ನ್ಯಾಷನಲ್ ಕ್ರಶ್‌ಗೆ ಹಿನ್ನೆಡೆ: 'ರಶ್ಮಿಕಾ'ರನ್ನು ವಜಾ ಮಾಡಿದ ಆಭರಣ ಕಂಪನಿ

ರಶ್ಮಿಕಾ ಮಂದಣ್ಣ ಅವರಿಗೆ ಇದೀಗ ಸೋಲು ಬೆನ್ನಿಗೆ ಬಿದ್ದ ಬೇತಾಳದಂತೆ ಕಾಡುತ್ತಿದೆ. ಅವರು ಇದ್ದ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ.
 

Share this Video
  • FB
  • Linkdin
  • Whatsapp

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರಿಗೆ ಇದೀಗ ಸೋಲು ಎದುರಾಗಿದೆ. ಪುಷ್ಪಾದ ಬಳಿಕ ಬಂದ ಸಾಲು ಸಾಲು ಸಿನಿಮಾಗಳ ಸೋಲು ವಿವಾದಗಳು, ಜೊತೆಗೆ ಕರ್ನಾಟಕದಲ್ಲಿ ರಶ್ಮಿಕಾ ಬ್ಯಾನ್ ಅನ್ನೋ ಭಯ ಬೇರೆ. ಇದೆಲ್ಲಾ ಸೇರಿ ಲಿಲ್ಲಿಗೆ ಈಗ ಎಲ್ಲೆಡೆ ಭಾರಿ ಹಿನ್ನೆಡೆ ಆಗುತ್ತಿದೆ. ರಶ್ಮಿಕಾ ವಿವಾದಗಳ ಸಂಕೋಲೆಯಿಂದ ಇದ್ದ ಬದ್ದ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಈಗ ಆಭರಣ ಕಂಪನಿಯು ತನ್ನ ಇಮೇಜ್ ಕ್ಷೀಣಿಸುತ್ತದೆ ಎಂದು ರಶ್ಮಿಕಾರನ್ನು ಅಂಬಾಸಿಡರ್ ಸ್ಥಾನದಿಂದ ಕೈಬಿಟ್ಟಿದೆ. ಆ ಜಾಗಕ್ಕೆ ಕಾಲಿವುಡ್ ಸುಂದರಿ ತ್ರಿಷಾ ಎಂಟ್ರಿ ಕೊಟ್ಟಿದ್ದಾರಂತೆ. ಇದನ್ನೆಲ್ಲಾ ನೋಡುತ್ತಿದ್ರೆ ಅದೃಷ್ಟ ಲಕ್ಷ್ಮಿಯಾಗಿದ್ದ ರಶ್ಮಿಕಾ ವೃತ್ತಿ ಬದುಕು ಈಗ ಅಧೋಗತಿಗೆ ಹೋಗುತ್ತಿದೆಯಾ ಅನ್ನೋ ಅನುಮಾನ ಶುರುವಾಗ್ತಿದೆ. 

ಮೆಕ್ಕಾಗೆ ಭೇಟಿ ನೀಡಿದ ಬಾಲಿವುಡ್ ಸ್ಟಾರ್ ಶಾರುಖ್ ಖಾನ್; ಫೋಟೋ ವೈರಲ್

Related Video