Asianet Suvarna News Asianet Suvarna News

ಸೈನಿಕರ ಜತೆ ಜ್ಯೂನಿಯರ್ ಮೆಗಾ ಸ್ಟಾರ್ ರಾಮ್ ಚರಣ್!

ಮೆಗಾಸ್ಟಾರ್ ಚಿರಂಜೀವಿ (Chiranjeevi) ಸುಪುತ್ರ ಜ್ಯೂ, ಮೆಗಾಸ್ಟಾರ್ ರಾಮ್ ಚರಣ್ (Ram Charan Teja)RRR ಸಿನಿಮಾದಲ್ಲಿ ರಾಮನಾಗಿ ಮಿಂಚಿ ಇಡೀ ದೇಶದ ಮನ ಗೆದ್ದಿದ್ದಾರೆ. RRR ನಲ್ಲಿ ಬ್ರಿಟೀಷ್ ಸರ್ಕಾರದ ಪೊಲೀಸ್ ಅಧಿಕಾರಿಯಾಗಿ ಭಾರತದ ಸ್ವಾತಂತ್ರ್ಯಕ್ಕೆ ಹೋರಾಡೋ ರೋಲ್ ಮಾಡಿದ್ದ ಚರ್ರಿ ಈಗ ಇಡೀ ದೇಶವೇ ಸೆಲ್ಯೂಟ್ ಮಾಡುವಂತಹ ಕೆಲಸ ಮಾಡಿದ್ದಾರೆ. 

ಮೆಗಾಸ್ಟಾರ್ ಚಿರಂಜೀವಿ ಸುಪುತ್ರ ಜ್ಯೂ, ಮೆಗಾಸ್ಟಾರ್ ರಾಮ್ ಚರಣ್  (Ram Charan) RRR ಸಿನಿಮಾದಲ್ಲಿ ರಾಮನಾಗಿ ಮಿಂಚಿ ಇಡೀ ದೇಶದ ಮನ ಗೆದ್ದಿದ್ದಾರೆ. RRR ಸಿನಿಮಾದಲ್ಲಿ ಬ್ರಿಟೀಷ್ ಸರ್ಕಾರದ ಪೊಲೀಸ್ ಅಧಿಕಾರಿಯಾಗಿ ಭಾರತದ ಸ್ವಾತಂತ್ರ್ಯಕ್ಕೆ ಹೋರಾಡೋ ರೋಲ್ ಮಾಡಿದ್ದ ಚರ್ರಿ ಈಗ ಇಡೀ ದೇಶವೇ ಸೆಲ್ಯೂಟ್ ಮಾಡುವಂತಹ ಕೆಲಸ ಮಾಡಿದ್ದಾರೆ. ನಮ್ಮ ದೇಶ ಕಾಯೋ ಸೈನಿಕರ (Soldiers) ಜೊತೆ ರಾಮ್ ಚರಣ್ ಸಮಯ ಕಳೆದಿದ್ದು. ಭರ್ಜರಿ ಬೋಜನ ರೆಡಿಮಾಡಿ ಸೈನಿಕರಿಗೆ ಉಣ ಬಡಸಿದ್ದಾರೆ. 

ನಿರ್ಮಾಪಕ ಶಂಕರ್ ಜೊತೆ ಇನ್ನೂ ಹೆಸರಿಡದ ತ್ರಿಭಾಷಾ ಸಿನಿಮಾದಲ್ಲಿ ರಾಮ್ ಚರಣ್ ನಟಿಸುತ್ತಿದ್ದಾರೆ. ಆ ಸಿನಿಮಾದ ಶೂಟಿಂಗ್ ಅಮೃತಸರದಲ್ಲಿ ನಡೆಯುತ್ತಿದೆ. ಹೀಗಾಗಿ ಅಮೃತಸರದಲ್ಲಿರೋ ಬಿಎಸ್ಎಫ್ ಕ್ಯಾಂಪ್‌ಗೆ ರಾಮ್ ಚರಣ್ ಭೇಟಿ ಕೊಟ್ಟಿದ್ದು ಕುಷಲೋಪರಿ ವಿಚಾರಿಸಿದ್ದಾರೆ.

'ವಿಕ್ರಾಂತ್ ರೋಣ' ಟೀಸರ್ ಡೈಲಾಗ್‌ನಲ್ಲಿ RCB ತಂಡದ ಗ್ಲೆನ್ ಮ್ಯಾಕ್ಸ್ವೆಲ್..!

ಅಷ್ಟೆ ಅಲ್ಲ ಬಿಎಸ್ಎಫ್ ಜವಾನರಿಗೆ ಅಡುಗೆ ಮಾಡಲು ತನ್ನ ವೈಯಕ್ತಿಕ ಬಾಣಸಿಗನನ್ನು ಹೈದರಾಬಾದ್ನಿಂದ ಕರೆದುಕೊಂಡು ಹೋಗಿದ್ದ ರಾಮ್ ಚರಣ್, ಬಿಸಿ ಬಿಸಿಯಾದ, ರುಚಿ ರುಚಿಯಾದ ಸೌತ್ ಇಂಡಿಯಾದ ರೆಸೆಪಿಗಳನ್ನ ಅಡುಗೆ ಮಾಡಿಸಿ ಉಣ ಬಡಸಿದ್ದಾರೆ.

ಈ ಫೋಟೋಗಳನ್ನ ಹಂಚಿಕೊಂಡಿರೋ ರಾಮ್ ಚರಣ್, ಅಮೃತಸರದ ಖಾಸಾದಲ್ಲಿ ಗಡಿ ಭದ್ರತಾ ಪಡೆ ಸೈನಿಕರೊಂದಿಗೆ ಮಧ್ಯಾಹ್ನ ಕಳೆದಿದ್ದೇನೆ. ಯೋಧರ ತ್ಯಾಗ ಮತ್ತು ಸಮರ್ಪಣೆಯ ಸ್ಪೂರ್ತಿದಾಯಕ ಕಥೆಗಳನ್ನು ಕೇಳಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ರಾಮ್ ಚರಣ್ರ ಈ ಕೆಲಸಕ್ಕೆ ಈಗ ಅವ್ರ ಅಭಿಮಾನಿಗಳು ಸೆಲ್ಯೂಟ್ ಮಾಡುತ್ತಿದ್ದಾರೆ.

Video Top Stories