Salman Khan: ಬಿಗ್‌ಬಾಸ್ ವೇದಿಕೆ ಮೇಲೆ ಶುಕ್ಲಾ ನೆನೆದು ಕಣ್ಣೀರಿಟ್ಟ ಬಾಲಿವುಡ್ ಸುಲ್ತಾನ್
ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 15 ಮುಕ್ತಾಯವಾಗಿದೆ. ಗ್ರ್ಯಾಂಡ್ ಫಿನಾಲೆಗೆ ನಿರೂಪಕ ಸಲ್ಮಾನ್ ಖಾನ್ ಇನ್ನಷ್ಟು ರಂಗು ತುಂಬಿದ್ದಾರೆ. ಇದೆಲ್ಲದರ ನಡುವೆ ನಟಿ ಶೆಹನಾಜ್ ಗಿಲ್ ಅವರು ಬಿಗ್ ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ.
ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 15 ಮುಕ್ತಾಯವಾಗಿದೆ. ಗ್ರ್ಯಾಂಡ್ ಫಿನಾಲೆಗೆ ನಿರೂಪಕ ಸಲ್ಮಾನ್ ಖಾನ್ (Salman Khan) ಇನ್ನಷ್ಟು ರಂಗು ತುಂಬಿದ್ದಾರೆ. ಇದೆಲ್ಲದರ ನಡುವೆ ನಟಿ ಶೆಹನಾಜ್ ಗಿಲ್ (Shenaaz Gill) ಅವರು ಬಿಗ್ ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಪ್ರಿಯಕರ ಸಿದ್ದಾರ್ಥ್ ಶುಕ್ಲಾ (Sidharth Shukla) ಅವರ ಸಾವನ್ನು ಅವರಿಂದ ಇನ್ನೂ ಕೂಡ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ವೇದಿಕೆ ಮೇಲೆ ಒಂದು ಕ್ಷಣ ಮೌನವಾದ ಶೆಹನಾಜ್‌ಗೆ ತಮ್ಮ ಕಣ್ಣೀರನ್ನು ನಿಯಂತ್ರಿಸಲು ಆಗಲಿಲ್ಲ. ಅವರು ಭಾವುಕರಾಗುತ್ತಿದ್ದಂತೆಯೇ, ಅವರನ್ನು ಸ್ವಾಗತಿಸಿದ ಸಲ್ಮಾನ್ ಖಾನ್ ಕೂಡ ಭಾವುಕರಾಗಿ ಕಣ್ಣೀರು ಹಾಕಿದರು.
KGF 2: ಯಶ್ ಜೊತೆ ಸೊಂಟ ಬಳುಕಿಸಿದ್ದಾರಂತೆ ಬಾಲಿವುಡ್ ನಟಿ ನೋರಾ ಫತೇಹಿ
ನಂತರ ಶೆಹನಾಜ್‌ಗೆ ಸಮಾಧಾನ ಮಾಡಿದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್ (Viral) ಆಗಿದೆ. ಅಂದಹಾಗೆ, ಬಿಗ್ ಬಾಸ್ ಸೀಸನ್ 13ರಲ್ಲಿ ಸ್ಪರ್ಧಿಯಾಗಿ ಶೋಗೆ ಎಂಟ್ರಿ ಕೊಟ್ಟಿದ್ದರು ಶೆಹನಾಜ್. ಅದೇ ಶೋಗೆ ಸಿದ್ದಾರ್ಥ್ ಶುಕ್ಲಾ ಕೂಡ ಬಂದಿದ್ದರು. ಕೊನೆಗೆ ಅವರು ಶೋನ ವಿನ್ನರ್ ಕೂಡ ಆದರು. ಜೊತೆಗೆ ಶೆಹನಾಜ್-ಸಿದ್ದಾರ್ಥ್ ಪ್ರೀತಿಗೆ ಬಿಗ್ ಬಾಸ್ ಶೋ ವೇದಿಕೆ ಆಗಿತ್ತು. ವಿಪರ್ಯಾಸವೆಂದರೆ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸಿದ್ದಾರ್ಥ್ ಹೃದಯಾಘಾತಕ್ಕೆ ಬಲಿಯಾದರು.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment