Asianet Suvarna News Asianet Suvarna News

ಈ ವಿಚಾರಕ್ಕೆ ರಶ್ಮಿಕಾ-ಸಮಂತಾ ಮಧ್ಯೆ ಸಿಕ್ಕಾಪಟ್ಟೆ ಪೈಪೋಟಿಯಂತೆ

ರಶ್ಮಿಕಾ ಮಂದಣ್ಣ-ಸಮಂತಾ ಈ ಎರಡು ಹೆಸರು ಟಾಲಿವುಡ್ ಪಡ್ಡೆ ಹೈದರ ಹುಚ್ಚು. ಸಮಂತಾ, ರಶ್ಮಿಕಾ ಅಂದ್ರೆ ತೆಲುಗು ಸಿನಿಮಾ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಕ್ರೇಜ್.

First Published Aug 22, 2022, 4:38 PM IST | Last Updated Aug 22, 2022, 4:38 PM IST

ರಶ್ಮಿಕಾ ಮಂದಣ್ಣ-ಸಮಂತಾ ಈ ಎರಡು ಹೆಸರು ಟಾಲಿವುಡ್ ಪಡ್ಡೆ ಹೈದರ ಹುಚ್ಚು. ಸಮಂತಾ, ರಶ್ಮಿಕಾ ಅಂದ್ರೆ ತೆಲುಗು ಸಿನಿಮಾ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಕ್ರೇಜ್. ಹೀಗಾಗೆ ಇವ್ರಿಬ್ರ ಮಧ್ಯೆ ಹೆಚ್ಚು ಫ್ಯಾನ್ ಬೇಸ್ ಇರೋ ವಿಚಾರದಲ್ಲಿ ಆಗಾಗ ಪೈಪೋಟಿ ಏರ್ಪಡುತ್ತಿರುತ್ತೆ. ಒಮ್ಮೆ ರಶ್ಮಿಕಾ ಹೆಚ್ಚು ಫಾಲೋವರ್ಸ್ ಹೊಂದಿರೋ ನಟಿಯಾಗಿ ಹೊರ ಹೊಮ್ಮಿದ್ರೆ, ಮತ್ತೊಮ್ಮೆ ಸಮಂತಾ ಟಾಪ್ಗೆ ಬಂದು ಬಿಡ್ತಾರೆ. ಪುಷ್ಪಾ ಸಿನಿಮಾದಲ್ಲಿ ಐಟಂ ಡ್ಯಾನ್ಸ್ ಮತ್ತು ಅಮೆಜಾನ್ ಪ್ರೈಮ್‌ನ ಫ್ಯಾಮಿಲಿ ಮ್ಯಾನ್‌ನಲ್ಲಿ ರಾಜಿ ಪಾತ್ರ ಸಮಂತಾಗೆ ಪ್ಯಾನ್ ಇಂಡಿಯಾ ಇಮೇಜ್ ನೀಡಿದೆ. ಇದೇ ಇಮೇಜ್ನಿಂದ ಸ್ಯಾಮ್ಗೆ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿತ್ತು. ಈಗ ಸಮಂತಾ ತನ್ನ ಇನ್‌ಸ್ಟಾಗ್ರಾಮ್‌ಖಾತೆಯಲ್ಲಿ 24.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಕೇವಲ ಆರು ವರ್ಷಗಳ ವೃತ್ತಿ ಜೀವನದಲ್ಲಿ ಭಾರತದ ಪ್ರಮುಖ ನಾಯಕಿಯರ ಪಟ್ಟಿ ಸೇರಿದ ಹೀರೋಯಿನ್ ರಶ್ಮಿಕಾ. ರಶ್ಮಿಕಾ ಸಮಂತಾರನ್ನೂ ಮೀರಿಸಿ ಇನ್‌ಸ್ಟಾಗ್ರಾಮ್‌ನಲ್ಲಿ 32.7 ಮಿಲಿಯನ್ ಫಾಲೋವರ್ಸ್ ಹೊಂದೋ ಮೂಲಕ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಫ್ಯಾನ್ ಭೇಸ್ ಇರೋ ನಟಿ ಅನ್ನೋ ಹೆಗ್ಗಳಿಕೆ ಪಡೆದಿದ್ದಾರೆ. 
 

Video Top Stories