RRR Movie: ರಾಜಮೌಳಿ ಸಿನಿಮಾದಲ್ಲಿ ಗರಿಷ್ಠ ಸಂಭಾವನೆ ಪಡೆದವರು ಯಾರು?

ಜನವರಿ 7ರಂದು ವಿಶ್ವಾದ್ಯಂತ ತೆರೆಗೆ ಬರಲಿರುವ 'ಆರ್‌ಆರ್‌ಆರ್' ಸಿನಿಮಾ ಬಗ್ಗೆ ಕ್ರೇಜ್ ಜೋರಾಗಿಯೇ ಇದೆ. ಈಗಾಗಲೇ ಚಿತ್ರದ ಟ್ರೇಲರ್ ಧೂಳೆಬ್ಬಿಸಿದೆ. ರಾಮ್​ ಚರಣ್ , ಜ್ಯೂ. ಎನ್​ಟಿಆರ್ ಅಭಿಮಾನಿಗಳು ಈ ಸಿನಿಮಾ ಮೇಲೆ ಸಖತ್​ ಭರವಸೆ ಇಟ್ಟುಕೊಂಡಿದ್ದಾರೆ. ಇದೀಗ 'ಆರ್​ಆರ್​ಆರ್' ತಂಡದವರ ಸಂಭಾವನೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. 

First Published Dec 30, 2021, 12:41 PM IST | Last Updated Dec 30, 2021, 12:41 PM IST

ಜನವರಿ 7ರಂದು ವಿಶ್ವಾದ್ಯಂತ ತೆರೆಗೆ ಬರಲಿರುವ 'ಆರ್‌ಆರ್‌ಆರ್' (RRR) ಸಿನಿಮಾ ಬಗ್ಗೆ ಕ್ರೇಜ್ ಜೋರಾಗಿಯೇ ಇದೆ. ಈಗಾಗಲೇ ಚಿತ್ರದ ಟ್ರೇಲರ್ ಧೂಳೆಬ್ಬಿಸಿದೆ. ರಾಮ್​ ಚರಣ್​ (Ram Charan), ಜ್ಯೂ. ಎನ್​ಟಿಆರ್ (Jr.NTR)​ ಅಭಿಮಾನಿಗಳು ಈ ಸಿನಿಮಾ ಮೇಲೆ ಸಖತ್​ ಭರವಸೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಘಟಾನುಘಟಿಗಳ ತಾರಾಗಣವಿದೆ. ಇದೀಗ 'ಆರ್​ಆರ್​ಆರ್' ತಂಡದವರ ಸಂಭಾವನೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಜ್ಯೂ.ಎನ್‌ಟಿಆರ್, ರಾಮ್ ಚರಣ್, ಅಲಿಯಾ ಭಟ್, ಅಜಯ್ ದೇವಗನ್ ಸೇರಿದಂತೆ ದಿಗ್ಗಜ ಕಲಾವಿದರ ಪೈಕಿ ಅತೀ ಹೆಚ್ಚು ಸಂಭಾವನೆ ಪಡೆದವರು ಯಾರು ಗೊತ್ತೇ?

RRR Kannada Dubbing: ತೆಲುಗು ನಟರು ಕನ್ನಡದಲ್ಲಿ ಸಣ್ಣ ತಪ್ಪು ಮಾಡಿದರೂ ಎದ್ದು ಕಾಣುತ್ತೆ?

ಮೂಲಗಳ ಪ್ರಕಾರ ಜ್ಯೂ.ಎನ್ ಟಿಆರ್ ಮತ್ತು ರಾಮ್ ಚರಣ್ ತಲಾ 45 ಕೋಟಿ ರೂ., ಅಜಯ್ ದೇವಗನ್ 25 ಕೋಟಿ ರೂ., ಅಲಿಯಾ ಭಟ್ 9 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. ಮುಖ್ಯವಾಗಿ ರಾಜಮೌಳಿ ಅವರಿಗೆ ಭಾರತೀಯ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಅವರು ಈ ಸಿನಿಮಾದ ಲಾಭದಲ್ಲಿ ಶೇ.30ರಷ್ಟು ಪಾಲು ಪಡೆಯಲಿದ್ದಾರೆ ಎನ್ನಲಾಗಿದೆ. ಆದರೆ ಈ ಯಾವ ವಿಚಾರಗಳ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಮಾತನಾಡಿಲ್ಲ. ಈ ಸಿನಿಮಾವನ್ನು ಡಿವಿವಿ ದಾನಯ್ಯ ನಿರ್ಮಾಣ ಮಾಡಿದ್ದು, ಎಸ್‌.ಎಸ್‌.ರಾಜಮೌಳಿ (SS Rajamouli) ನಿರ್ದೇಶನದ ಈ ಸಿನಿಮಾಗಿರುವ ಹೈಪ್ ನೋಡಿದರೆ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ಮಾಡುವುದು ಗ್ಯಾರಂಟಿ ಎನ್ನಲಾಗಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories