Asianet Suvarna News Asianet Suvarna News

ಮೆಕ್ಕಾಗೆ ಭೇಟಿ ನೀಡಿದ ಬಾಲಿವುಡ್ ಸ್ಟಾರ್ ಶಾರುಖ್ ಖಾನ್; ಫೋಟೋ ವೈರಲ್

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್‌ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಒಂದು ಸಿನಿಮಾದ ಚಿತ್ರೀಕರಣ ಮುಗಿಸಿರುವ ಶಾರುಖ್ ಖಾನ್ ಸದ್ಯ ಮೆಕ್ಕಾದಲ್ಲಿ ಕಾಣಿಸಿಕೊಂಡಿದ್ದಾರೆ.

Shah Rukh Khan Performs Umrah In Mecca after wrap Of Dunki shooting sgk
Author
First Published Dec 2, 2022, 11:17 AM IST

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್‌ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಒಂದು ಸಿನಿಮಾದ ಚಿತ್ರೀಕರಣ ಮುಗಿಸಿರುವ ಶಾರುಖ್ ಖಾನ್ ಸದ್ಯ ಮೆಕ್ಕಾದಲ್ಲಿ ಕಾಣಿಸಿಕೊಂಡಿದ್ದಾರೆ. ಮುಸ್ಲಿಂಮರ ಪವಿತ್ರ ನಗರ ಮೆಕ್ಕಾದಲ್ಲಿ ಬಾಲಿವುಡ್ ಖಾನ್ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಳಿ ಬಟ್ಟೆಯಲ್ಲಿ ಕಾಣಿಸಿಕೊಂಡಿರುವ ಶಾರುಖ್ ಪವಿತ್ರ ಸ್ಥಳ ಮೆಕ್ಕಾದಲ್ಲಿ ಊರ್ಮಾ ನಿರ್ವಹಿಸಿದರು. ಶಾರುಖ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.  

ಅಂದಹಾಗೆ ಶಾರುಖ್ ಖಾನ್ ಸದ್ಯ ಡಂಕಿ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಡಂಕಿ ಸಿನಿಮಾದ ಚಿತ್ರೀಕರಣ ಸದ್ಯ ದುಬೈನಲ್ಲಿ ನಡೆಯುತ್ತಿದೆ. ದುಬೈ ಶೆಡ್ಯೂಲ್ ಮುಗಿಸಿದ ಬಳಿಕ ಶಾರುಖ್ ಖಾನ್ ಮುಸ್ಲಿಂರ ಪವಿತ್ರ ನಗರ ಮೆಕ್ಕಾಗೆ ಭೇಟಿ ನೀಡಿದರು. ಶಾರುಖ್ ವಿಡಿಯೋ ಶೇರ್ ಮಾಡಿ ಸಿನಿಮಾತಂಡ ಹಾಗೂ ದುಬೈನ ಸಾಂಸ್ಕೃತಿಕ ಮತ್ತ ಸಿನಿಮಾ ಇಲಾಖೆಗೆ ವಿಶೇಷ ಧನ್ಯವಾದ ತಿಳಿಸಿದರು. ಡಂಕಿ ಸಿನಿಮಾದ ದುಬೈ ಚಿತ್ರೀಕರಣ ಯಶಸ್ವಿಯಾಗಿ ಮುಗಿಯಿತು ಎಂದು ಶಾರುಖ್ ಖಾನ್ ಹೇಳಿದ್ದಾರೆ. 

ಶಾರುಖ್ ಖಾನ್ ಸಿನಿಮಾಗಳು ರಿಲೀಸ್ ಆಗದೆ ಅನೇಕ ವರ್ಷಗಳಾಗಿದೆ. ಸತತ ಸೋಲಿನ ಬಳಿಕ ಶಾರುಖ್ ಸಿನಿಮಾ ಮಾಡುವುದನ್ನೇ ಬಿಟ್ಟಿದ್ದರು. ಆದರೆ ಗ್ಯಾಪ್ ನ ಬಳಿಕ ಮತ್ತೆ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳು ಶಾರುಖ್ ಕೈಯಲ್ಲಿದೆ. ಈಗಾಗಲೇ ಪಠಾಣ್ ಸಿನಿಮಾದ ಚಿತ್ರೀಕರಣ ಮುಗಿಸಿರುವ ಶಾರುಖ್ ಡಂಕಿ ಮತ್ತು ಜವಾನ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶಾರುಖ್‌ಗೆ ಕಳೆದ ವರ್ಷ ತೀರ ಸಂಕಷ್ಟದ ವರ್ಷವಾಗಿತ್ತು. ಶಾರುಖ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದರು. ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು. ಸಿನಿಮಾಗಳ ಸೋಲು, ಮಗನ ಭವಿಷ್ಯ ಈ ಎಲ್ಲಾ ಕಾರಣಕ್ಕೆ ಶಾರುಖ್ ಮೆಕ್ಕಾಗೆ ತೆರಳಿದ್ದಾರೆ ಎನ್ನಲಾಗಿದೆ. 

ನಾನು ಮಕ್ಕಳನ್ನು ಬೆಳೆಸಿದ ರೀತಿ ನೋಡಿದ್ರೆ ನನ್ನ ಅಪ್ಪ-ಅಮ್ಮ ತುಂಬಾ ಹೆಮ್ಮೆ ಪಡುತ್ತಿದ್ರು; ಶಾರುಖ್ ಖಾನ್

ಶಾರುಖ್ ಮೆಕ್ಕಾ ಭೇಟಿಯ ಬಗ್ಗೆ ಅನೇಕರ ವಿವಿಧ ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಶಾರುಖ್ ಪರ ಮಾತನಾಡಿದ್ರೆ ಇನ್ನೂ ಕೆಲವರು ಶಾರುಖ್ ಖಾನ್ ಅವರನ್ನು ತರಾಟೆ ತೆಗೆದುಕೊಂಡರು. ಶಾರುಖ್ ಖಾನ್ ಮನೆಯಲ್ಲಿ ಹಿಂದೂ ವಿಗ್ರಹಗಳನ್ನು ಇಟ್ಟುಕೊಂಡಿದ್ದಾರೆ. ಹಿಂದೂ ದೇವರಿಗೆ ಪೂಜೆ ಮಾಡುತ್ತಾರೆ. ಮೆಕ್ಕಾಗೆ ಭೇಟಿ ನೀಡಿದ್ದು ಪಾಪಾದ ಕೆಲಸ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಶಾರುಖ್ ಅವರಿಗೆ ಅಲ್ಲಾಹು ಒಳ್ಳೆಯದು ಮಾಡಲಿ ಎಂದು ಹೇಳಿದರು.

ಅಬ್ಬಾ..! ಶಾರುಖ್ ಮನೆಯ ನಾಮಫಲಕ ಡೈಮಂಡ್‌ದಾ? ನೆಟ್ಟಿಗರ ಪ್ರಶ್ನೆಗೆ ಗೌರಿ ಖಾನ್ ಉತ್ತರ

ಶಾರುಖ್ ಖಾನ್ ಈಗಾಗಲೇ ಪಠಾಣ್ ಸಿನಿಮಾದಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟೀಸರ್ ರಿಲೀಸ್ ಆಗಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾ ಜೊತೆಗೆ ಶಾರುಖ್ ಜವಾನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗೆ ತಮಿಳು ನಿರ್ದೇಶಕ ಆಟ್ಲೀ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ದಕ್ಷಿಣ ಖ್ಯಾತ ನಟಿ ನಯನತಾರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಡಂಕಿ ಸಿನಿಮಾ ಕೂಡ ಶಾರುಖ್ ಕೈಯಲ್ಲಿದೆ. ಮುಂದಿನ ವರ್ಷ ಮೂರು ಸಿನಿಮಾಗಳು ರಿಲೀಸ್ ಆಗುವ ಸಾಧ್ಯತೆ ಇದೆ. ಹಾಗಾಗಿ ಶಾರುಖ್ ಅಭಿಮಾನಿಗಳಿಗೆ ದೊಡ್ಡ ಹಬ್ಬವಾಗಲಿದೆ. 

Follow Us:
Download App:
  • android
  • ios