Rashmika Mandanna Sankranthi: ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಸಂಕ್ರಾಂತಿ..?

ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ ಅಂತ ಟಾಲಿವುಡ್ ಇಂಟ್ರೆಸ್ಟ್ರಿಯಲ್ಲಿ ಗಾಢವಾದ ಸುದ್ದಿ ಹಬ್ಬಿದೆ. ಈ ಲವ್ ಸ್ಟೋರಿಗೆ ಇಬ್ಬರು ತುಪ್ಪ ಸುರಿದು, ಇಬ್ಬರ ಮಧ್ಯೆ ಪ್ರೀತಿ ಬಲವಾಗಿದೆ ಅನ್ನೋ ಅನುಮಾನ ಹೆಚ್ಚಿಸಿದ್ದಾರೆ. ಇದಕ್ಕೆ ಕಾರಣ ವಿಜಯ್ ದೇವರಕೊಂಡ ಮನೆಯ ಸಂಕ್ರಾಂತಿ ಹಬ್ಬ.

Share this Video
  • FB
  • Linkdin
  • Whatsapp

ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ ಅಂತ ಟಾಲಿವುಡ್ ಇಂಟ್ರೆಸ್ಟ್ರಿಯಲ್ಲಿ ಗಾಢವಾದ ಸುದ್ದಿ ಹಬ್ಬಿದೆ. ಈ ಲವ್ ಸ್ಟೋರಿಗೆ ಇಬ್ಬರು ತುಪ್ಪ ಸುರಿದು, ಇಬ್ಬರ ಮಧ್ಯೆ ಪ್ರೀತಿ ಬಲವಾಗಿದೆ ಅನ್ನೋ ಅನುಮಾನ ಹೆಚ್ಚಿಸಿದ್ದಾರೆ. ಇದಕ್ಕೆ ಕಾರಣ ವಿಜಯ್ ದೇವರಕೊಂಡ ಮನೆಯ ಸಂಕ್ರಾಂತಿ ಹಬ್ಬ. ವಿಜಯ್ ದೇವರಕೊಂಡ ಸಂಕ್ರಾಂತಿ ಹಬ್ಬದಂದು ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಮಾಡಿದ್ರು. ಈ ಫೋಟೊದಲ್ಲಿ ವಿಜಯ್ ದೇವರಕೊಂಡ ಜೊತೆ ಅವರ ಕುಟುಂಬದ ಸದಸ್ಯರಿದ್ರು. ತಮ್ಮ ಮನೆಯ ಮುಂದೆ ಇರುವ ತೋಟದಲ್ಲಿ ಈ ಫೋಟೊ ಕ್ಲಿಕ್ಕಿಸಲಾಗಿತ್ತು. ಇಂತಹದ್ದೇ ಬ್ಯಾಕ್‌ಗ್ರೌಂಡ್‌ನಲ್ಲಿರುವ ಫೋಟೋವನ್ನು ರಶ್ಮಿಕಾ ಮಂದಣ್ಣ ಕೂಡ ಶೇರ್ ಮಾಡಿದ್ದಾರೆ. ಅಷ್ಟೆ ಅಲ್ಲ ಇಬ್ಬರೂ ಒಂದೇ ಬಣ್ಣದ ಉಡುಪುಗಳನ್ನು ಧರಿಸಿದ್ದಾರೆ. ಈ ಎರಡು ಫೋಟೊಗಳನ್ನೇ ಇಟ್ಟುಕೊಂಡು ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

18 ವರ್ಷದ ದಾಂಪತ್ಯ, ಈಗ ತೊಂದರೆಯಾಗಿದ್ದೇನು ?

ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್‌ಗೆ ಕಾಲಿಟ್ಟ ದಿನದಿಂದ ವಿಜಯ್ ದೇವರಕೊಂಡ ಜೊತೆ ಇವರ ಹೆಸರು ತಳುಕು ಹಾಕಿಕೊಳ್ಳುತ್ತಲೇ ಇದೆ. ರಶ್ಮಿಕಾ ಮಂದಣ್ಣ ಮೊದಲ ಟಾಲಿವುಡ್ ಸಿನಿಮಾದಲ್ಲೇ ವಿಜಯ್ ದೇವರಕೊಂಡಗೆ ಕಿಸ್ ಮಾಡಿದ್ದರು. ಇಲ್ಲಿಂದ ಇಬ್ಬರ ನಡುವೆ ಏನೋ ನಡೀತಿದೆ ಅನ್ನೋ ಅನುಮಾನ ಇತ್ತು. ಇದರ ಜೊತೆಗೆ ಗೋವಾದಲ್ಲಿ ರಶ್ಮಿಕಾ-ವಿಜಯ್ ಹೊಸ ವರ್ಷಾಚರಣೆ ಮಾಡಿದ್ರು. ಈಗ ಸಂಕ್ರಾಂತಿ ಹಬ್ಬವನ್ನೂ ವಿಜಯ್ ಮನೆಯಲ್ಲಿ ಆಚರಿಸಿದ್ದು, ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆಂಬ ಅನುಮಾನ ಮತ್ತಷ್ಟು ಸ್ಟ್ರಾಂಗ್ ಆಗಿದೆ. 

Related Video