Mission Majnu: ಜೂನ್‌ 10ರಂದು ಸಿದ್ಧಾರ್ಥ್-ರಶ್ಮಿಕಾ ಅಭಿನಯದ ಚಿತ್ರ ತೆರೆಗೆ!

ಬಾಲಿವುಡ್‌ ನಟ ಸಿದ್ದಾರ್ಥ್ ಮಲ್ಹೋತ್ರ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ 'ಮಿಷನ್ ಮಜ್ನು' ಚಿತ್ರ ಜೂನ್ 10ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. 

Share this Video
  • FB
  • Linkdin
  • Whatsapp

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅವರು ಟಾಲಿವುಡ್‌, ಬಾಲಿವುಡ್ ಚಿತ್ರರಂಗಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ 'ಪುಷ್ಪ'ದಂತಹ ಬ್ಲಾಕ್ ಬಸ್ಟರ್ ಹಿಟ್ ನೀಡಿದ್ದ ಅವರ 'ಆಡವಾಳ್ಳು ಮೀಕು ಜೋಹಾರ್ಲು' ಸಿನಿಮಾ ಈಚೆಗೆ ತೆರೆಕಂಡಿತ್ತು. ಆದರೆ ಈ ಚಿತ್ರ ಅವರಿಗೆ ಹೇಳಿಕೊಳ್ಳುವಂತಹ ಮಟ್ಟದಲ್ಲಿ ಖ್ಯಾತಿಯನ್ನು ತಂದುಕೊಡಲಿಲ್ಲ. ಸದ್ಯ ರಶ್ಮಿಕಾ ಮಾತ್ರ ಮತ್ತೆ ಸುದ್ದಿಯಲ್ಲಿದ್ದಾರೆ. ಇದೀಗ ಅವರು ಬಾಲಿವುಡ್ ಸಿನಿಮಾವೊಂದರ ಕುರಿತು ಸೌಂಡ್ ಮಾಡಿದ್ದಾರೆ. ಹೌದು! ರಶ್ಮಿಕಾ ನಟಿಸಿರುವ ಮೊದಲ ಬಾಲಿವುಡ್‌ ಸಿನಿಮಾ 'ಮಿಷನ್ ಮಜ್ನು' (Mission Majnu) ತೆರೆಗೆ ಬರಲು ಸಜ್ಜಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Rashmika Mandanna: ಮುಂದಿನ ಜನ್ಮದಲ್ಲಿ ಹುಡುಗನಾಗಿ ಹುಟ್ಟಬೇಕು ಎಂದ ಶ್ರೀವಲ್ಲಿ!

ಸಿದ್ದಾರ್ಥ್ ಮಲ್ಹೋತ್ರ (Sidharth Malhotra) ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಮಿಷನ್ ಮಜ್ನು' ಚಿತ್ರ ಜೂನ್ 10ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಬಗ್ಗೆ ರಶ್ಮಿಕಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದು, ಭಾರತ ಹೆಮ್ಮೆ ಪಡುವಂತಹ ಮಿಷನ್ ಇದು. ಹೇಳದೆ ಉಳಿದ ಇತಿಹಾಸದ ಪುಟದ ಅನುಭವ ಪಡೆಯಲು ನೀವು ಸಜ್ಜಾಗಿ ನೀವು ಎಂದು ಬರೆದುಕೊಂಡಿದ್ದಾರೆ. ಶಂತನು ಬಾಗ್ಚಿ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಪರ್ಮೀತ್ ಸೇಠಿ, ಝಾಕಿರ್ ಹುಸೇನ್, ಶರೀಬ್ ಹಷ್ಮಿ ಸೇರಿದಂತೆ ಹಲವರು ನಟಿಸಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video