Asianet Suvarna News Asianet Suvarna News

'ಕೆಡಿ' ಅಡ್ಡಕ್ಕೆ ಬಂದ ಸಂಜಯ್ ದತ್: 'ಅಧೀರ'ನ ಗ್ರ್ಯಾಂಡ್ ಎಂಟ್ರಿ ಹೇಗಿರಲಿದೆ ಗೊತ್ತಾ?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಮೂವಿ 'ಕೆಡಿ' ಅಡ್ಡಕ್ಕೆ ಬಾಲಿವುಡ್ ನಟ ಸಂಜಯ್ ದತ್ ಎಂಟ್ರಿ ಕೊಟ್ಟಿದ್ದಾರೆ. 

ಕೆಡಿ ಸಿನಿಮಾದಲ್ಲಿ ಸಂಜಯ್ ದತ್ ರೆಟ್ರೋ ಸ್ಟೈಲ್'ನಲ್ಲಿ ಕಾಣಿಸಿಕೊಳ್ತಿದ್ದು, ಇದಕ್ಕಾಗಿ ವರ್ಕೌಟ್ ಮಾಡಿ ದೇಹ ದಂಡಿಸಿರುವ ಅಧಿರನ ಲುಕ್ ಕೂಡ ಡಿಫ್ರೆಂಡ್ ಆಗಿರಲಿದೆ. ಕೆಡಿ ಶೂಟಿಂಗ್ ಶುರು ಮಾಡಿರುವ ನಿರ್ದೇಶಕ ಜೋಗಿ ಪ್ರೇಮ್, ಸಂಜಯ್ ದತ್ ಅವರನ್ನು ಗ್ರ್ಯಾಂಡ್ ಆಗಿ ಇಂಟ್ರಡ್ಯೂಸ್ ಮಾಡೋದಕ್ಕೆ ಪ್ಲಾನ್ ಮಾಡಿದ್ದಾರೆ. ಹೀಗಾಗಿ ಸಂಜಯ್ ದತ್ ಕೆಡಿ ಸಿನಿಮಾದಲ್ಲಿ ಆ್ಯಕ್ಷನ್ ದೃಶ್ಯದಿಂದಲೇ ಎಂಟ್ರಿ ಕೊಡ್ತಾರಂತೆ. ಸುಮಾರು ಎರಡು ಕೋಟಿಗೂ ಅಧಿಕ ಬಂಡವಾಳದಲ್ಲಿ ಸಂಜಯ್ ದತ್ ಆಕ್ಷನ್ ಸೀಕ್ವೆನ್ಸ್ ಶೂಟಿಂಗ್ ಮಾಡಲಾಗ್ತಿದೆ. ಕೆಡಿ ಸಿನಿಮಾಗಾಗಿ 13 ಕೋಟಿ ಸಂಭಾವನೆ ಅಧೀರನ ಜೇಬು ಸೇರಿದೆಯಂತೆ. ಕೆಡಿ ಸೆಟ್ಟಿನಲ್ಲಿ 45 ದಿನಗಳ ಕಾಲ ಸಂಜಯ್ ದತ್ ಇರ್ತಾರೆ. ಸಧ್ಯಕ್ಕೆ ಆಕ್ಷನ್ ದೃಶ್ಯದ ಚಿತ್ರೀಕರಣ ನಡೆಯುತ್ತಿದೆ.

ನಶೆಯಲ್ಲಿದ್ದ ಯುವಕ ಕೆಟ್ಟದಾಗಿ ವರ್ತಿಸಿದ: ಸಾನ್ಯಾ ಅಯ್ಯರ್

Video Top Stories