ದಳಪತಿ ವಿಜಯ್ 69 ಸಿನಿಮಾದ ಕಾಸ್ಟ್ & ಕ್ರ್ಯೂ ರಿವೀಲ್: ಟಾಕ್ಸಿಕ್ ಯಾಕಿಷ್ಟು ಸೈಲೆಂಟ್?

ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾವನ್ನ ಕನ್ನಡದ KVN ಪ್ರೊಡಕ್ಷನ್ಸ್ ನಿರ್ಮಿಸ್ತಾ ಇರೋ ವಿಷ್ಯ ನಿಮಗೆ ಗೊತ್ತೇ ಇದೆ. ಸದ್ಯ ಈ ಸಿನಿಮಾದ ಕಾಸ್ಟ್ & ಕ್ರ್ಯೂ ಅಪ್​​​ಡೇಟ್ಸ್​ನ ರಿವೀಲ್ ಮಾಡಲಾಗಿದೆ. 

First Published Oct 5, 2024, 10:59 AM IST | Last Updated Oct 5, 2024, 10:59 AM IST

ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾವನ್ನ ಕನ್ನಡದ KVN ಪ್ರೊಡಕ್ಷನ್ಸ್ ನಿರ್ಮಿಸ್ತಾ ಇರೋ ವಿಷ್ಯ ನಿಮಗೆ ಗೊತ್ತೇ ಇದೆ. ಸದ್ಯ ಈ ಸಿನಿಮಾದ ಕಾಸ್ಟ್ & ಕ್ರ್ಯೂ ಅಪ್​​​ಡೇಟ್ಸ್​ನ ರಿವೀಲ್ ಮಾಡಲಾಗಿದೆ. ಆದ್ರೆ ಇದೇ KVN ನಿರ್ಮಿಸ್ತಾ ಇರೋ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಒಂದೇ ಒಂದು ಅಪ್​ಡೇಟ್​ನ ಮಾತ್ರ ಇದೂವರೆಗೂ ರಿವೀಲ್ ಮಾಡಿಲ್ಲ. ಟಾಕ್ಸಿಕ್ ಯಾಕಿಷ್ಟು ತಡ ಅನ್ನೋ ರಾಕಿಭಾಯ್ ಫ್ಯಾನ್ಸ್ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ದಳಪತಿ ವಿಜಯ್ ನಟನೆಯ ಕೊನೆ ಸಿನಿಮಾವನ್ನ ನಿರ್ಮಾಣ ಮಾಡ್ತಾ ಇದೆ.  ರಾಜಕೀಯದ  ಅಖಾಡಕ್ಕೆ ಇಳಿಯೋದಕ್ಕೆ ಸಜ್ಜಾಗಿರೋ ದಳಪತಿ ವಿಜಯ್​ಗೆ ಇದು ತುಂಬಾನೇ ನಿರೀಕ್ಷೆ ಇರೋ ಸಿನಿಮಾ. 

ಅಂತೆಯೇ ನಿರ್ದೇಶಕ ಎಚ್.ವಿನೋದ್ ಹೈಸ್ಪೀಡ್​ನಲ್ಲಿ ಸಿನಿಮಾಗೆ ಚಾಲನೆ ಕೊಡ್ತಾ ಇದ್ದಾರೆ. ಈಗಾಗ್ಲೇ ದಳಪತಿ 69 ಸಿನಿಮಾದ ಕಾಸ್ಟ್ & ಕ್ರ್ಯೂನ ರಿವೀಲ್ ಮಾಡಲಾಗಿದೆ. ಪೂಜಾ ಹೆಗಡೆ ಈ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚೋದು ಫಿಕ್ಸ್ ಅಗಿದೆ. ಜೊತೆಗೆ ಪ್ರಿಯಾಮಣಿ ಮತ್ತು ಮಮಿತಾ ಬೈಜು ಸಿನಿಮಾದಲ್ಲಿ ನಟಿಸೋದು ಫಿಕ್ಸ್ ಆಗಿದೆ. ಇವರನ್ನ ದಳಪತಿ 69 ತಂಡ ಆಫೀಷಿಯಲ್ ಆಗಿ ಆನ್ ಬೋರ್ಡ್ ವೆಲ್ ಕಮ್ ಮಾಡಿದೆ. ಇನ್ನೂ ಬಾಬಿ ಡಿಯೋಲ್ ಈ ಸಿನಿಮಾದಲ್ಲಿ ನೆಗೆಟಿವ್ ರೋಲ್​ನಲ್ಲಿ ಮಿಂಚೋದು ಕೂಡ ಫಿಕ್ಸ್ ಆಗಿದೆ. ಜೊತೆಗೆ ಪ್ರಕಾಶ್ ರೈ, ಗೌತಮ್ ಮೆನನ್, ನರೈನ್ ಕೂಡ ಸಿನಿಮಾದಲ್ಲಿ ನಟಿಸ್ತಾ ಇರೋದನ್ನ ಅನೌನ್ಸ್ ಮಾಡಲಾಗಿದೆ. 

ಟೆಕ್ನಿಷಿಯನ್ಸ್ ಡಿಟೈಲ್ಸ್ ಕೂಡ ಸದ್ಯದಲ್ಲೇ ಅನೌನ್ಸ್ ಆಗಲಿದೆ. ದಳಪತಿ 69 ಬಗ್ಗೆ ಇಷ್ಟೆಲ್ಲಾ ಅಪ್​ಡೇಟ್ಸ್ ಬಂದಿರೋದನ್ನ ನೋಡಿ ರಾಕಿಭಾಯ್ ಯಶ್ ಫ್ಯಾನ್ಸ್ KVN ಪ್ರೊಡಕ್ಷನ್ಸ್​​ನ ಪ್ರಶ್ನೆ ಮಾಡ್ತಾರೆ. ಟಾಕ್ಸಿಕ್​ನ ಪ್ರೊಡ್ಯೂಸ್ ಮಾಡ್ತಾ ಇರೋದು ಕೂಡ ನೀವೆ.. ಆ ಸಿನಿಮಾದ ಅಪ್​ಡೇಟ್ಸ್​ನ ಯಾಕೆ ಕೊಡ್ತಾ ಇಲ್ಲ ಅಂತ ದುಂಬಾಲು ಬಿದ್ದಿದ್ದಾರೆ. ಅಸಲಿಗೆ ಟಾಕ್ಸಿಕ್ ಸಿನಿಮಾಗೆ ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡ್ತಿದೆಯಾದ್ರೂ, ಯಶ್ ಒಡೆತನದ ಮಾನ್​ಸ್ಟರ್ ಮೈಂಡ್ಸ್  ಕ್ರಿಯೇಷನ್ಸ್ ಕೂಡ ಸಹ ನಿರ್ಮಾಣ ಮಾಡ್ತಾ ಇದೆ. 

ಸೋ ಟಾಕ್ಸಿಕ್ ಕುರಿತ ಯಾವ ವಿಷ್ಯನಾ ಯಾವಾಗ ಹಂಚಿಕೊಳ್ಳಬೇಕು ಅನ್ನೋ ವಿಚಾರದಲ್ಲಿ ಒನ್ ಌಂಡ್ ಓನ್ಲಿ ಯಶ್ ಹೇಳಿದ್ದೇ ಫೈನಲ್. ಕೆಜಿಎಫ್ ಸರಣಿಯ ವರ್ಲ್ಡ್ ವೈಡ್ ಸಕ್ಸಸ್ ಬಳಿಕ ವಿಶ್ವವನ್ನೇ ಮೆಚ್ಚಿಸುವಂಥಾ ಸಿನಿಮಾ ಮಾಡೋಕೆ ಸಜ್ಜಾಗಿರೋ ಯಶ್, ಟಾಕ್ಸಿಕ್​ಗೆ ದೊಡ್ಡ ಮಟ್ಟದ ತಯಾರಿ ಮಾಡಿಕೊಂಡಿದ್ದಾರೆ. ಎಷ್ಟೇ ತಡವಾದ್ರೂ ಪರವಾಗಿಲ್ಲ, ಪರ್ಫೆಕ್ಷನ್ ಬರೋವರೆಗೂ ನೋ ಪಬ್ಲಿಸಿಟಿ ಅನ್ನೋ ಪಾಲಿಸಿ ಫಾಲೋ ಮಾಡ್ತಾ ಇದ್ದಾರೆ. ಅದಕ್ಕಾಗೇ ಟಾಕ್ಸಿಕ್ ತಡವಾಗ್ತಾ ಇರೋದು. ಇದೂವರೆಗೂ ಏನೂ ಅನೌನ್ಸ್ ಆಗಿಲ್ಲ ಅಂತ ಬೇಜಾರು ಮಾಡ್ಕೊಳ್ಳೋದೇ ಬೇಡ. ಅನೌನ್ಸ್​ಮೆಂಟ್ ಆದಾಗ ಸುನಾಮಿ ಸೃಷ್ಟಿಯಾಗೋದಂತೂ ಫಿಕ್ಸ್.