ಸಂಕ್ರಾಂತಿ ವೇಳೆ ಟಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ಸ್ಟಾರ್ ವಾರ್: ಯಾವೆಲ್ಲಾ ಸಿನಿಮಾ ಬರುತ್ತಿವೆ?

ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಟಾಲಿವುಡ್ ಮತ್ತು ಕಾಲಿವುಡ್'ನಲ್ಲಿ ಭರ್ಜರಿ ಸ್ಟಾರ್ ವಾರ್ ನಡೆಯಲಿದೆ.
 

Share this Video
  • FB
  • Linkdin
  • Whatsapp

ತೆಲುಗು ಚಿತ್ರರಂಗದಲ್ಲಿ ಒಂದು ಕಡೆ ಬಾಲಯ್ಯ ಹಾಗೂ ಚಿರಂಜೀವಿ ಮಧ್ಯೆ ಬಿಗ್ ಸ್ಕ್ರೀನ್ ವಾರ್ ಶುರುವಾದ್ರೆ, ತಮಿಳು ಚಿತ್ರರಂಗದಲ್ಲಿ ದಳಪತಿ ವಿಜಯ್ ಹಾಗೂ ತಲಾ ಅಜಿತ್ ಮಧ್ಯೆ ಫೈಟ್ ನಡೆಯಲಿದೆ. ಬಾಲಯ್ಯ ನಟನೆಯ ವೀರ ಸಿಂಹ ರೆಡ್ಡಿ ಸಂಕ್ರಾಂತಿ ಹಬ್ಬಕ್ಕೆ ಅಂತ ಜನವರಿ 12ರಂದು ತೆರೆ ಮೇಲೆ ಬರ್ತಿದೆ. ಅಟ್ ದಿ ಸೇಮ್ ಟೈಂ ಮತ್ತೊಂದ್ ಕಡೆ ಮೆಗಾಸ್ಟಾರ್ ಚಿರಂಜೀವಿ ನಟನೆಯ ವಾಲ್ ತೇರು ವೀರಯ್ಯ ಸಿನಿಮಾ ಜ.13ಕ್ಕೆ ಬೆಳ್ಳಿತೆರೆಗೆ ಅಪ್ಪಳಿಸಲಿದೆ. ತಮಿಳು ಚಿತ್ರರಂಗದಲ್ಲಿ ದಳಪತಿ ವಿಜಯ್ ನಟನೆಯ ವಾರಿಸು ಸಿನಿಮಾ ಜನವರಿ 11ಕ್ಕೆ ರಿಲೀಸ್ ಆದ್ರೆ ಅದೇ ದಿನ ತಲಾ ಅಜಿತ್ ಅವರ ತುನಿವು ಕೂಡ ತೆರೆಗೆ ಬರಲಿದೆ.

Related Video