ಸಲೂನ್‌ನಲ್ಲಿ ರಿಯಾ ಚಕ್ರವರ್ತಿ; ಬ್ಲ್ಯಾಕ್ ಡ್ರೆಸ್‌ನಲ್ಲಿ ಮಿಂಚಿದ ಸುಶಾಂತ್ ಸಿಂಗ್ ಪ್ರೇಯಸಿ

ಸುಶಾಂತ್ ಸಿಂಗ್ಈ ಪ್ರಕರಣ ಬಳಿಕ ರಿಯಾ ಚಕ್ರವರ್ತಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ. ಆಗಾಗ ಕ್ಯಾಮರಾ ಮುಂದೆ ಬರುವ ರಿಯಾ ಇತ್ತೀಚಿಗಷ್ಟೆ ಸಲೂನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ರಿಯಾ ಕ್ಯಾಮರಾಗೆ ಕ್ಯೂಟ್ ಪೋಸ್ ನೀಡಿದ್ದಾರೆ.
 

First Published Jul 24, 2022, 4:43 PM IST | Last Updated Jul 24, 2022, 4:43 PM IST

ರಿಯಾ ಚಕ್ರವರ್ತಿ, ಈ ಹೆಸರು ಚಿರಪರಿಚವಾಗಿದ್ದು ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ನಿಧನದ ಬಳಿಕ. ಹೌದು,  ರಿಯಾ ಚಕ್ರವರ್ತಿ, ದಿವಂಗತ ನಟ ಸುಶಾಂತ್ ಸಿಂಗ್ ಜೊತೆ ಪ್ರೀತಿಯಲ್ಲಿದ್ದರು. ಸುಶಾಂತ್ ಸಾವಿನ ಪ್ರಕರಣದಲ್ಲಿ ರಿಯಾ ಹೆಸರು ಸಹ ತಗಲುಹಾಕಿಕೊಂಡಿದೆ. ಡ್ರಗ್ಸ್ ಪ್ರಕರಣದಲ್ಲಿ ರಿಯಾ ಈಗಾಗಲೇ ಜೈಲು ಕೂಡ ಸೇರಿದ್ದರು. ಬಳಿಕ ಜಾಮೀನಿನ ಬಳಿಕ ಹೊರಬಂದಿದ್ದರು. ಸುಶಾಂತ್ ಸಿಂಗ್‌ಗೆ ಡ್ರಗ್ಸ್ ಖರೀದಿ ಮಾಡಿ ಕೊಡುತ್ತಿದ್ದರು ಎಂದು ಎನ್ ಸಿ ಬಿ ಜಾರ್ಜ್ ಶೀಟ್ ಸಲ್ಲಿಸಿದೆ. ಈ ಪ್ರಕರಣ ಬಳಿಕ ರಿಯಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದೇ ಕಡಿಮೆಯಾಗಿತ್ತು. ಆಗಾಗ ಕ್ಯಾಮರಾ ಮುಂದೆ ಬರುವ ರಿಯಾ ಇತ್ತೀಚಿಗಷ್ಟೆ ಸಲೂನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ರಿಯಾ ಕ್ಯಾಮರಾಗೆ ಕ್ಯೂಟ್ ಪೋಸ್ ನೀಡಿದ್ದಾರೆ.
 

Video Top Stories