
ದೇವ ಟ್ರೈಲರ್ ರಾಕಿಂಗ್, ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿತಾ ಕಂಗನಾ 'ಎಮರ್ಜೆನ್ಸಿ'..?
ಶಾಹೀದ್ ಕಪೂರ್ ನಟನೆಯ ಆಕ್ಷನ್ ಥ್ರಿಲ್ಲರ್ ಮೂವಿ ಟ್ರೈಲರ್ ಸಖತ್ ಸದ್ದು ಮಾಡ್ತಾ ಇದೆ. ಕಂಗನಾ ರಣಾವತ್ ನಟನೆ ನಿರ್ದೇಶನದ ಎಮರ್ಜೆನ್ಸಿ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಸೃಷ್ಟಿಯಾಗಿತ್ತು. ಕಳೆದ ವಾರ ತೆರೆಗೆ ಬಂದಿರೋ ಸಿನಿಮಾ ನಿರೀಕ್ಷೆಯಂತೆ ಬಾಕ್ಸ್ ಆಫೀಸ್ನಲ್ಲಿ ಕಲೆಕ್ಷನ್ ಮಾಡುತ್ತಿಲ್ಲ.
ಶಾಹೀದ್ ಕಪೂರ್ ನಟನೆಯ ಆಕ್ಷನ್ ಥ್ರಿಲ್ಲರ್ ಮೂವಿ ದೇವ ಇದೇ ತಿಂಗಳ ಅಂತ್ಯಕ್ಕೆ ತೆರೆಗೆ ಬರಲಿದೆ. ಸದ್ಯ ರಿಲೀಸ್ ಹೊಸ್ತಿಲಲ್ಲಿ ಬಂದಿರೋ ಸಿನಿಮಾದ ಟ್ರೈಲರ್ ಸಖತ್ ಸದ್ದು ಮಾಡ್ತಾ ಇದೆ. ಜಸ್ಟ್ ಎರಡೇ ದಿನಗಳಲ್ಲಿ 30 ಮಿಲಿಯನ್ ವಿವ್ಸ್ ಪಡೆದಿರೋ ದೇವ ಟ್ರೈಲರ್ ಹೊಸ ದಾಖಲೆ ಬರೆದಿದೆ. ಪೂಜಾ ಹೆಗ್ಡೆ ಈ ಸಿನಿಮಾದಲ್ಲಿ ಶಾಹೀದ್ ಜೋಡಿಯಾಗಿ ಮಿಂಚಿದ್ದು, ಶಾಹೀದ್ ಇಲ್ಲಿ ಸೂಪರ್ ಕಾಪ್ ರೋಲ್ನಲ್ಲಿ ಮಿಂಚಿದ್ದಾರೆ. ಶಾಹೀದ್ ಮಾಸ್ ಅವತಾರ ನೋಡಿದವರು ಇದು ಕಬೀರ್ ಸಿಂಗ್ನ ಮೀರಿಸುತ್ತೆ ಅಂತಿದ್ದಾರೆ.
*
ನಟಿ ಕಂ ಸಂಸದೆ ಕಂಗನಾ ರಣಾವತ್ ನಟನೆ ನಿರ್ದೇಶನದ ಎಮರ್ಜೆನ್ಸಿ ಸಿನಿಮಾ ಕಳೆದ ಶುಕ್ರವಾರ ತೆರೆಗೆ ಬಂದಿದೆ. ಇಂದಿರಾ ಗಾಂಧಿ ಕಾಲದ ಎಮರ್ಜೆನ್ಸಿ ಕುರಿತ ಕಥೆಯಾದ್ದರಿಂದ ಈ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಸೃಷ್ಟಿಯಾಗಿತ್ತು. ಸೆನ್ಸಾರ್ನಲ್ಲೂ ಸಿಕ್ಕಾಪಟ್ಟೆ ಸಮಸ್ಯೆ ಎದುರಿಸಿದ್ದ ಸಿನಿಮಾ ಕೊನೆಗೂ ಕಳೆದ ವಾರ ತೆರೆಗೆ ಬಂದಿದೆ. ಆದ್ರೆ ನಿರೀಕ್ಷೆಯಂತೆ ಸಿನಿಮಾಗೆ ಬಾಕ್ಸ್ ಆಫೀಸ್ನಲ್ಲಿ ಸಕ್ಸಸ್ ಮಾತ್ರ ಸಿಕ್ಕಿಲ್ಲ. 60 ಕೋಟಿ ಬಜೆಟ್ನ ಎಮರ್ಜೆನ್ಸಿ ಸಿನಿಮಾ ಮೊದಲೆರಡು ದಿನಗಳಲ್ಲಿ ಜಸ್ಟ್ 6 ಕೋಟಿ ಗಳಿಕೆ ಮಾಡಿದ್ದು, ಬಾಕ್ಸಾಫೀಸ್ ಬಾಂಬ್ ಎನ್ನಿಸಿಕೊಂಡಿದೆ.
*
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕರುನಾಡಿನಲ್ಲಿ ದಂತ ಕಥೆಯಾಗಿದ್ದಾರೆ. ಅಪ್ಪು ಆದರ್ಶಗಳನ್ನ ನೆನಪಿಸುವ ಅನೇಕ ಚಿತ್ರಗಳು ಈಗಾಗಲೇ ನಿರ್ಮಾಣವಾಗಿವೆ. ಇದೀಗ ಮತ್ತೊಂದು ತಂಡ 'ಪುನೀತ್ ನಿವಾಸ' ಎಂಬ ಹೆಸರಿಟ್ಟುಕೊಂಡು ಅಂಥದ್ದೇ ಚಿತ್ರವೊಂದನ್ನ ಪ್ರಾರಂಭಿಸಿದೆ. ಅಶ್ವಿನಿ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಅವರ ಶುಭ ಹಾರೈಕೆಯೂ ಈ ಚಿತ್ರಕ್ಕಿದೆ. ಪುಟ್ಟಣ್ಣ ಕಣಗಾಲ್ ಜತೆ ಸಹಾಯಕರಾಗಿ ಕೆಲಸ ಮಾಡಿದ ನಾಗೇಂದ್ರ ಪ್ರಸಾದ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳ್ತಿದ್ದಾರೆ. ಇತ್ತೀಚೆಗೆ ತ್ಯಾಗರಾಜ ನಗರದ ಗಂಗಮ್ಮ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಮೋಹನ್ ಎಸ್. ಈ ಚಿತ್ರವನ್ನು ನಿರ್ಮಿಸುತ್ತಿದ್ದು ಮಾಸ್ಡರ್ ವಿಠಲ್, ಅಭಿಜಿತ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸ್ತಾ ಇದ್ದಾರೆ.