Asianet Suvarna News Asianet Suvarna News

ಕೃಷ್ಣ ಅಜಯ್ ರಾವ್ 'ಶೋಕಿವಾಲ' ರಾಜ್ಯಾದ್ಯಂತ ಬಿಡುಗಡೆ

ಸ್ಯಾಂಡಲ್‌ವುಡ್‌ನ ಕೃಷ್ಣ ಖ್ಯಾತಿಯ ಅಜಯ್ ರಾವ್ (Ajay Rao) ನಟನೆಯ 'ಶೋಕಿವಾಲ' (Shokiwala) ಸಿನಿಮಾ ತೆರೆಕಂಡಿದೆ.  ಅಜಯ್ ರಾವ್ ಗೆ ಜೊತೆಯಾಗಿ ಸಂಜನಾ ಆನಂದ್  ಅಭಿನಯಿಸಿದ್ದಾರೆ. 

 

ಸ್ಯಾಂಡಲ್‌ವುಡ್‌ನ ಕೃಷ್ಣ ಖ್ಯಾತಿಯ ಅಜಯ್ ರಾವ್ (Ajay Rao) ನಟನೆಯ 'ಶೋಕಿವಾಲ' (Shokiwala) ಸಿನಿಮಾ ತೆರೆಕಂಡಿದೆ.  ಅಜಯ್ ರಾವ್ ಗೆ ಜೊತೆಯಾಗಿ ಸಂಜನಾ ಆನಂದ್  ಅಭಿನಯಿಸಿದ್ದಾರೆ. 

 ಶೋಕಿವಾಲ' ಪಕ್ಕಾ ಹಳ್ಳಿ ಸೊಗಡಿನ ಚಿತ್ರವಾಗಿದ್ದು, ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ಅವರು ನಿರ್ಮಿಸುತ್ತಿದ್ದಾರೆ. ಲಕ್ಕಿ, ಸಂತು ಸ್ಟ್ರೇಟ್ ಫಾರ್ವಡ್, ಕೆಜಿಎಫ್ ಸಿನಿಮಾಗಳಿಗೆ ಸಹ ನಿರ್ದೇಶಕರಾಗಿದ್ದ ಜಾಕಿ  ಮೊದಲ ಬಾರಿಗೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಜಯ್ ರಾವ್ ಔಟ್ ಅಂಡ್ ಔಟ್ ಕಾಮಿಡಿ ರೋಲ್ ಮಾಡಿದ್ದಾರೆ. ಸಂಜನಾ ಆನಂದ್ (Sanjana Anand) ಹಳ್ಳಿ ರಂಬೆ ಬೆಳ್ಳೀ ಬೊಂಬೆಯಂತೆ ಕಾಣ್ತಾರೆ. ಶ್ರೀಧರ್ ವಿ ಸಂಭ್ರಮ್ ಸಂಗೀತ  ಚಿತ್ರಕ್ಕಿದೆ. ಸ್ಯಾಂಡಲ್ವುಡ್ ನಿರ್ದೇಶಕರೆಲ್ಲಾ ಒಂದು ಹಾಡಿನಲ್ಲಿ ಕಾಣಿಸಿಕೊಂಡಿರೋದು ವಿಶೇಷ.

ಶೋಕೀವಾಲಾ ಚಿತ್ರದಲ್ಲಿ ಶರತ್ ಲೋಹಿತಾಶ್ವ ಪೋಷಕ ಪಾತ್ರದಲ್ಲಿ ನಟಿದ್ದಾರೆ. ಚನ್ನಪಟ್ಟಣ, ಹೊಂಗನೂರು, ವಿರೂಪಾಕ್ಷಪುರ, ಶ್ರೀರಂಗಪಟ್ಟಣ, ಮಂಡ್ಯ, ಮೈಸೂರು, ತುಮಕೂರು, ಮಾಗಡಿ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.ಜಯಂತ್ ಕಾಯ್ಕಿಣಿ, ನಾಗೇಂದ್ರಪ್ರಸಾದ್, ಚೇತನ್ ಕುಮಾರ್ ಅವರ ಸಾಹಿತ್ಯ 'ಶೋಕಿವಾಲ' ಚಿತ್ರಕ್ಕಿದ್ದು, ನವೀನ್ ಕುಮಾರ್.ಎಸ್ ಕ್ಯಾಮರಾ ಕೈಚಳಕ, ಕೆ.ಎಂ. ಪ್ರಕಾಶ್ ಸಂಕಲನ , ಪ್ರಶಾಂತ್ ರಾಜಪ್ಪ ಸಂಭಾಷಣೆ, ಮೋಹನ್ ನೃತ್ಯ, ವಿಕ್ರಮ್ ಮೋರ್ ಸಾಹಸ ನಿರ್ದೇಶನ, ಮೈಸೂರು ರಘು ಅವರ ಕಲಾ ನಿರ್ದೇಶನವಿದೆ. ವಿಭಿನ್ನ ಕತೆಯ ಹಳ್ಳೀ ಸೊಗಡಿನ ಹಾಸ್ಯ ಮಿಶ್ರಿತ ಚಿತ್ರ ಶೊಕಿವಾಲ ನೋಡೋಕೆ ರೆಡಿಯಾಗಿ.

Shokiwala will be first out comedy film of Ajay Rao hls 

Video Top Stories