ಒಂದೇ ಕಡೇ ಸಲ್ಲು-ಕಮಲ್-ಚಿರಂಜೀವಿ: ಮೆಗಾ ಸ್ಟಾರ್ ಮನೆಯಲ್ಲಿ ಸ್ಟಾರ್‌ಗಳ ಗೆಟ್ ಟು ಗೆದರ್

ಕಮಲ್ ಹಾಸನ್ ಅಭಿನಯದ ವಿಕ್ರಮ್ ಸಿನಿಮಾ ತೆರೆ ಕಂಡು ಭರ್ಜರಿ ಸಕ್ಸಸ್ ಕಂಡಿದೆ. ಬಾಕ್ಸ್ ಆಫೀಸ್ ಲೂಟಿ ಹೊಡೆದಿರೋ ವಿಕ್ರಮ್ ಸಿನಿಮಾದ ಯಶಸ್ಸನ್ನ ನಟ ಚಿರಂಜೀವಿ ತಮ್ಮ ಮನೆಯಲ್ಲಿ ಸಂಭ್ರಮಿಸಿದ್ರು. ಈ ಮೂಲಕ ಗೆಳೆಯನ ಗೆಲುವು ತನ್ನ ಗೆಲುವೆಂದು ಆಚರಿಸಿದ್ರು. 

Share this Video
  • FB
  • Linkdin
  • Whatsapp

ಕಮಲ್ ಹಾಸನ್ ಅಭಿನಯದ ವಿಕ್ರಮ್ (Vikram) ಸಿನಿಮಾ ತೆರೆ ಕಂಡು ಭರ್ಜರಿ ಸಕ್ಸಸ್ ಕಂಡಿದೆ. ಬಾಕ್ಸ್ ಆಫೀಸ್ ಲೂಟಿ ಹೊಡೆದಿರೋ ವಿಕ್ರಮ್ ಸಿನಿಮಾದ ಯಶಸ್ಸನ್ನ ನಟ ಚಿರಂಜೀವಿ ತಮ್ಮ ಮನೆಯಲ್ಲಿ ಸಂಭ್ರಮಿಸಿದ್ರು. ಈ ಮೂಲಕ ಗೆಳೆಯನ ಗೆಲುವು ತನ್ನ ಗೆಲುವೆಂದು ಆಚರಿಸಿದ್ರು.

ಕಮಲ್ ಹಾಸನ್ ಅವ್ರ ವಿಕ್ರಮ್ ಸಿನಿಮಾ ಗೆಲುವನ್ನ ಮೆಗಾ ಸ್ಟಾರ್ ಮನೆಯಲ್ಲಿ ಆಚರಣೆ ಮಾಡಲಾಯ್ತು. ಇದೇ ಸಂದರ್ಭದಲ್ಲಿ ಸಲ್ಮಾನ್ ಕೂಡ ಮೆಗಾ ಸ್ಟಾರ್ ಮನೆಗೆ ಬೇಟಿ ಕೊಟ್ಟು ಕಮಲ್ ಹಾಸನ್ ಹಾಗೂ ನಿರ್ದೇಶಕ ಲೋಕೇಶ್ ಕನಕರಾಜ್ ಅವ್ರಿಗೆ ಅಭಿನಂದನೆ ಸಲ್ಲಿಸಿದ್ರು.

ರಕ್ಷಿತ್ ಶೆಟ್ಟಿ ಹೈ ಕ್ವಾಲಿಟಿ ಸಿನಿಮಾಗಳನ್ನು ಕೊಟ್ಟಿದ್ದಾರೆ; ಚಾರ್ಲಿ ನೋಡಿ ತೇಜಸ್ವಿ ಸೂರ್ಯ ಪ್ರತಿಕ್ರಿಯೆ

ಮೆಗಾ ಸ್ಟಾರ್ ಚಿರಂಜೀವಿ ಫ್ಯಾಮಿಲಿಯಲ್ಲಿ ಕಮಲ್ ಹಾಸನ್ ಅವ್ರ ಗೆಲುವನ್ನ ಸಂಭ್ರಮಿಸಿತ್ತಿರೋದು ಇದೇ ಮೊದಲಲ್ಲ. ಈ ಹಿಂದೆ ಚಿರಂಜೀವಿ ಅವರು ಕಮಲ್ ಹಾಸನ್ ಅವರ ಸಿನಿಮಾವೊಂದರ ಯಶಸ್ಸಿನ ಪಾರ್ಟಿಯನ್ನು ಆಯೋಜಿಸಿದ್ದರು. 1986 ರಲ್ಲಿ ಬಿಡುಗಡೆಯಾದ ಸ್ವಾತಿಮುತ್ಯಂ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಆ ಸಮಯದಲ್ಲಿ ಸಹ ಮೆಗಾಸ್ಟಾರ್ ಕಮಲ್ ಹಾಸನ್ (Kamal hassan) ಅವರಿಗಾಗಿ ಪಾರ್ಟಿ ಹಮ್ಮಿಕೊಂಡಿದ್ದರು. ಅಲ್ಲದೇ, ಅವರಿಗೆ ಕಾಣಿಕೆಯನ್ನು ಸಹ ಕೊಟ್ಟಿದ್ದರಂತೆ. ಒಟ್ಟಾರೆ ವಿಕ್ರಮ್ ಸಿನಿಮಾದ ಗೆಲುವಿನ ಓಟ ಜೋರಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ನೂರು ಕೋಟಿ ಗಳಿಕೆ ಮಾಡಿ ಕೋಟಿ ಕೋಟಿ ಗಳಿಕೆ ಮಾಡಲಿದೆ. 

Related Video