BTS ಚಾಲಕನಾಗಿದ್ದ ಸ್ನೇಹಿತನಿಗೆ ಪ್ರಶಸ್ತಿ ಅರ್ಪಿಸಿದ ರಜನಿ..!
ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಅತ್ಯುತ್ತಮ ಸೇವೆಗಾಗಿ ಕೇಂದ್ರ ಸರ್ಕಾರ ಘೋಷಿಸಿದ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೂಪರ್ ಸ್ಟಾರ್(Superstar) ರಜನಿಕಾಂತ್(Rajinikanth) ಮುಡಿಗೇರಿದೆ. ಕನ್ನಡ ಮಣ್ಣಿನ ಮಗ ರಜನಿಕಾಂತ್ ಸೂಪರ್ ಸ್ಟಾರ್ ಆಗಿದ್ದು ತಮಿಳು(Tamil) ನೆಲದಲ್ಲಿ. ಆದ್ರೆ ಇಂದಿಗೂ ಸೂಪರ್ ಸ್ಟಾರ್ಗೆ ಕನ್ನಡ, ಕನ್ನಡಿಗರ ಮೇಲಿನ ಪ್ರೀತಿ ಹೆಚ್ಚಿದೆ ಅನ್ನೋದಕ್ಕೆ ಪ್ರತಿಷ್ಟಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಾಗ ರಜನಿ ಕಾಂತ್ ಆಡಿದ ಮಾತೆ ಸಾಕ್ಷಿ.

ಉಪ್ಪಿ-ಕಿಚ್ಚನ 'ಕಬ್ಜ'ದಲ್ಲಿ ಬಿಗ್ ಸ್ಟಾರ್ಸ್ ಸಮಾಗಮ.!
ಯಾಕಂದ್ರೆ ಸೂಪರ್ ಸ್ಟಾರ್ ಈ ಪ್ರಶಸ್ತಿಯನ್ನ ತಮ್ಮ ಸಿನಿಮಾ ಗುರುಗಳಾದ ಖ್ಯಾತ ನಿರ್ದೇಶಕ ದಿ. ಕೆ ಬಾಲಚಂದರ್ ಅವರಿಗೆ ಅರ್ಪಿಸಿದ್ದಾರೆ. ಅಷ್ಟೆ ಅಲ್ಲ ಇದರ ಜೊತೆ ಬೆಂಗಳೂರಿನಲ್ಲಿ ಬಿಎಎಸ್ ಸಾರಿಗೆ ಸಂಸ್ತೆ ಇದ್ದಾಗ ಸಿನಿಮಾ ಹೀರೋ ಅಲ್ಲದ ರಜನಿಕಾಂತ್ ಬೆಂಗಳೂರು ಸಾರಿಗೆ ಸರ್ವೀಸ್ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ರು. ಆಗ ನೀನು ಸಿನಿಮಾ ನಟ ಆಗಬೇಖು ಅಂತ ರಜನಿಗೆ ಬೆನ್ನೆಲುಬಾಗಿ ನಿಂತಿದ್ದ ಬಿಟಿಎಸ್ ಬಸ್ ಟ್ರೈವರ್ ಆಗಿದ್ದ ಸಹೋದ್ಯೋಗಿ ಮತ್ತು ಸ್ನೇಹಿತ ರಾಜ್ ಬಹದ್ದೂರ್ ಗೆ ರಜನಿಕಾಂತ್ ಪ್ರಶಸ್ತಿಯನ್ನ ಅರ್ಪಿಸಿದ್ದಾರೆ. ಇದು ಸೂಪರ್ ಸ್ಟಾರ ಸರಳತೆ. ಸ್ನೇಹಕ್ಕೆ ಕೊಡೋ ಬೆಲೆ ಮತ್ತು ರಸಜನಿಯ ವ್ಯಕ್ತಿತ್ವವನ್ನ ಕೊಂಡಾಡುಂತೆ ಮಾಡಿದೆ.