Asianet Suvarna News Asianet Suvarna News

RRR ರಿಲೀಸ್‌ಗೆ ಎರೆಡೆರಡು ದಿನ ಫಿಕ್ಸ್ ಮಾಡಿದ್ದೇಕೆ ರಾಜಮೌಳಿ?

ಜ್ಯೂ.ಎನ್​ಟಿಆರ್ ಮತ್ತು ರಾಮ್​ ಚರಣ್ ಕಾಂಬಿನೇಷನ್‌ನ ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಆರ್‌ಆರ್‌ಆರ್‌' (ರೌದ್ರ-ರಣ-ರುಧಿರ) ರಿಲೀಸ್‌ಗೆ ಹೊಸ ಡೇಟ್‌ ಫಿಕ್ಸ್‌ ಆಗಿದೆ. ಈ ಮೊದಲು ಜನವರಿ 7ರಂದು 'ಆರ್‌ಆರ್‌ಆರ್‌' ಚಿತ್ರ ಬಿಡುಗಡೆ ಮಾಡುವ ಘೋಷಣೆ ಮಾಡಲಾಗಿತ್ತು. 

First Published Jan 23, 2022, 2:22 PM IST | Last Updated Jan 23, 2022, 2:22 PM IST

ಜ್ಯೂ.ಎನ್​ಟಿಆರ್ (Jr.NTR) ಮತ್ತು ರಾಮ್​ ಚರಣ್ (Ram Charan)​ ಕಾಂಬಿನೇಷನ್‌ನ ಎಸ್‌.ಎಸ್‌.ರಾಜಮೌಳಿ (SS Rajamouli) ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಆರ್‌ಆರ್‌ಆರ್‌' (RRR) (ರೌದ್ರ-ರಣ-ರುಧಿರ) ರಿಲೀಸ್‌ಗೆ ಹೊಸ ಡೇಟ್‌ ಫಿಕ್ಸ್‌ ಆಗಿದೆ. ದೇಶದಲ್ಲಿ ಕೊರೊನಾ (Coronavirus) ಪರಿಸ್ಥಿತಿ ಸುಧಾರಿಸಿದರೆ ಮಾರ್ಚ್ 28 ಇಲ್ಲವೇ ಏಪ್ರಿಲ್ 28 ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಟ್ವೀಟ್‌ (Tweet) ಮಾಡಿದೆ. ಈ ಮೊದಲು ಜನವರಿ 7ರಂದು 'ಆರ್‌ಆರ್‌ಆರ್‌' ಚಿತ್ರ ಬಿಡುಗಡೆ ಮಾಡುವ ಘೋಷಣೆ ಮಾಡಲಾಗಿತ್ತು. ಆದರೆ, ದೇಶದಲ್ಲಿ ಕೋವಿಡ್‌ (Covid19) ಹೆಚ್ಚಾಗಿ ನಿರ್ಬಂಧಗಳು ಕಠಿಣವಾಗಿರುವುದರಿಂದ ಸಿನಿಮಾ ಬಿಡುಗಡೆಯ ದಿನಾಂಕವನ್ನು ಏಪ್ರಿಲ್‌ಗೆ ಮುಂಡೂಲಾಗಿತ್ತು.

RRR Movie: 10 ಕೋಟಿ ಹಣವನ್ನು ರಿಫಂಡ್ ಮಾಡಿದ ಚಿತ್ರದ ನಿರ್ಮಾಪಕ ಡಿವಿವಿ ದಾನಯ್ಯ!

ಇದೀಗ ಥಿಯೇಟರ್‌ಗಳಲ್ಲಿ ಶೇ.100ರಷ್ಟು ಭರ್ತಿಗೆ ಅವಕಾಶ ನೀಡಿದರೆ ಮಾರ್ಚ್‌ 28ಕ್ಕೆ ಬಿಡುಗಡೆ ಮಾಡುತ್ತೇವೆ. ಇಲ್ಲದಿದ್ರೆ ಏಪ್ರಿಲ್‌ 28ಕ್ಕೆ ಚಿತ್ರ ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿದೆ. 2020ರ ಜುಲೈನಲ್ಲಿ ಬಿಡುಗಡೆ ಮಾಡುವುದಾಗಿ 2018ರಲ್ಲೇ ಚಿತ್ರ ತಂಡ ಅಧಿಕೃತವಾಗಿ ಘೋಷಣೆ ಮಾಡಿತ್ತು. ಆ ನಂತರ ಕೋವಿಡ್‌ ಪರಿಣಾಮ ಶೂಟಿಂಗ್ ವಿಳಂಬದಿಂದಾಗಿ ಅಕ್ಟೋಬರ್ 13ಕ್ಕೆ ತೆರೆ ಮೇಲೆ 'ಆರ್‌ಆರ್‌ಆರ್‌' ಬರುತ್ತೆ ಎಂದು ಹೇಳಲಾಗಿತ್ತು. ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಬಿಗ್ ಬಜೆಟ್ ಚಿತ್ರದಲ್ಲಿ ರಾಮ್ ಚರಣ್ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ಹಾಗೂ ಜೂ.ಎನ್‌ಟಿಆರ್ ಕೋಮರಂ ಭೀಮನಾಗಿ ನಟಿಸಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment