Asianet Suvarna News Asianet Suvarna News

ಹೆಸರಿನ ಜೊತೆಗಿದ್ದ ಗಂಡನ ಹೆಸರು ತೆಗೆದ ಸಮಂತಾ: ಕ್ಯೂಟ್ ಜೋಡಿ ಮಧ್ಯೆ ಏನಾಯ್ತು ?

Aug 1, 2021, 4:14 PM IST

ಸೌತ್‌ನ ಕ್ಯೂಟ್ ಜೋಡಿಗಳಲ್ಲಿ ಒಂದು ಸಮಂತಾ ಹಾಗೂ ನಾಗಚೈತನ್ಯರ ಜೋಡಿ. ಸಿನಿಮಾ, ಖಾಸಗಿ ಜೀವನ, ಬ್ಯುಸಿನೆಸ್ ಎಲ್ಲದರೂ ಸೂಪರ್ ಈ ಟಾಲಿವುಡ್ ಜೋಡಿ. ಆದರೆ ಇತ್ತೀಚೆಗೆ ನಟಿ ಸಮಂತಾ ಅವರ ನಡೆ ಅವರ ಅಭಿಮಾನಿಗಳಲ್ಲಿ ಅಚ್ಚರಿಗೆ ಕಾರಣವಾಗಿದೆ. ಟ್ವಿಟರ್, ಇನ್‌ಸ್ಟಾಗ್ರಾಂನಲ್ಲಿ ತಮ್ಮ ಪತಿಯ ಹೆಸರನ್ನೇ ತೆಗೆದು ಬಿಟ್ಟಿದ್ದಾರೆ ನಟಿ.

ಟ್ವಿಟರ್‌ನಲ್ಲಿ ಗಂಡ ಅಕ್ಕಿನೇನಿ ಹೆಸರಿಗೆ ಕೊಕ್ ನೀಡಿದ ಸಮಂತಾ!

ಇತ್ತೀಚೆಗೆ ಬಾಲಿವುಡ್‌ನಲ್ಲಿ ವಿಚ್ಛೇದನೆ ಸದ್ದು ಹೆಚ್ಚಾಗಿದ್ದು, ಸಮಂತಾರ ಈ ನಡೆ ಅವರ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ. ಅಭಿಮಾನಿಗಳು ನಟಿಯ ಈ ನಡೆಗೆ ಕಾರಣವೇನೆಂದು ತಲೆಕೆಡಿಸಿಕೊಂಡಿದ್ದಾರೆ. ಅಷ್ಟಕ್ಕೂ ಸಮಂತಾಗೆ ಏನಾಯ್ತು ? ಈ ನಡೆಗೆ ಕಾರಣವೇನು ? ಇಲ್ಲಿದೆ ಡಿಟೇಲ್ಸ್