RRR Movie: 10 ಕೋಟಿ ಹಣವನ್ನು ರಿಫಂಡ್ ಮಾಡಿದ ಚಿತ್ರದ ನಿರ್ಮಾಪಕ ಡಿವಿವಿ ದಾನಯ್ಯ!
ಜ್ಯೂ.ಎನ್ಟಿಆರ್ ಮತ್ತು ರಾಮ್ ಚರಣ್ ಕಾಂಬಿನೇಷನ್‌ನ ಎಸ್.ಎಸ್.ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಆರ್‌ಆರ್‌ಆರ್' ಸಿನಿಮಾ ರಿಲೀಸ್ ಡೇಟ್ ಕೂಡಾ ಮುಂದಕ್ಕೆ ಹೋಗಿದೆ. ಈ ಚಿತ್ರಕ್ಕೆ ಡಿವಿವಿ ದಾನಯ್ಯ ಬಂಡವಾಳ ಹೂಡಿದ್ದಾರೆ. ಚಿತ್ರದ ಬಿಡುಗಡೆಗೂ ಮುನ್ನವೇ ನಿರ್ಮಾಪಕರು ಬರೋಬ್ಬರಿ 10 ಕೋಟಿ ರೂಪಾಯಿಯನ್ನು ಪ್ರೇಕ್ಷಕರಿಗೆ ವಾಪಸ್ ನೀಡಬೇಕಾದ ಸಂದರ್ಭ ಬಂದಿದೆ.
ಜ್ಯೂ.ಎನ್ಟಿಆರ್ (Jr.NTR) ಮತ್ತು ರಾಮ್ ಚರಣ್ (Ram Charan) ಕಾಂಬಿನೇಷನ್‌ನ ಎಸ್.ಎಸ್.ರಾಜಮೌಳಿ (SS Rajamouli) ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಆರ್‌ಆರ್‌ಆರ್' (RRR) (ರೌದ್ರ-ರಣ-ರುಧಿರ) ಚಿತ್ರದ ಬಗ್ಗೆ ಕ್ರೇಜ್ ಜೋರಾಗಿಯೇ ಇದೆ. ಆದರೆ ದೇಶದಲ್ಲಿ ಹೆಚ್ಚುತ್ತಿರುವ ಒಮಿಕ್ರಾನ್ ಪ್ರಕರಣಗಳ (Omicron) ಕಾರಣದಿಂದ ಸಿನಿಮಾ ರಿಲೀಸ್ ಡೇಟ್ ಕೂಡಾ ಮುಂದಕ್ಕೆ ಹೋಗಿದೆ. ಈ ಚಿತ್ರಕ್ಕೆ ಡಿವಿವಿ ದಾನಯ್ಯ ಬಂಡವಾಳ ಹೂಡಿದ್ದಾರೆ. ಚಿತ್ರದ ಬಿಡುಗಡೆಗೂ ಮುನ್ನವೇ ನಿರ್ಮಾಪಕರು ಬರೋಬ್ಬರಿ 10 ಕೋಟಿ ರೂಪಾಯಿಯನ್ನು ಪ್ರೇಕ್ಷಕರಿಗೆ ವಾಪಸ್ ನೀಡಬೇಕಾದ ಸಂದರ್ಭ ಬಂದಿದೆ.
RRR Movie: ರಾಜಮೌಳಿ ಸಿನಿಮಾದಲ್ಲಿ ಗರಿಷ್ಠ ಸಂಭಾವನೆ ಪಡೆದವರು ಯಾರು?
ಹೌದು! 'ಆರ್‌ಆರ್‌ಆರ್' ಚಿತ್ರ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜನವರಿ 7ರಂದು ವಿಶ್ವಾದ್ಯಂತ ಬಿಡುಗಡೆ ಆಗಬೇಕಿತ್ತು. ಅದಕ್ಕಾಗಿ ಕೆಲವು ಕಡೆಗಳಲ್ಲಿ ಮುಂಗಡ ಟಿಕೆಟ್ ಬುಕಿಂಗ್ ಸಹ ಆರಂಭ ಆಗಿತ್ತು. ಪ್ರಪಂಚದೆಲ್ಲೆಡೆ ಅಂದಾಜು 10 ಕೋಟಿ ರೂ. ಮೊತ್ತದ ಟಿಕೆಟ್ ಬುಕ್ ಆಗಿತ್ತು ಎನ್ನಲಾಗಿದೆ. ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿರುವುದರಿಂದ ಆ ಹಣವನ್ನು ಪ್ರೇಕ್ಷಕರಿಗೆ ವಾಪಸ್ ನೀಡಬೇಕಾಗಿದೆ. ಈ ಚಿತ್ರಕ್ಕೆ ವಿ.ವಿಜಯೇಂದ್ರ ಪ್ರಸಾದ್ ಕಥೆ, ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ. ಬಿಗ್ ಬಜೆಟ್‌ನಲ್ಲಿ ತಯಾರಾದ ಈ ಚಿತ್ರಕ್ಕೆ ಎಂ.ಎಂ.ಕೀರವಾಣಿ (M.M. Keeravaani) ಸಂಗೀತ ಸಂಯೋಜಿಸಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment