Rashmika Mandanna: ದಳಪತಿ ವಿಜಯ್ 66ನೇ ಚಿತ್ರಕ್ಕೆ ನ್ಯಾಷನಲ್ ಕ್ರಶ್ ರಶ್ಮಿಕಾ ನಾಯಕಿ!

ಹಿಜಾಬ್ ಗಲಾಟೆಯಿಂದ ಎಲ್ಲೆಲ್ಲಿ ಏನೆಲ್ಲಾ ಆಯ್ತು..? ಹಿಜಾಬ್ ಗಲಾಟೆ ಈಗ ಎಲ್ಲಿಗೆ ಬಂದು ನಿಂತಿದೆ ಅಂತ ನಿಮ್ಗೆಲ್ಲಾ ಗೊತ್ತೇ ಇದೆ. ಇದೀಗ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಿಜಾಬ್ ವಿಷಯಕ್ಕೆ ಸುದ್ದಿಯಾಗಿದ್ದಾರೆ. 

Share this Video
  • FB
  • Linkdin
  • Whatsapp

ಹಿಜಾಬ್ (Hijab) ಗಲಾಟೆಯಿಂದ ಎಲ್ಲೆಲ್ಲಿ ಏನೆಲ್ಲಾ ಆಯ್ತು..? ಹಿಜಾಬ್ ಗಲಾಟೆ ಈಗ ಎಲ್ಲಿಗೆ ಬಂದು ನಿಂತಿದೆ ಅಂತ ನಿಮ್ಗೆಲ್ಲಾ ಗೊತ್ತೇ ಇದೆ. ಇದೀಗ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಹಿಜಾಬ್ ವಿಷಯಕ್ಕೆ ಸುದ್ದಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಕಂಪ್ಲೀಟ್ ಆಗಿ ಮುಸ್ಲಿಂ ಹುಡುಗಿಯಾಗಿ (Muslim Women) ಬದಲಾಗಿದ್ದು, ಹಿಜಾಬ್ ಧರಿಸಿ ಬಂದಿದ್ದಾರೆ. ಲಿಲ್ಲಿ ಹಿಜಾಬ್ ಧರಿಸಿರೋ ಫೋಟೋ ಈಗ ವೈರಲ್ ಆಗುತ್ತಿದೆ. ಅಷ್ಟಕ್ಕು ರಶ್ಮಿಕಾ ಹಿಜಾಬ್ ಧರಸಿ ಬಂದಿದ್ದು ಯಾಕೆ ಗೊತ್ತಾ.? ಹನು ರಾಘವಪುಡಿ ನಿರ್ದೇಶನದ ಮಲಯಾಳಂ ನಟ ದುಲ್ಕರ್ ಸಲ್ಮಾನ್ (Dulquer Salmaan) ನಟಿಸುತ್ತಿರೋ ಇನ್ನೂ ಹೆಸರಿಡದ ಸಿನಿಮಾದಲ್ಲಿ ರಶ್ಮಿಕಾ ಕಾಶ್ಮೀರಿ ಮುಸ್ಲಿಂ ಹುಡುಗಿ ಪಾತ್ರ ಮಾಡುತ್ತಿದ್ದಾರೆ. ಇದೀಗ ರಶ್ಮಿಕಾ ಫಸ್ಟ್‌ಲುಕ್ ರಿವೀಲ್ ಆಗಿದೆ. 

ಬಿಗ್ ಬಿ ಜತೆ ರಶ್ಮಿಕಾ, 'ಧೂಮ್' ನಟಿಗೆ ಮಹಾ ಮೋಸ..!

ಮಾತ್ರವಲ್ಲದೇ ರಶ್ಮಿಕಾ ಮಂದಣ್ಣ ಮತ್ತೊಂದು ಸಿನಿಮಾ ಅನೌನ್ಸ್ ಆಗಿದೆ. ದಳಪತಿ ವಿಜಯ್ (Vijay) ನಟಿಸುತ್ತಿರೋ 66ನೇ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ರಶ್ಮಿಕಾ ಹುಟ್ಟುಹಬ್ಬ (Birthday) ಹಿನ್ನೆಲೆ ವಿಜಯ್ ಜೊತೆಗಿನ ಹೊಸ ಸಿನಿಮಾವನ್ನ ಅಫೀಷಿಯಲ್ ಆಗಿ ಅನೌನ್ಸ್ ಮಾಡಲಾಗಿದೆ. ಇನ್ನು ಕನ್ನಡದ ಮತ್ತೊಬ್ಬ ಕ್ಯೂಟ್ ಹೀರೋಯಿನ್ ಕಿಸ್ ಚೆಲುವೆ ಶ್ರೀಲೀಲಾ ಕೂಡ ಟಾಲಿವುಡ್‌ನಲ್ಲಿ ಫುಲ್ ಬ್ಯೂಸಿ ಆಗಿದ್ದಾರೆ. ತೆಲುಗುನ ಪೆಳ್ಳಿ ಸಂದಡಿ ಸಿನಿಮಾದ ಬಳಿಕ ಶ್ರೀಲೀಲಾ ಈಗ ನಿತಿತ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ನಟ ನಿತಿನ್ ಅವರ ಹೋಮ್ ಪ್ರೊಡಕ್ಷನ್ 'ಶ್ರೇಷ್ಠ ಮೂವೀಸ್' ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video