ಕಾಂತಾರದಲ್ಲಿ 'ಕಂಬಳ' ಕೋಣಗಳ ಕ್ರೇಜ್: ರಿಷಬ್ ಓಟ ಕಲಿತದ್ದು ಹೇಗೆ?

ಕಾಂತರಾ ಸಿನಿಮಾದ ಕ್ಲೈಮ್ಯಾಕ್ಸ್ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಈ ಸಿನಿಮಾ ಟೇಕ್ ಆಫ್ ಆಗುವುದಕ್ಕೆ ಕಂಬಳದ ಓಪನಿಂಗ್ ಕೂಡ ಕಾರಣವಾಗಿದೆ‌.

Share this Video
  • FB
  • Linkdin
  • Whatsapp

ಪ್ರಕೃತಿ ಮತ್ತು ಮನುಷ್ಯನ ನಡುವೆ ಅನೇಕ ಭಾರೀ ಮುಖಾಮುಖಿಯಾಗುವುದನ್ನು ಸಿನಿಮಾದಲ್ಲಿ ನೋಡುತ್ತೇವೆ. ಪ್ರಕೃತಿ ಮತ್ತು ಮನುಷ್ಯನ ನಡುವೆ ಬರುವುದು, ಪ್ರಾಣಿಗಳು ಮನುಷ್ಯ ಮತ್ತು ಪ್ರಕೃತಿಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಪಂಜುರ್ಲಿ ದೈವದಷ್ಟೇ ಹಟ್ಟಿಯ ಕೋಣಗಳೂ ಕೂಡ ಪ್ರಮುಖ ಪಾತ್ರ ವಹಿಸುತ್ತವೆ. ಇದು ಕಾಂತಾರ ಸಿನಿಮಾದಲ್ಲಿ ಕಾಣುವ ಪ್ರಮುಖ ಅಂಶ. ಇಲ್ಲಿ ಕಾಣುವಂತ ಕೋಣಗಳು ಕಾಂತಾರದಲ್ಲಿ ನಟನೆ ಮಾಡಿದ ಕೋಣಗಳು. ಇವುಗಳಿಗೆ ಕೊಡುವಂತಹ ಐಷಾರಾಮಿ ಜೀವನವನ್ನು ನೀವು ಇಲ್ಲಿ ನೋಡಬಹುದು. ಈ ಸಿನಿಮಾದಲ್ಲಿ ರಿಷಬ್​ ಶೆಟ್ಟಿ ಕಂಬಳ ಸ್ಪರ್ಧೆಯ ದೃಶ್ಯಗಳಲ್ಲಿ ನಟಿಸಿದ್ದಾರೆ. ಆ ಸನ್ನಿವೇಶಕ್ಕಾಗಿ ಅವರು ನಿಜವಾಗಿಯೂ ಕಂಬಳದ ಕೋಣಗಳನ್ನು ಓಡಿಸುವುದು ಕಲಿತಿದ್ದಾರೆ.

Related Video