ಅವಮಾನ ಮಾಡಿದವರಿಗೆ ನನ್ನ ಸಲಾಮ್ ಎಂದ ವಸಿಷ್ಠ ಸಿಂಹ

ನಟ ವಸಿಷ್ಠ ಸಿಂಹ ಚಿತ್ರರಂಗದಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ನಟನಾಗಿ, ಗಾಯಕನಾಗಿ ಖ್ಯಾತಿಗಳಿಸಿದ್ದ ವಸಿಷ್ಠ ಇದೀಗ ತನ್ನದೆ ಆದ ಆಡಿಯೋ ಲೇಬಲ್ ಲಾಂಚ್ ಮಾಡಿದ್ದಾರೆ. ಈ ಸಮಯದಲ್ಲಿ ವಸಿಷ್ಠ ತನಗೆ ಅವಮಾನ ಮಾಡಿದವರ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಅವಮಾನವೇ ಬೆಳವಣಿಗೆಗೆ ಕಾರಣವಾಯ್ತು ಎಂದು ಹೇಳಿದ್ದಾರೆ.

Share this Video
  • FB
  • Linkdin
  • Whatsapp

ನಟ ವಸಿಷ್ಠ ಸಿಂಹ ಚಿತ್ರರಂಗದಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ನಟನಾಗಿ, ಗಾಯಕನಾಗಿ ಖ್ಯಾತಿಗಳಿಸಿದ್ದ ವಸಿಷ್ಠ ಇದೀಗ ತನ್ನದೆ ಆದ ಆಡಿಯೋ ಲೇಬಲ್ ಲಾಂಚ್ ಮಾಡಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ವಸಿಷ್ಠ ಇದು ಬಹಳ ವರ್ಷಗಳ ಕನಸು ಇದೀಗ ನನಸಾಗಿದೆ ಎಂದಿದ್ದಾರೆ. ಇದೆ ಸಮಯದಲ್ಲಿ ತನಗಾದ ಅವಮಾದ ಬಗ್ಗೆಯೂ ಮಾತನಾಡಿದ್ದಾರೆ. ಮೊದಲ ಬಾರಿ ಕ್ಯಾಮರಾ ಮುಂದೆ ನಿಂತಾಗ ಯಾರು ಅಲ್ಲ. ಅವಮಾನನೇ ದೊಡ್ಡ ಗೆಳೆಯ. ಅದೇ ನಮ್ಮ ಗುರು. ಅದಿಲ್ಲ ಅಂದರೆ ನಮ್ಮಲ್ಲಿ ಕಿಚ್ಚು ಬರಲ್ಲ. ಅವಮಾನ ಮಾಡಿದವರಿಗೆ ಒಂದು ಸಲಾಮ್ ಹೇಳಬೇಕು. ನೀವು ಅವತ್ತು ಮಾತಾಡಿಲ್ಲ ಅಂದಿದ್ರೆ ನಾನು ಇವತ್ತು ಈ ಕೆಲಸ ಮಾಡುತ್ತಿರಲಿಲ್ಲ. ಅವಮಾನದ ಹಿಂದೆ ಸನ್ಮಾನ ಕಾದಿರುತ್ತೆ ಎಂದು ಹೇಳಿದ್ದಾರೆ.

Related Video