Asianet Suvarna News Asianet Suvarna News

ಏರ್ಪೋರ್ಟ್‌ನಿಂದ ಹೊರಬಂದ ರಶ್ಮಿಕಾ; ಸೆಲ್ಫಿಗಾಗಿ ಮುಗಿಬಿದ್ದ ಲೇಡಿ ಫ್ಯಾನ್ಸ್

ಮುಂಬೈ ಏರ್ಪೋರ್ಟ್‌ನಲ್ಲಿ ರಶ್ಮಿಕಾ ಮತ್ತೆ ಪಾಪಾರಾಜಿಗಳ ಕ್ಯಾಮರಾಗೆ ಸೆರೆಯಾಗಿದ್ದಾರೆ. ಏರ್ಪೋರ್ಟ್ ನಿಂದ ಹೊರಬರುತ್ತಿರುವ ರಶ್ಮಿಕಾ ಮಂದಣ್ಣ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ರಶ್ಮಿಕಾ ಮಂದಣ್ಣ ಸದ್ಯ ಸೌತ್ ಮತ್ತು ಬಾಲಿವುಡ್ ಎರಡು ಕಡೆ ಬ್ಯುಸಿಯಾಗಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಎಲ್ಲಾ ಕಡೆ ಓಡಾಡುತ್ತಿರುತ್ತಾರೆ. ಆಗಾಗ ಏರ್ಪೋರ್ಟ್‌ನಲ್ಲಿ ಕಾಣಿಸಿಕೊಳ್ಳುವ ರಶ್ಮಿಕಾ ಇದೀಗ ಮುಂಬೈ ಏರ್ಪೋರ್ಟ್‌ನಲ್ಲಿ ಮತ್ತೆ ಪಾಪಾರಾಜಿಗಳ ಕ್ಯಾಮರಾಗೆ ಸೆರೆಯಾಗಿದ್ದಾರೆ. ಏರ್ಪೋರ್ಟ್ ನಿಂದ ಹೊರಬರುತ್ತಿರುವ ರಶ್ಮಿಕಾ ಮಂದಣ್ಣ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಪರಾಜಿಗಳಿಗೆ ಹಾಯ್ ಹೇಳುತ್ತಾ ಮಾತನಾಡಿಸುತ್ತಾ ಬಂದ ರಶ್ಮಿಕಾ ಅವರನ್ನು ಅಭಿಮಾನಿಗಳು ಮುತ್ತಿಕೊಂಡರು. ಸೆಲ್ಫಿಗಾಗಿ ಮುಗಿದ್ದಿದ್ದರು. ಅದರಲ್ಲೂ ಹೆಚ್ಚಾಗಿ ಮಹಿಳಾ ಅಭಿಮಾನಿಗಳು ಇದ್ದರೂ. ರಶ್ಮಿಕಾ ಸಮಾಧಾನವಾಗಿಯೇ ಅಭಿಮಾನಿಗಳ ಸೆಲ್ಫಿಗೆ ಪೋಸ್ ನೀಡಿ ಅಲ್ಲಿಂದ ಹೊರಟು ಹೋದರು. ರಶ್ಮಿಕಾ ಇತ್ತೀಚಿಗಷ್ಟೆ ಬಾಲಿವುಡ್ ನಲ್ಲಿ ಗುಡ್ ಬೈ ಸಿನಿಮಾದ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸಿನಿಮಾ ಮೇಲಿನ ನಿರೀಕ್ಷೆ ಕೂಡ ಹೆಚ್ಚಾಗಿದೆ. 

Video Top Stories