Yash: ತಮಿಳು ಡೈರೆಕ್ಟರ್ ಜೊತೆ ರಾಕಿಂಗ್ ಸ್ಟಾರ್?: ಯಶ್ ಫ್ಯಾನ್ಸ್ ಅನೌನ್ಸ್
ರಾಕಿಂಗ್ ಸ್ಟಾರ್ ಯಶ್ ಹೊಸ ಚಿತ್ರದ ಬಗ್ಗೆ ಸುದ್ದಿಯೊಂದು ಪಕ್ಕಾ ಆಗಿದ್ದು, ತಮಿಳು ಡೈರೆಕ್ಟರ್ ಜೊತೆ ಯಶ್ ಸಿನಿಮಾ ಮಾಡೋದು ಖಚಿತ ಅಂತ ಹೇಳಲಾಗುತ್ತಿವೆ.
ತಮಿಳು ನಿರ್ದೇಶಕ ಪಿ.ಎಸ್ ಮಿತ್ರನ್ ಜೊತೆ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಮಾಡಲಿದ್ದಾರೆ ಎಂದು ಯಶ್ ಅವರ ಅಭಿಮಾನಿ ಬಳಗ ಅಧಿಕೃತವಾಗಿ ಅನೌನ್ಸ್ ಮಾಡ್ತಿದೆ. ಪಿ.ಎಸ್ ಮಿತ್ರನ್ ಕಾಲಿವುಡ್'ನ ಟ್ಯಾಲೆಂಟೆಡ್ ನಿರ್ದೇಶಕ. ನಟ ವಿಶಾಲ್ ಜೊತೆ ಇರುಂಬು ತಿರೈ, ಹಾಗೂ ಶಿವಕಾರ್ತಿಕೇಯನ್ ಜೊತೆ ಹೀರೋ, ಕಾರ್ತಿ ಜೊತೆ ಸರ್ದಾರ್ ಸಿನಿಮಾಗಳನ್ನು ಮಾಡಿ ಗೆದ್ದಿದ್ದಾರೆ. ಈಗ ರಾಕಿಭಾಯ್ ಯಶ್ 19 ಚಿತ್ರಕ್ಕೆ ಇದೇ ಪಿ.ಎಸ್ ಮಿತ್ರನ್ ಡೈರೆಕ್ಷನ್ ಮಾಡ್ತಾರೆ ಅಂತ ಯಶ್ ಅಭಿಮಾನಿಗಳ ಸೋಶಿಯಲ್ ಮೀಡಿಯಾ ಪೇಜ್'ಗಳಲ್ಲಿ ಸುದ್ದಿ ಹರಿದಾಡ್ತಿದೆ.