ಮಲ್ಲಿಗೆ ತೂಕದ ಚೆಲುವೆಯರ ಮೈಮಾಟದ ಗುಟ್ಟು, ಸಪೂರ ಸುಂದರಿ ಸಾರಾ ಅಲಿ ಖಾನ್ ವರ್ಕೌಟ್ ಗಮ್ಮತ್ತು

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಜಿಮ್‌ನಲ್ಲಿ ವರ್ಕೌಟ್ ಮಾಡುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಫಿಟ್‌ನೆಸ್ ಫ್ರೀಕ್ ಆಗಿರುವ ಸಾರಾ, ತನ್ನ ಜಿಮ್ ಮತ್ತು ವರ್ಕೌಟ್ ವೀಡಿಯೊಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಒಂದು ಕಾಲದಲ್ಲಿ ದಪ್ಪಗಿದ್ದ ಸಾರಾ, ಈಗ ಜಿಮ್‌ನಲ್ಲಿ ಬೆವರು ಹರಿಸಿ ಸ್ಲಿಮ್ ಆಗಿದ್ದಾರೆ.

First Published Dec 25, 2024, 1:18 PM IST | Last Updated Dec 25, 2024, 1:18 PM IST

ಸೈಫ್ ಅಲಿ ಖಾನ್ ಪುತ್ರಿ , ಬಾಲಿವುಡ್ ಬೆಡಗಿ ಸಾರಾ ಅಲಿ ಖಾನ್ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರ್ತಾಳೆ. ಅದ್ರಲ್ಲೂ ಫಿಟ್​ನೆಸ್ ಫ್ರೀಕ್ ಆಗಿರೋ ಸಾರಾ ತನ್ನ ಜಿಮ್, ವರ್ಕೌಟ್ ವಿಡಿಯೋಸ್ ಆಗಾಗ ಶೇರ್ ಮಾಡ್ತಾನೇ ಇರ್ತಾಳೆ.

ಒಂದೊಮ್ಮೆ ಸಿಕ್ಕಾಪಟ್ಟೆ ದಡೂತಿಯಾಗಿದ್ದ ಸಾರಾ ಜಿಮ್​ನಲ್ಲಿ ಬೆವರು ಹರಿಸಿನೇ ಇಷ್ಟು ಸಪೂರವಾಗಿರೋದು. ಈ ಶ್ವೇತ ವರ್ಣದ ಸಪೂರ ಸುಂದರಿ ಜಿಮ್​ನಲ್ಲಿ ತನ್ನ ದೇಹವನ್ನ ದಂಡಿಸಿ ವರ್ಕೌಟ್ ಮಾಡ್ತಿದ್ರೆ, ಈ ವಿಡಿಯೋಸ್ ನೋಡುವ ಹುಡುಗರ ಹೃದಯ ಘಾಸಿಯಾಗೋದು ಫಿಕ್ಸ್.

ಹಲವು ಬಾರಿ ಫಿಟ್ ನೆಸ್ ಚಾಲೆಂಜ್​ಗಳನ್ನ ಹಾಕಿ ವರ್ಕೌಟ್ ವಿಡಿಯೋಸ್ ಮಾಡಿರೋ ಸಾರಾ, ಸೋಷಿಯಲ್ ಮಿಡಿಯಾದಲ್ಲಿ ಕಿಚ್ಚು ಹಚ್ತಾ ಇರ್ತಾಳೆ. ಸಾರಾ ಸೌಂದರ್ಯ ಪೂರಾ ಸವೀಬೇಕು ಅಂದ್ರೆ ನೀವು ಈ ವಿಡಿಯೋಸ್​ ಮತ್ತೆ ಮತ್ತೆ ನೋಡಬೇಕು.