ಕಿಚ್ಚ ಸುದೀಪ್​ಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಬಿಗ್ ಬಾಸ್ ತಂಡ : ಯೋಗರಾಜ್ ಭಟ್ ಹಾಡಿಗೆ ಧ್ವನಿಯಾದ ಸಾನ್ವಿ ಸುದೀಪ್!

11 ಸೀನಸ್ ಯಶಸ್ವಿಯಾಗಿ ನಿರೂಪಣೆ ಮಾಡಿದ ಸುದೀಪ್​ಗೆ ಬಿಗ್ ಬಾಸ್ ಕೂಡ ಒಂದು ಸ್ಪೆಷಲ್ ಗಿಫ್ಟ್ ಕೊಟ್ಟಿದ್ದು, ಅದು ಕಿಚ್ಚನ ಕಣ್ಣಲ್ಲಿ ನೀರು ತರಿಸಿತು. ಏನದು?

Share this Video
  • FB
  • Linkdin
  • Whatsapp

ಕಿಚ್ಚ ಸುದೀಪ್ ಪಾಲಿಗೆ ಇದು ಕೊನೆಯ ಬಿಗ್ ಬಾಸ್ ಸೀಸನ್. ಕಿಚ್ಚನ ಕೊನೆಯ ಸೀಸನ್​ನ ಫಿನಾಲೆ ನಿರೂಪಣೆಯನ್ನ ನೋಡ್ಲಿಕ್ಕೆ ಖುದ್ದು ಸುದೀಪ್ ತಂದೆ ಸರೋವರ ಸಂಜೀವ ಹಾಜರಾಗಿದ್ರು. ಅಪ್ಪನ ಮುಂದೆ ನಿರೂಪಣೆ ಮಾಡಿದ್ದು ಕಿಚ್ಚನಿಗೂ ಸವಾಲ್ ನಂತಿತ್ತು. ಜೊತೆಗೆ 11 ಸೀನಸ್ ಯಶಸ್ವಿಯಾಗಿ ನಿರೂಪಣೆ ಮಾಡಿದ ಸುದೀಪ್​ಗೆ ಬಿಗ್ ಬಾಸ್ ಕೂಡ ಒಂದು ಸ್ಪೆಷಲ್ ಗಿಫ್ಟ್ ಕೊಟ್ಟಿದ್ದು, ಅದು ಕಿಚ್ಚನ ಕಣ್ಣಲ್ಲಿ ನೀರು ತರಿಸಿತು. ಯೆಸ್ ಕಿಚ್ಚ ಸುದೀಪ್ ಬಿಗ್ ಬಾಸ್ ಸೀಸನ್ -11 ಮುಗಿಸಿಕೊಟ್ಟು ಈ ಸುದೀರ್ಘ ಜರ್ನಿಗೆ ವಿದಾಯ ಹೇಳಿದ್ದಾರೆ. ಸುದೀಪ್ ಇನ್ಮುಂದೆ ಬಿಗ್ ಬಾಸ್ ವೇದಿಕೆಯಲ್ಲಿ ನೋಡೋದಕ್ಕೆ ಸಿಕ್ಕೋದಿಲ್ಲ ಅನ್ನೋ ಕಾರಣಕ್ಕೆ ಎಲ್ಲರೂ ನಾಲ್ಕು ಕಣ್ಣಾಗಿ ಬಿಗ್ ಬಾಸ್ ಫಿನಾಲೆ ನೋಡಿದ್ದಾರೆ. ಖುದ್ದು ಸುದೀಪ್ ತಂದೆ ಸರೋವರ ಸಂಜೀವ್ ಕೂಡ ಸ್ಟುಡಿಯೋಗೆ ಬಂದು ಮಗನನ್ನು ಕೊನೆಯ ಬಾರಿ ಬಿಗ್‌ಬಾಸ್‌ ವೇದಿಕೆ ಮೇಲೆ ನೋಡಿ ಖುಷಿ ಪಟ್ಟಿದ್ದಾರೆ. ಇನ್ನೂ ಹನ್ನೊಂದು ಸೀಸನ್ ಯಶಸ್ವಿಯಾಗಿ ನಡೆಸಿಕೊಟ್ಟ ಸಾರಥಿ ಸುದೀಪ್​ಗೆ ಬಿಗ್ ಬಾಸ್ ಕೂಡ ಒಂದು ವಿಶೇಷ ಗಿಫ್ಟ್ ಕೊಟ್ರು. ಇತ್ತೀಚಿಗೆ ಅಗಲಿದ ಸುದೀಪ್ ತಾಯಿಯ ಕುರಿತು ಒಂದು ಸಾಂಗ್ ಮಾಡಿ ಸ್ಟೇಜ್ ಮೇಲೆ ಪ್ರಸ್ತುತ ಪಡಿಸಿದ್ರು. ಇದನ್ನ ಕುಳಿತುಕೊಂಡು ನೋಡಿದ ಸುದೀಪ್ ಭಾವುಕರಾಗಿ ಕಣ್ಣೀರು ಹಾಕಿದ್ರು. ಯೋಗರಾಜ್ ಭಟ್ಟರು ಬರೆದ ಈ ಹಾಡಿಗೆ ಸುದೀಪ್ ಪುತ್ರಿ ಸಾನ್ವಿ ಧ್ವನಿಯಾಗಿದ್ದು ವಿಶೇಷ. ಇದು ಸುದೀಪ್​ಗೆ ಮತ್ತಷ್ಟು ಖುಷಿ ತಂದುಕೊಟ್ತು. ಒಟ್ಟಾರೆ ಈ ಸಾರಿಯ ಬಿಗ್ ಬಾಸ್ ಸುದೀಪ್​ಗೂ ತುಂಬಾನೇ ಸ್ಪೆಷಲ್ ಆದ ಉಡುಗೊರೆ ಕೊಟ್ಟಿದೆ.

Related Video