Asianet Suvarna News Asianet Suvarna News

'ಆಚಾರ್ಯ' ಹಿಂದಿಯಲ್ಲಿ ರಿಲೀಸ್ ಮಾಡಲ್ಲ, ಚಿತ್ರತಂಡದಿಂದ ಸ್ಪಷ್ಟನೆ

ಮೆಗಾಸ್ಟಾರ್ ಚಿರಂಜೀವಿ (Chiranjeevi) ನಟಿಸುತ್ತಿರುವ 'ಆಚಾರ್ಯ' (Acharya) ಸಿನಿಮಾ ಹಲವು ಕಾರಣಕ್ಕೆ ಗಮನ ಸೆಳೆದಿದೆ. ಸಿನಿಮಾದ ಪೋಸ್ಟರ್‌ಗಳು, ಟ್ರೈಲರ್ , ಹಾಡುಗಳು ಸಿನಿಮಾ ಬಗ್ಗೆ ಕುತೂಹಲವನ್ನು ಹೆಚ್ಚಿಸಿವೆ.
 

ಮೆಗಾಸ್ಟಾರ್ ಚಿರಂಜೀವಿ (Chiranjeevi) ನಟಿಸುತ್ತಿರುವ 'ಆಚಾರ್ಯ' (Acharya) ಸಿನಿಮಾ ಹಲವು ಕಾರಣಕ್ಕೆ ಗಮನ ಸೆಳೆದಿದೆ. ಸಿನಿಮಾದ ಪೋಸ್ಟರ್‌ಗಳು, ಟ್ರೈಲರ್ , ಹಾಡುಗಳು ಸಿನಿಮಾ ಬಗ್ಗೆ ಕುತೂಹಲವನ್ನು ಹೆಚ್ಚಿಸಿವೆ.

ಅಂದಹಾಗೆ ಆಚಾರ್ಯ ಸಿನಿಮಾ ದಕ್ಷಿಣ ಭಾರತದ (South Indian Language) ಭಾಷೆಗಳಲ್ಲಿ ಮಾತ್ರ ತೆರೆಗೆ ಬರುತ್ತಿದೆ. ಸದ್ಯ ದಕ್ಷಿಣ ಭಾರತದ ಸಿನಿಮಾಗಳು ಹಿಂದಿಯಲ್ಲಿ ಭರ್ಜರಿ ಸಕ್ಸಸ್ ಕಾಣುತ್ತಿವೆ. ಆರ್ ಆರ್ ಆರ್(RRR) ಮತ್ತು ಕೆಜಿಎಫ್-2(KGF2) ಸಿನಿಮಾ ಬಳಿಕ ಹಿಂದಿಯಲ್ಲಿ ದಕ್ಷಿಣ ಸಿನಿಮಾಗೆ ಬೇಡಿಕೆ ಹೆಚ್ಚಾಗಿದೆ. ಅಲ್ಲದೆ ಪ್ರೇಕ್ಷಕರು ದಕ್ಷಿಣ ಭಾರತದ ಸಿನಿಮಾಗಳನ್ನು ಹೆಚ್ಚು ನೋಡುತ್ತಿದ್ದಾರೆ. ಬಾಲಿವುಡ್ ನಲ್ಲಿ ದೊಡ್ಡ ಮಾರುಕಟ್ಟೆಯೂ ಇದೆ. ತಮಿಳು, ತೆಲುಗು ಮತ್ತು ಕನ್ನಡ ಸಿನಿಮಾಗಳು ಬಾಲಿವುಡ್ ಉತ್ತಮ ಕಲೆಕ್ಷನ್ ಮಾಡುತ್ತಿವೆ. ಹೀಗಿದ್ದರೂ ಆಚಾರ್ಯ ಸಿನಿಮಾವನ್ನು ಹಿಂದಿಯಲ್ಲಿ ಬಿಡುಗಡೆ ಮಾಡದಿರಲು ನಿರ್ಧರಿಸಿದೆ ಸಿನಿಮಾತಂಡ.

ಕೃಷ್ಣ ಅಜಯ್ ರಾವ್ 'ಶೋಕಿವಾಲಾ' ರಾಜ್ಯಾದ್ಯಂತ ಬಿಡುಗಡೆ

ಆರ್ ಆರ್ ಆರ್ ಸಿನಿಮಾ ಸೂಪರ್ ಸಕ್ಸಸ್ ನಲ್ಲಿರುವ ರಾಮ್ ಚರಣ್ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ. ಹಿಂದಿಯಲ್ಲಿ ಆರ್ ಆರ್ ಆರ್ ದಾಖಲೆಯ ಕಲೆಕ್ಷನ್ ಮಾಡಿದೆ. 1000 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಆದರೆ ಆಚಾರ್ಯ ಸಿನಿಮಾನ್ನು ಹಿಂದಿಯಲ್ಲಿ ಬಿಡುಗಡೆ ಮಾಡುತ್ತಿಲ್ಲ. ಈ ಬಗ್ಗೆ ರಾಮ್ ಚರಣ್ ಸ್ಪಷ್ಟನೆ ನೀಡಿದ್ದಾರೆ. ಹಿಂದಿಯಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿಲ್ಲ ಅಲ್ಲದೆ ಈ ಬಗ್ಗೆ ಬೇಸರವೂ ಇಲ್ಲ ಎಂದು ಹೇಳಿದ್ದಾರೆ.
 

Video Top Stories