ಗೇಮ್ ಚೇಂಜರ್ ಸಿನಿಮಾದಲ್ಲಿ ಶಂಕರ್ ಮ್ಯಾಜಿಕ್, ಮುಗಿದೋಯ್ತಾ ಶಂಕರ್ ಜಮಾನಾ?
ಗೇಮ್ ಚೇಂಜರ್ ಮೂವಿ ದೊಡ್ಡ ಓಪನಿಂಗ್ ಪಡೆದರೂ ಶಂಕರ್ ಕೆಲಸದ ಬಗ್ಗೆ ಟೀಕೆ-ಟಿಪ್ಪಣಿ ಕೇಳಿ ಬರ್ತಾ ಇವೆ.
ಕಳೆದ ವರ್ಷ ಇಂಡಿಯನ್-2 ಅನ್ನೋ ಡಿಸಾಸ್ಟರ್ ಸಿನಿಮಾ ಕೊಟ್ಟಿದ್ದ ಶಂಕರ್. ಗೇಮ್ ಚೇಂಜರ್ ಮೂವಿ ಮೂಲಕ ಫಾರ್ಮ್ ಗೆ ಬರೋ ಪ್ಲಾನ್ ಅಲ್ಲಿದ್ರು. ಆದ್ರೆ ಗೇಮ್ ಚೇಂಜರ್ ಮೂವಿ ದೊಡ್ಡ ಓಪನಿಂಗ್ ಪಡೆದರೂ ಶಂಕರ್ ಕೆಲಸದ ಬಗ್ಗೆ ಟೀಕೆ-ಟಿಪ್ಪಣಿ ಕೇಳಿ ಬರ್ತಾ ಇವೆ. ಒಂದೊಮ್ಮೆ ಇಂಡಿಯನ್ ಇಂಡಿಸ್ಟ್ರಿಯ ಟಾಪ್ ಡೈರೆಕ್ಟರ್ ಅನ್ನಿಸಿಕೊಂಡಿದ್ದ ಶಂಕರ್ ಗೇಮ್ ಮುಗಿದೋಯ್ತಾ ಅನ್ನೋ ಮಾತು ಇಂಡಸ್ಟ್ರಿಯಲ್ಲಿ ಸದ್ದು ಮಾಡ್ತಾ ಇದೆ.ಪಾಲಿಟಿಕಲ್ ಡ್ರಾಮಾ ಚಿತ್ರವಾಗಿರೋ ಗೇಮ್ ಚೇಂಜರ್ನಲ್ಲಿ ರಾಮ್ ಚರಣ್ ಡಬಲ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಮ್ ಚರಣ್ ಸಿನಿಮಾವಾದ್ದರಿಂದ ಮೊದಲ ದಿನ ಭರ್ಜರಿ ಓಪನಿಂಗ್ ಸಿಕ್ಕಿದೆ. ಆದ್ರೆ ಸಿನಿಮಾ ನೋಡಿದವರು ಎವರೇಜ್ ಅಂತಿದ್ದಾರೆ.