ಬಿಗ್ ಬಿ ಜತೆ ರಶ್ಮಿಕಾ, 'ಧೂಮ್' ನಟಿಗೆ ಮಹಾ ಮೋಸ..!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಬಿಗ್ ಬಿ ಜತೆ ನಟಿಸುವುದಲ್ಲದೇ, ಆ ಫೋಟೋವನ್ನು ಸ್ವತಃ ಅಮಿತಾಭ್ ಬಚ್ಚನ್ ಅವರೇ ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಇದೀಗ ಈ ಫೋಟೋ ವೈರಲ್ ಆಗುತ್ತಿದೆ.

Share this Video
  • FB
  • Linkdin
  • Whatsapp


ಬಾಲಿವುಡ್ (Bollywood) ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bacchan) ಭೇಟಿಗೆ ಅದೆಷ್ಟೋ ವರ್ಷಗಳಿಂದ ಕಾದವರು ಇದ್ದಾರೆ. ಅವರೊಂದಿಗೆ ಒಂದು ಫೋಟೋ ತಗೆಸಿಕೊಳ್ಳಲು ಪರದಾಡಿದವರು ಇದ್ದಾರೆ. ಅವರ ನಟನೆಯ ಒಂದೇ ಒಂದು ಸಿನಿಮಾದಲ್ಲಿ ಒಂದು ದೃಶ್ಯದಲ್ಲಾದರೂ ನಟಿಸಬೇಕು ಎಂದು ಕನಸು ಕಂಡವರು ಇದ್ದಾರೆ. ಆದರೆ, ಅದೃಷ್ಟವಂತೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಬಿಗ್ ಬಿ ಜತೆ ನಟಿಸುವುದಲ್ಲದೇ, ಆ ಫೋಟೋವನ್ನು ಸ್ವತಃ ಅಮಿತಾಭ್ ಬಚ್ಚನ್ ಅವರೇ ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಇದೀಗ ಈ ಫೋಟೋ ವೈರಲ್ ಆಗುತ್ತಿದೆ.

.ಬಾಲಿವುಡ್‌ನ (Bollywood) ಖ್ಯಾತ ನಟಿ ಧೂಮ್ ಸಿನಿಮಾ ಖ್ಯಾತಿಯ ರಿಮಿ ಸೇನ್ (Rimi Sen) ಬರೋಬ್ಬರಿ 4 ಕೋಟಿ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ಎಲ್ಇಡಿ ಬಲ್ಬ್ಗಳ ಉದ್ಯಮ ವ್ಯವಹಾರ ಮಾಡುತ್ತೇನೆಂದು ಹೇಳಿಕೊಂಡಿದ್ದ ರೋಣಕ್ ಜಟಿನ್ ಎಂಬ ವ್ಯಕ್ತಿಗೆ ನಾಲ್ಕು ಕೋಟಿ ಕೊಟ್ಟು ಕಳೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಎಂಬಾತ ಪರಿಚಯ ಆಗಿದ್ದ. ನಂತರ ಆತನೇ ಮೋಸ ಮಾಡಿ ಹೋಗಿದ್ದಾನೆ.

Related Video