ವಿಜಯ ದೇವರಕೊಂಡ ಬಗ್ಗೆ ಆ ಪ್ರಶ್ನೆ ಕೇಳಿದ್ದಕ್ಕೆ ನಾಚಿ ನೀರಾದ ರಶ್ಮಿಕಾ...!

ರಶ್ಮಿಕಾ ಮಂದಣ್ಣ ನಟನೆಯ ಮತ್ತೊಂದು ಪ್ಯಾನ್ ಇಂಡಿಯಾ ಮೂವಿ ಕುಬೇರ ರಿಲೀಸ್​ಗೆ ಸಜ್ಜಾಗಿದೆ. ಭಾನುವಾರ ಹೈದ್ರಾಬಾದ್​​ನಲ್ಲಿ ಕುಬೇರ ಮೂವಿಯ ಪ್ರೀ ಲಾಂಚ್ ಇವೆಂಟ್ ನಡೆದಿದ್ದು, ಆ ಇವೆಂಟ್​ನಲ್ಲಿ ಹೈಲೈಟ್ ಆಗಿ ಮಿಂಚಿದ್ದು ಒನ್ & ಓನ್ಲಿ ರಶ್ಮಿಕಾ.

Share this Video
  • FB
  • Linkdin
  • Whatsapp


ರಶ್ಮಿಕಾ ಮಂದಣ್ಣ ನಟನೆಯ ಮತ್ತೊಂದು ಪ್ಯಾನ್ ಇಂಡಿಯಾ ಮೂವಿ ಕುಬೇರ ರಿಲೀಸ್​ಗೆ ಸಜ್ಜಾಗಿದೆ. ಭಾನುವಾರ ಹೈದ್ರಾಬಾದ್​​ನಲ್ಲಿ ಕುಬೇರ ಮೂವಿಯ ಪ್ರೀ ಲಾಂಚ್ ಇವೆಂಟ್ ನಡೆದಿದ್ದು, ಆ ಇವೆಂಟ್​ನಲ್ಲಿ ಹೈಲೈಟ್ ಆಗಿ ಮಿಂಚಿದ್ದು ಒನ್ ಌಂಡ್ ಓನ್ಲಿ ರಶ್ಮಿಕಾ. ಅದ್ರಲ್ಲೂ ಈ ಇವೆಂಟ್​ನಲ್ಲಿ ವಿಜಯ್ ದೇವರಕೊಂಡ ಬಗ್ಗೆ ರಶ್ ಆಡಿದ ಮಾತುಗಳು ಸಿನಿಲೋಕದಲ್ಲಿ ಹಲ್ ಚಲ್ ಎಬ್ಬಿಸಿವೆ.

ಯೆಸ್ ರಶ್ಮಿಕಾ ನಟನೆಯ ಹೊಚ್ಚ ಹೊಸ ಪ್ಯಾನ್ ಇಂಡಿಯಾ ಮೂವಿ ಕುಬೇರ. ಶೇಖರ್ ಕಮ್ಮುಲ ಡೈರೆಕ್ಟ್ ಮಾಡಿರೋ ಕ್ರೈಂ ಡ್ರಾಮಾ ಮೂವಿ ಕುಬೇರನಲ್ಲಿ ಧನುಷ್ ನಾಯಕನಾದ್ರೆ ಕಿಂಗ್ ನಾಗಾರ್ಜುನ್ ಮತ್ತೊಂದು ಪ್ರಮುಖ ಪಾತ್ರದಲ್ಲಿದ್ದಾರೆ. ರಶ್ಮಿಕಾ ಈ ಚಿತ್ರದ ನಾಯಕಿಯಾಗಿ ಮಿಂಚಿದ್ದಾರೆ.

ಸದ್ಯ ರಿಲೀಸ್ ಆಗಿರೋ ಕುಬೇರ ಟ್ರೈಲರ್ ಪ್ಯಾನ್ ಇಂಡಿಯಾ ಮೋಡಿ ಮಾಡ್ತಾ ಇದೆ. ಇನ್ನೂ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಚಿತ್ರತಂಡ ಪ್ರಮೋಷನಲ್​ ಇವೆಂಟ್ಸ್​​ ಮಾಡ್ತಾ ಇದೆ. ಭಾನುವಾರ ಹೈದ್ರಾಬಾದ್​ನಲ್ಲಿ ಕುಬೇರ ಪ್ರೀ ರಿಲೀಸ್ ಇವೆಂಟ್ ನಡೆದಿದ್ದು ಈ ಇವೆಂಟ್​ನಲ್ಲಿ ಎಂದಿನಂತೆ ಹೈಲೈಟ್ ಆಗಿದ್ದು ಕಿರಿಕ್ ಬ್ಯೂಟಿ ರಶ್ಮಿಕಾ.

ಯೆಸ್ ರಶ್ಮಿಕಾ ಕುಬೇರ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಎಂದಿನಂತೆ ನಾನು ಹೈದ್ರಾಬಾದ್​ನವಳು ಅಂದಿದ್ದಾರೆ. ಇದೆಲ್ಲಾ ಹಳೇದಾಯ್ತು ರಶ್ಮಿಕಾಗೆ ವಿಜಯ್ ದೇವರಕೊಂಡ ಬಗ್ಗೆ ನಿರೂಪಕಿ ಪ್ರಶ್ನೆ ಕೇಳಿದ್ದು ಅದರ ಬಗ್ಗೆ ಉತ್ತರಿಸೋ ಮುನ್ನ ರಶ್ಮಿಕಾ ನಾಚಿ ನೀರಾಗಿದ್ದಾರೆ.

ನಿರೂಪಕಿ ಸುಮಾ ರಶ್ಮಿಕಾಗೆ ಕೆಲ ನಾಯಕರ ಬಗ್ಗೆ ಕೇಳಿ ಅವರ ಯಾವ ಗುಣ ನಿಮಗಿಷ್ಟ ಅಂತ ಕೇಳ್ತಾ ಹೋಗ್ತಾರೆ. ಅಲ್ಲು ಅರ್ಜುನ್ ಬಗ್ಗೆ ಕೇಳಿದಾಗ ಅವರ ಸ್ವ್ಯಾಗ್ ಇಷ್ಟ ಅಂದಿದ್ದಾರೆ. ಆ ಬಳಿಕ ಆ್ಯಂಕರ್ ಸುಮಾ ವಿಜಯ್ ದೇವರಕೊಂಡ ಹೆಸರನ್ನು ತೆಗೆದುಕೊಂಡರು. ಅವರಲ್ಲಿ ನನಗೆ ಎಲ್ಲವೂ ಇಷ್ಟ ಅಂತ ಹೇಳಿದ ರಶ್ಮಿಕಾ ನಾಚಿ ನೀರಾದರು. ಇದರಿಂದ ಅಭಿಮಾನಿಗಳ ಕೂಗು ಜೋರಾಯಿತು.

ರಶ್ಮಿಕಾ ವಿಜಯ್​ ದೇವರಕೊಂಡ ಜೋಡಿಯ ಕುರಿತ ಗಾಸಿಪ್ ಹೊಸತೇನೂ ಅಲ್ಲ. ಅಸಲಿಗೆ ಗೀತ ಗೋವಿಂದಂ ಸಿನಿಮಾದಲ್ಲಿ ನಟಿಸೋದಕ್ಕೆ ಶುರುಮಾಡಿದಾಗಿನಿಂದಲೂ ಈ ಇಬ್ಬರ ನಡುವೆ ಕುಚ್ ಕುಚ್ ಶುರುವಾಯ್ತು.

ತಮ್ಮ ಬಗೆಗಿನ ಗಾಸಿಪ್​ಗಳನ್ನ ಈ ಜೋಡಿ ಎಲ್ಲೂ ನಿರಾಕರಿಸಿಲ್ಲ. ಇಬ್ಬರೂ ಜೊತೆ ಜೊತೆಯಾಗಿ ಓಡಾಡ್ತಾ ವರ್ಷಗಳಿಂದ ಗಾಸಿಪ್ ಕಾಲಂಗಳಲ್ಲಿ ಮಿಂಚ್ತಾನೇ ಇದ್ದಾರೆ. ಇತ್ತೀಚಿಗೆ ಈ ಇಬ್ಬರೂ ಲಿವಿಂಗ್ ಟು ಗೆದರ್ ಇದ್ದಾರೆ ಅನ್ನೋ ವದಂತಿ ಕೂಡ ಇದೆ.

ಸದ್ಯ ಕುಬೇರ ಇವೆಂಟ್ ನೆಪದಲ್ಲಿ ಮತ್ತೊಮ್ಮೆ ರಶ್ಮಿಕಾ ಅಫೇರ್ ವಿಷ್ಯ ಸದ್ದು ಮಾಡ್ತಾ ಇದೆ. ಕುಬೇರನಿಗಿಂತ ಹೆಚ್ಚಾಗಿ ಈ ಕುಬೇರನ ರಾಣಿಯೇ ಸದ್ದು ಸುದ್ದಿ ಮಾಡ್ತಾ ಇದ್ದಾಳೆ.

Related Video