ಕಾಂತಾರ ಹಿಂದಿ ಕಲೆಕ್ಷನ್ ಎಷ್ಟು ಗೊತ್ತಾ?: ಬಾಲಿವುಡ್ ಕಲೆಕ್ಷನ್ ಕೇಳಿದ್ರೆ ಶಾಕ್!

ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ' ಸಿನಿಮಾ ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರದ ಗಳಿಕೆ ಮಾಡುತ್ತಿದೆ. 11 ದಿನಗಳಿಗೆ ಈ ಸಿನಿಮಾದ ಹಿಂದಿ ವರ್ಷನ್‌ನಿಂದಲೇ ಬರೋಬ್ಬರಿ 24.15 ಕೋಟಿ ರೂ. ಹಣ ನಿರ್ಮಾಪಕರಿಗೆ ಸಿಕ್ಕಿದೆ. ಒಟ್ಟಾರೆ ಗಳಿಕೆ 200 ಕೋಟಿ ರೂ. ಸನಿಹದಲ್ಲಿದೆ. 

Share this Video
  • FB
  • Linkdin
  • Whatsapp

ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ' ಸಿನಿಮಾ ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರದ ಗಳಿಕೆ ಮಾಡುತ್ತಿದೆ. 11 ದಿನಗಳಿಗೆ ಈ ಸಿನಿಮಾದ ಹಿಂದಿ ವರ್ಷನ್‌ನಿಂದಲೇ ಬರೋಬ್ಬರಿ 24.15 ಕೋಟಿ ರೂ. ಹಣ ನಿರ್ಮಾಪಕರಿಗೆ ಸಿಕ್ಕಿದೆ. ಒಟ್ಟಾರೆ ಗಳಿಕೆ 200 ಕೋಟಿ ರೂ. ಸನಿಹದಲ್ಲಿದೆ. ಸದ್ಯಕ್ಕಂತೂ ಕಾಂತಾರ ಓಟ ನಿಲ್ಲುವಂತೆ ಕಾಣುತ್ತಿಲ್ಲ. ಈ ಮಧ್ಯೆ 'ಕಾಂತಾರ'ಗೆ ಬಾಲಿವುಡ್‌ನಲ್ಲಿ ದೊಡ್ಡ ಸವಾಲೊಂದು ಎದುರಾಗಿತ್ತು. ಹಾಗಾಗಿ, 'ಕಾಂತಾರ' ಕಲೆಕ್ಷನ್ ಕಮ್ಮಿ ಆಗಬಹುದೇನೋ ಎಂಬ ಲೆಕ್ಕಾಚಾರದ ಮಾತುಗಳು ಕೇಳಿಬಂದಿದ್ದವು. ಆದರೆ ಅದೀಗ ಕಾಂತಾರಗೆ ಸಮಸ್ಯೆಯನ್ನೇನೂ ತರುವುದಿಲ್ಲ ಎಂಬುದು ಗೊತ್ತಾಗಿದೆ. ಇನ್ನು ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್ ಪಾತ್ರ ಗಮನಾರ್ಹವಾಗಿದೆ. ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಕಾಂತಾರ ಮೂಡಿಬಂದಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Related Video