
ಉಲ್ಲಾಸ ಉತ್ಸಾಹ ಸಿನಿಮಾದಲ್ಲಿ ನಟಿಸಿದ್ದ ಚೆಲುವೆ ಯಾಮಿ ಗೌತಮ್ ಬ್ಯೂಟಿ ಸೀಕ್ರೇಟ್
ಕನ್ನಡದ ಉಲ್ಲಾಸ ಉತ್ಸಾಹ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಚೆಲುವೆ ಯಾಮಿ ಗೌತಮ್ ಬಯೂಟಿ ಸೀಕ್ರೇಟ್ ಏನು?
ಕನ್ನಡದ ಉಲ್ಲಾಸ ಉತ್ಸಾಹ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಚೆಲುವೆ ಯಾಮಿ ಗೌತಮ್. ಹಿಮಾಚಲ ಮೂಲದ ಈ ಸುರ ಸುಂದರಿ ಕನ್ನಡದಿಂದ ಆರಂಭಿಸಿ ತಮಿಳು, ತೆಲುಗು, ಹಿಂದಿನಲ್ಲೂ ಬಹುಬೇಡಿಕೆಯ ನಟಿಯಾಗಿ ಮಿಂಚಿದಾಕೆ. ಈಗಲೂ ಯಾಮಿ ಸಿಕ್ಕಾಪಟ್ಟೆ ಬೇಡಿಕೆಯ ನಟಿಮಣಿ. ಕಳೆದ ಒಂದೂವರೇ ದಶಕದಿಂದ ಆಕ್ಟಿವ್ ಆಗಿರೋ ನಟಿಮಣಿ, ತನ್ನ ಸ್ನಿಗ್ದ ಸೌಂದರ್ಯ ಮಾದಕ ಮೈಮಾಟದಿಂದ ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಿಸ್ತಾನೇ ಇರ್ತಾಳೆ. ಎಲ್ಲರಂತೆ ಈ ಚೆಂದುಳ್ಳಿ ಚೆಲುವೆ ಕೂಡ ತನ್ನ ಮೋಹಕ ಮೈಮಾಟದ ಗುಟ್ಟು ಯೋಗಾ ಮತ್ತು ವರ್ಕೌಟು ಅಂತಾಳೆ. ಸೋಷಿಯಲ್ ಮಿಡಿಯಾದಲ್ಲಿ ಯಾಮಿ ತನ್ನ ವರ್ಕೌಟ್ ವಿಡಿಯೋಸ್ ಶೇರ್ ಮಾಡ್ತಾ ಇರ್ತಾಳೆ. ಯಾಮಿ ಸೌಂದರ್ಯದ ಸೀಕ್ರೆಟ್ ತಿಳ್ಕೋಳೋದ್ರ ಜೊತೆಗೆ ಸೌಂದರ್ಯ ಸಮರ ಸವೀಬೇಕು ಅಂದ್ರೆ ತಪ್ಪದೇ ಈಕೆಯ ಸೋಷಿಯಲ್ ಮಿಡಿಯಾ ಅಕೌಂಟ್ಗೆ ವಿಸಿಟ್ ಕೊಡಿ.