Rashmika Mandanna: ಮೋಡಿ ಮಾಡುತ್ತಿದೆ ವರುಣ್-ರಶ್ಮಿಕಾ ಡ್ಯಾನ್ಸ್ ಸ್ಟೆಪ್ಸ್!

ಬಾಲಿವುಡ್ ನಟ ವರುಣ್ ಧವನ್ ಮತ್ತು ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರು ವೈರಲ್ 'ಅರೇಬಿಕ್ ಕುತ್ತು ಚಾಲೆಂಜ್' ತೆಗೆದುಕೊಂಡಿದ್ದಾರೆ. ಇವರಿಬ್ಬರು 'ಹಲಮಿಟಿ ಹಬಿಬೋ' ಹಾಡಿಗೆ ಬೀಚ್ ಮೇಲೆ ಸ್ಟೆಪ್ ಹಾಕಿರುವ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.

Share this Video
  • FB
  • Linkdin
  • Whatsapp

ಬಾಲಿವುಡ್ (Bollywood) ನಟ ವರುಣ್ ಧವನ್ (Varun Dhawan) ಮತ್ತು ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ (Rashmika Mandanna) ಅವರು ವೈರಲ್ 'ಅರೇಬಿಕ್ ಕುತ್ತು ಚಾಲೆಂಜ್' ತೆಗೆದುಕೊಂಡಿದ್ದಾರೆ. ಇವರಿಬ್ಬರು 'ಹಲಮಿಟಿ ಹಬಿಬೋ' ಹಾಡಿಗೆ ಬೀಚ್ ಮೇಲೆ ಸ್ಟೆಪ್ ಹಾಕಿರುವ ವಿಡಿಯೋ ಇದೀಗ ಸಖತ್ ವೈರಲ್ (Viral) ಆಗುತ್ತಿದೆ. ಸವಾಲಿನ ಭಾಗವಾಗಿ, ಅನೇಕ ತಾರೆಯರು ಥಲಪತಿ ವಿಜಯ್ ಮತ್ತು ಪೂಜಾ ಹೆಗ್ಡೆ ಅವರ ವೈರಲ್ ಹಾಡು 'ಹಲಮಿಟಿ ಹಬಿಬೋ'ಗೆ (Halamithi Habibo) ನೃತ್ಯ ಮಾಡುತ್ತಿರುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. 

Rashmika Mandanna 'ಆಡುವಾಳ್ಳು ಮೀಕು ಜೋಹಾರ್ಲು' ಸಿನಿಮಾ ಫ್ಲಾಪ್ ಎಂದ ನೆಟ್ಟಿಗರು!

ಇದರಲ್ಲಿ ಜೋಡಿಯು ಸಮುದ್ರ ದಡದಲ್ಲಿ (Beach) ಮರಳಿನ ಮೇಲೆ ನೃತ್ಯ ಮಾಡುವುದನ್ನು ಕಾಣಬಹುದು. ಈ ವೇಳೆ ನಟಿ ರಶ್ಮಿಕಾ ಮಂದಣ್ಣ, ವರುಣ್ ಧವನ್ ಗೆ ಚಮಕ್ ನೀಡಿದ್ದಾರೆ. ಅಷ್ಟಕ್ಕೂ ವರುಣ್​ ಧವನ್​ ಮತ್ತು ರಶ್ಮಿಕಾ ಮಂದಣ್ಣ ಅವರು ಜೊತೆಯಾಗಿ ಏನು ಮಾಡುತ್ತಿದ್ದಾರೆ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಇಬ್ಬರು ಜೋಡಿಯಾಗಿ ನಟಿಸುವ ಯಾವುದೇ ಹೊಸ ಸಿನಿಮಾ ಬಗ್ಗೆಯೂ ಈವರೆಗೆ ಅಧಿಕೃತ ಘೋಷಣೆ ಆಗಿಲ್ಲ. ಇನ್ನು 'ಬೀಸ್ಟ್' ಸಿನಿಮಾದ 'ಅರೇಬಿಕ್​ ಕುತ್ತು' ಹಾಡಿನ ಬಗ್ಗೆ ಹೇಳುವುದಾದರೆ ಯೂಟ್ಯೂಬ್​ನಲ್ಲಿ ಈ ಗೀತೆಯನ್ನು 150 ಮಿಲಿಯನ್​ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video