್ತಿಲಲ್ಲಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಸಖತ್ ಕಲರ್ ಫುಲ್ ಆಗಿ ಮೂಡಿಬಂದಿದೆ. ವಿಶೇಷ ಅಂದ್ರೆ ಕ್ರಿಕೇಟರ್ ಡೇವಿಡ್ ವಾರ್ನರ್ ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಈ ಚಿತ್ರಕ್ಕೆ ವೆಂಕಿ ಕುಡುಮುಲಾ ಆಕ್ಷನ್ ಕಟ್ ಹೇಳಿದ್ದು ಇದೇ ವಾರಾಂತ್ಯಕ್ಕೆ ಚಿತ್ರ ರಿಲೀಸ್ ಆಗಲಿದೆ.
ಅರ್ಹವಾಗಿದ್ರೂ ಪ್ರಶಸ್ತಿ ಸಿಕ್ಕಿಲ್ಲ ದೀಪಿಕಾ ಪಡುಕೋಣೆ ಬೇಸರ: ಪ್ರತಿ ಸಾರಿ ಆಸ್ಕರ್ ಪ್ರಶಸ್ತಿ ಘೋಷಣೆ ಆದಾಗಲೂ ಭಾರತೀಯ ಸಿನಿಮಾಗಳು ಅರ್ಹವಾದ್ರೂ ಪರಿಗಣಿಸೋದಿಲ್ಲ ಅನ್ನೋ ಆರೋಪ ಕೇಳಿ ಬರುತ್ತೆ. ಇದೀಗ ನಟಿ ದೀಪಿಕಾ ಪಡುಕೋಣೆ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಭಾರತೀಯ ಚಿತ್ರಗಳು ಆಸ್ಕರ್ ಗೆಲ್ಲಲು ಅರ್ಹವಾಗಿದ್ದರೂ, ಅವುಗಳನ್ನು ಪದೇ ಪದೇ ಕಡೆಗಣಿಸಲಾಗಿದೆ ಅಂದಿರೋ ದೀಪಿಕಾ, RRR ಸಿನಿಮಾದ ಸಾಂಗ್ಗೆ ಆಸ್ಕರ್ ಸಿಕ್ಕವೇಳೆ ತುಂಬಾ ಖುಷಿಪಟ್ಟಿದೆ ಅನ್ನೋ ಸಂಗತಿ ಹಂಚಿಕೊಂಡಿದ್ದಾರೆ.