ರಿಷಬ್​ ಶೆಟ್ಟಿ ಹಿಂದಿನ ಸ್ತ್ರೀ ಶಕ್ತಿ ಪ್ರಗತಿ ಶೆಟ್ಟಿ: ಮನೆ, ಸೆಟ್​ನಲ್ಲಿ ಪ್ರಗತಿ ಡಬಲ್ ರೋಲ್!

ಕಾಂತಾರ ಚಾಪ್ಟರ್-1 ರಿಲೀಸ್​ಗೆ ಕೌಂಟ್​ಡೌನ್ ಸ್ಟಾರ್ಟ್ ಆಗಿದೆ. ನಾಳೆ ಸಿನಿಮಾ 7 ಭಾಷೆಗಳಲ್ಲಿ 30 ದೇಶಗಳಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ. ಇಂಥದ್ದೊಂದು ದೊಡ್ಡ ಕ್ಯಾನ್ವಾಸ್​ನ ಸಿನಿಮಾವನ್ನ ರಿಷಬ್ ಅಂದುಕೊಂಡ ಸಮಯಕ್ಕೆ ಮುಗಿಸಿ ತೆರೆಗೆ ತಂದಿದ್ದಾರೆ.

Share this Video
  • FB
  • Linkdin
  • Whatsapp

ಕಾಂತಾರ ಚಾಪ್ಟರ್-1 ರಿಲೀಸ್​ಗೆ ಕೌಂಟ್​ಡೌನ್ ಸ್ಟಾರ್ಟ್ ಆಗಿದೆ. ನಾಳೆ ಸಿನಿಮಾ 7 ಭಾಷೆಗಳಲ್ಲಿ 30 ದೇಶಗಳಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ. ಇಂಥದ್ದೊಂದು ದೊಡ್ಡ ಕ್ಯಾನ್ವಾಸ್​ನ ಸಿನಿಮಾವನ್ನ ರಿಷಬ್ ಅಂದುಕೊಂಡ ಸಮಯಕ್ಕೆ ಮುಗಿಸಿ ತೆರೆಗೆ ತಂದಿದ್ದಾರೆ. ರಿಷಬ್ ಇಷ್ಟು ದೊಡ್ಡ ಸಾಹಸ ಮಾಡಿದ್ದಾರೆ ಅಂದ್ರೆ ಅದರ ಹಿಂದಿರೋದು ಒಂದು ಸ್ತ್ರೀ ಶಕ್ತಿ. ಯೆಸ್ ಕಾಂತಾರ ಚಾಪ್ಟರ್ -1 ರಿಲೀಸ್​ಗೆ ಇನ್ನೂ ಕೆಲವೇ ಗಂಟೆ ಬಾಕಿ ಇವೆ. 7 ಭಾಷೆಗಳಲ್ಲಿ , 30 ದೇಶಗಳಲ್ಲಿ ಸಿನಿಮಾ ತೆರೆಗೆ ಬರ್ತಾ ಇದೆ. ಕನ್ನಡದ ಕಥೆಯೊಂದನ್ನ ಇಡೀ ವಿಶ್ವವೇ ಕುತೂಹಲದಿಂದ ನೋಡ್ತಾ ಇದೆ.

ಇಂಥದ್ದೊಂದು ದೊಡ್ಡ ಬಜೆಟ್​ನ , ದೊಡ್ಡ ಕ್ಯಾನ್ವಾಸ್​ನ ಸಿನಿಮಾವನ್ನ ಅಂದುಕೊಂಡ ಸಮಯಕ್ಕೆ ಮುಗಿಸಿ ತೆರೆಗೆ ತಂದಿರೋ ರಿಷಬ್ ಸಾಹಸವನ್ನ ಎಲ್ಲರೂ ಮೆಚ್ಚಿ ಕೊಂಡಾಡ್ತಾ ಇದ್ದಾರೆ. ಎಲ್ಲರೂ ರಿಷಬ್ ಈಸ್ ಗ್ರೇಟ್ ಅಂತಾ ಇದ್ರೆ ರಿಷಬ್ ಮಾತ್ರ ಆ ಕ್ರೆಡಿಟ್​ನ ಕೊಡೋದು ತಮ್ಮ ಪತ್ನಿ ಪ್ರಗತಿ ಶೆಟ್ಟಿಗೆ. ಹೌದು ಪ್ರಗತಿ ಒಂದು ಕಡೆ ರಿಷಬ್​ ಅರ್ಧಾಂಗಿಯಾಗಿ ಅವರ ಕುಟುಂಬದ ಜವಾಬ್ದಾರಿ ನೋಡಿಕೊಂಡ್ರೆ ಮತ್ತೊಂದು ಕಡೆಗೆ ಸಿನಿಮಾ ವಸ್ತ್ರ ವಿನ್ಯಾಸಕಾರ್ತಿಯಾಗೂ ಕೆಲಸ ಮಾಡಿದ್ದಾರೆ. ಕಾಂತಾರ ಚಾಪ್ಟರ್​-1ನಲ್ಲಿ ಎಲ್ಲರೂ ಇಷ್ಟು ಚೆಂದಗಾಣ್ತಾ ಇದ್ದಾರೆ ಅಂದ್ರೆ ಅದಕ್ಕೆ ಪ್ರಗತಿ ಶೆಟ್ಟಿ ಕಾರಣ. 4-5ನೇ ಶತಮಾನದ ಕಥೆಯುಳ್ಳ ಸಿನಿಮಾಗೆ ತಕ್ಕ ರಿಸರ್ಚ್ ಮಾಡಿ , ಕಾಸ್ಟ್ಯೂಮ್ ಡಿಸೈನ್ ಮಾಡಿರೋದು ಪ್ರಗತಿ.

ಇನ್ನೂ ರಿಷಬ್​​ ಪಾಲಿಗೆ ಕಾಂತಾರ ಪಂಚವಾರ್ಷಿಕ ಯೋಜನೆಯಾಗಿತ್ತು. ಸಿನಿಮಾದಲ್ಲಿ ಮುಳುಗಿದ್ದ ರಿಷಬ್​ಗೆ ಮನೆ-ಮಕ್ಕಳ ಕಡೆಗೆ ಗಮನ ಹರಿಸೋದಕ್ಕೂ ಸಮಯ ಇರಲಿಲ್ಲ. ಅತ್ತ ಕುಟುಂಬವನ್ನೂ ಅಚ್ಚುಕಟ್ಟಾಗಿ ನೋಡಿಕೊಳ್ತಾ ಸಿನಿಮಾಕ್ಕೂ ಸಾಥ್ ಕೊಟ್ಟಿದ್ದಾರೆ ಪ್ರಗತಿ. ಇನ್ನೂ ಸಿನಿಮಾದ ಪ್ರಮೋಷನಲ್ ಇವೆಂಟ್​ಗಳಿಗೂ ಹೋಗಿ ಪ್ರಗತಿ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಒಟ್ಟಾರೆ ಪ್ರಗತಿ ಬಂದ ಮೇಲೆ ರಿಷಬ್ ಶೆಟ್ಟರ ಲೈಫ್​ನಲ್ಲಿ ನಿರಂತರವಾಗಿ ಪ್ರಗತಿಯಾಗ್ತಾನೇ ಇದೆ. ಸೋ ಪ್ರಗತಿ ಅವರನ್ನ ರಿಷಬ್ ಹಿಂದಿನ ಸ್ತ್ರೀಶಕ್ತಿ ಅಂದ್ರೆ ತಪ್ಪಾಗಲ್ಲ.

Related Video