ಸೈಫ್ ಪುತ್ರನ ಸಿನಿಮಾಗೆ ಕಿಸ್ ಬ್ಯೂಟಿ ನಾಯಕಿ: ಒಟ್ಟಿಗೆ ಕಾಣಿಸಿಕೊಂಡ ಇಬ್ರಾಹಿಂ ಅಲಿಖಾನ್ & ಶ್ರೀಲೀಲಾ

ಕಿಸ್ ಬೆಡಗಿ ಶ್ರೀಲೀಲಾ ಬಾಲಿವುಡ್​ಗೆ ಕಾಲಿಡ್ತಾ ವಿಷ್ಯ ಗೊತ್ತೇ ಇದೆ. ಧರ್ಮ ಪ್ರೊಡಕ್ಷನ್ಸ್ ನಿರ್ಮಾಣದ ಸಿನಿಮಾದಲ್ಲಿ ನಟಿಸೋ ಮೂಲಕ ಶ್ರೀಲೀಲಾ ಬಿ ಟೌನ್​ಗೆ ಪಾದಾರ್ಪಣೆ ಮಾಡ್ತಾ ಇದ್ದಾಳೆ. 

First Published Jan 10, 2025, 4:11 PM IST | Last Updated Jan 10, 2025, 4:11 PM IST

ಕಿಸ್ ಬೆಡಗಿ ಶ್ರೀಲೀಲಾ ಬಾಲಿವುಡ್​ಗೆ ಕಾಲಿಡ್ತಾ ವಿಷ್ಯ ಗೊತ್ತೇ ಇದೆ. ಧರ್ಮ ಪ್ರೊಡಕ್ಷನ್ಸ್ ನಿರ್ಮಾಣದ ಸಿನಿಮಾದಲ್ಲಿ ನಟಿಸೋ ಮೂಲಕ ಶ್ರೀಲೀಲಾ ಬಿ ಟೌನ್​ಗೆ ಪಾದಾರ್ಪಣೆ ಮಾಡ್ತಾ ಇದ್ದಾಳೆ. ಈ ಸಿನಿಮಾದಲ್ಲಿ ನಾಯಕನಾಗಿ ಮಿಂಚಲಿರೋದು ಸೈಫ್ ಅಲಿಖಾನ್ ಪುತ್ರ ಇಬ್ರಾಹಿಂ ಖಾನ್​. ಇದು ಇಬ್ರಾಹಿಂ ಚೊಚ್ಚಲ ಚಿತ್ರವಾಗಿದ್ದು ದೊಡ್ಡ ಬಜೆಟ್​​ನಲ್ಲಿ ಸಿನಿಮಾ ನಿರ್ಮಾಣ ಆಗ್ತಾ ಇದೆ.  ಇತ್ತೀಚಿಗೆ ಇಬ್ರಾಹಿಂ ಅಂಡ್ ಶ್ರೀಲೀಲಾ ಧರ್ಮ ಪ್ರೊಡಕ್ಷನ್ ಕಚೇರಿಯ ಹೊರಗೆ ಒಟ್ಟಿಗೆ ಕಾಣಿಸಿಕೊಂಡಿದ್ದು, ಪಾಪರಾಜಿಗಳಕ್ಯಾಮೆರಾನಲ್ಲಿ ಸೆರೆಯಾಗಿದ್ದಾರೆ.

‘ಡೊಮೆನಿಕ್ ಅಂಡ್ ದಿ ಲೇಡಿಸ್ ಪರ್ಸ್’ ಟ್ರೈಲರ್ ರಿಲೀಸ್: ಮಾಲಿವುಡ್ ಮೆಗಾಸ್ಟಾರ್ ಮಮ್ಮೂಟ್ಟಿ ನಟನೆಯ ಬಹುನಿರೀಕ್ಷೆಯ ಡೊಮೆನಿಕ್ ಅಂಡ್ ದಿ ಲೇಡಿಸ್ ಪರ್ಸ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಸೌತ್​ನ  ಸ್ಟಾರ್ ಡೈರೆಕ್ಟರ್ ಗೌತಮ್ ಮೆನನ್ ಈ ಚಿತ್ರಕ್ಕೆ ಌಕ್ಷನ್ ಕಟ್ ಹೇಳಿದ್ದು ವಿಭಿನ್ನ ಕಥಾಹಂದರದ  ಈ ಟ್ರೈಲರ್ ಸದ್ದು ಮಾಡ್ತಾ ಇದೆ. ಇದೊಂದು ಮಿಸ್ಟ್ರಿ ಥ್ರಿಲ್ಲರ್ ಕಹಾನಿಯಾಗಿದ್ದು ಮಮ್ಮೂಟ್ಟಿ ಪ್ರೈವೆಟ್ ಇನ್ವೆಸ್ಟಿಗೇಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಂಕ್ರಾಂತಿಗೆ ಬರ್ತಿದ್ದಾರೆ ವಿಕ್ಟರಿ ವೆಂಕಟೇಶ್ & ಅನಿಲ್ ರವಿಪುಡಿ: ಸಂಕ್ರಾಂತಿಗೆ ಎಲ್ಲಾ ಭಾಷೆಗಳಲ್ಲಿ ಬಿಗ್ ಸ್ಟಾರ್​ಗಳ ಸಿನಿಮಾಗಳು ಬರ್ತಾ ಇವೆ. ಟಾಲಿವುಡ್​ನಲ್ಲಿ ವಿಕ್ಟರಿ ವೆಂಕಟೇಶ್ ಸಂಕ್ರಾಂತಿಗೆ ಬರ್ತಿನಿ ಅಂತಿದ್ದಾರೆ. ಅಂದಹಾಗೆ ವೆಂಕಟೇಶ್ ನಟನೆಯ ಈ ಸಿನಿಮಾದ ಹೆಸರೇ ಸಂಕ್ರಾಂತಿಕಿ ವಸ್ತುನಾಂ. ಇದೊಂದು ಹಾರರ್ ಕಾಮಿಡಿ ಜಾನರ್​ನ ಚಿತ್ರವಾಗಿದ್ದು ದಿಲ್ ರಾಜು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ದೇಶಕ ಅನಿಲ್ ರವಿಪುಡಿ ಮತ್ತು ವೆಂಕಟೇಶ್ ಕಾಂಬಿನೇಷನ್​ನ ಹ್ಯಾಟ್ರಿಕ್ ಮೂವಿ ಇದು. ರಿಲೀಸ್ ಹೊಸ್ತಿಲಲ್ಲಿ ಈ ಸಿನಿಮಾದ ಟ್ರೈಲರ್ ಮೂಡಿ ಬಂದಿದ್ದು ಸಖತ್ ಸೌಂಡ್ ಮಾಡ್ತಾ ಇದೆ.