ಕಿಚ್ಚ ಇಲ್ಲದ ಬಾಹುಬಲಿ ದಿ ಎಪಿಕ್! ಸುದೀಪ್​ ಸೀನ್‌ಗೆ ಕತ್ತರಿ.. ಫ್ಯಾನ್ಸ್‌ಗೆ ಭಾರಿ ನಿರಾಸೆ!

ಬಾಹುಬಲಿ 1 & 2 ಸೇರಿಸಿ ಸದ್ಯ ಬಾಹುಬಲಿ ಎಪಿಕ್ ಅನ್ನೋ ಹೆಸರಲ್ಲಿ ರಿಲೀಸ್ ಮಾಡಲಾಗಿದೆ. 3 ಗಂಟೆ 45 ನಿಮಿಷಗಳ ಸಿನಿಮಾಗೆ ಮಸ್ತ್ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಆದ್ರೆ ಇದನ್ನ ನೋಡಿ ಕಿಚ್ಚನ ಫ್ಯಾನ್ಸ್ ಮಾತ್ರ ಬೇಸರ ಮಾಡಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಬಾಹುಬಲಿ 1 & 2 ಸೇರಿಸಿ ಸದ್ಯ ಬಾಹುಬಲಿ ಎಪಿಕ್ ಅನ್ನೋ ಹೆಸರಲ್ಲಿ ರಿಲೀಸ್ ಮಾಡಲಾಗಿದೆ. 3 ಗಂಟೆ 45 ನಿಮಿಷಗಳ ಸಿನಿಮಾಗೆ ಮಸ್ತ್ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಆದ್ರೆ ಇದನ್ನ ನೋಡಿ ಕಿಚ್ಚನ ಫ್ಯಾನ್ಸ್ ಮಾತ್ರ ಬೇಸರ ಮಾಡಿಕೊಂಡಿದ್ದಾರೆ. ಯೆಸ್ ಬಾಹುಬಲಿ 1 ಮತ್ತು 2 ಎರಡೂ ಭಾಗಗಳನ್ನ ಸೇರಿಸಿ ಬಾಹುಬಲಿ ದಿ ಎಪಿಕ್ ಅನ್ನೋ ಹೆಸರಲ್ಲಿ ರಿಲೀಸ್ ಮಾಡಲಾಗಿದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಂಡು 5 ಭಾಷೆಗಳಲ್ಲಿ ಬಾಹುಬಲಿ ದಿ ಎಪಿಕ್ ರಿಲೀಸ್ ಆಗಿದೆ. ಬರೊಬ್ಬರಿ 3 ಗಂಟೆ 45 ನಿಮಿಷಗಳ ಚಿತ್ರವನ್ನ ಜನ ಈಗಲೂ ಮುಗಿಬಿದ್ದು ನೋಡ್ತಾ ಇದ್ದಾರೆ. ಆದ್ರೆ ಈ ಖುಷಿ ನಡುವೆನೂ ಕಿಚ್ಚನ ಫ್ಯಾನ್ಸ್ ಮಾತ್ರ ಬೇಸರ ಮಾಡಿಕೊಂಡಿದ್ದಾರೆ.

ಯಾಕಂದ್ರೆ ಬಾಹುಬಲಿ - ದಿ ಎಪಿಕ್​ನಲ್ಲಿ ಕಿಚ್ಚ ಕಾಣೆಯಾಗಿದ್ದಾರೆ. ಸುದೀಪ್ ಸೀನ್​ ಬರುತ್ತೆ ಅಂತ ಥಿಯೇಟರ್​ಗೆ ಹೋದವರಿಗೆ ನಿರಾಸೆ ಆಗಿದೆ. ನಿರ್ದೇಶಕ ರಾಜಮೌಳಿ ಸುದೀಪ್ ಸೀನ್​ಗೆ ಕತ್ತರಿ ಹಾಕಿದ್ದಾರೆ. 2015 ರಲ್ಲಿ ಬಿಡುಗಡೆ ಆಗಿದ್ದ ‘ಬಾಹುಬಲಿ: ದಿ ಬಿಗಿನಿಂಗ್’ ಸಿನಿಮಾದಲ್ಲಿ ಸುದೀಪ್ ಅಸ್ಲಂ ಖಾನ್ ಹೆಸರಿನ ಪಾತ್ರದಲ್ಲಿ ನಟಿಸಿದ್ರು. ಅರೇಬಿಯನ್ ಶಸ್ತ್ರಾಸ್ತ್ರಗಳ ವ್ಯಾಪಾರಿಯ ಪಾತ್ರ ಅದು. ಕಿಚ್ಚನಿಗೆ ಒಳ್ಳೆಯ ಫೈಟ್ ದೃಶ್ಯ ಕೂಡ ಇತ್ತು. ‘ಬಾಹುಬಲಿ’ ಸಿನಿಮಾದ ಪ್ರಮುಖ ಪಾತ್ರಧಾರಿ ಕಟ್ಟಪ್ಪನ ಶಕ್ತಿ, ತ್ಯಾಗವನ್ನ ಪ್ರೇಕ್ಷಕರಿಗೆ ಪರಿಚಯಿಸೋದಕ್ಕೆ ಅಸ್ಲಂ ಖಾನ್ ಪಾತ್ರವನ್ನ ರಾಜಮೌಳಿ ಜಾಣತನದಿಂದ ಬಳಸಿದ್ದರು.

ಸುದೀಪ್ ಸಹ ಅದ್ಭುತವಾಗಿ ನಟಿಸಿದ್ದರು. ಕೆಲ ಎಲಿವೇಶನ್ ದೃಶ್ಯಗಳು ಸಹ ಸುದೀಪ್ ಅವರಿಗೆ ಆ ಸಿನಿಮಾನಲ್ಲಿ ಇತ್ತು. ಆದರೆ ಈಗ ಸುದೀಪ್ ಆ ದೃಶ್ಯಗಳಿಗೆ ರಾಜಮೌಳಿ ಕತ್ತರಿ ಹಾಕಿದ್ದಾರೆ. ಅಸಲಿಗೆ ಬಾಹುಬಲಿ 1 ಮತ್ತು 2ರ ಅವಧಿ ಸೇರಿಸಿದ್ರೆ ಬರೊಬ್ಬರಿ ಐದೂ ಗಂಟೆ ಐವತ್ತು ನಿಮಿಷ ಅವಧಿ ಆಗುತ್ತೆ. ಸೋ ಹೆಚ್ಚು ಕಡಿಮೆ ಎರಡು ಗಂಟೆ ಟ್ರಿಮ್ ಮಾಡಿ ಬಹುಬಲಿ ಎಪಿಕ್ ರೆಡಿಮಾಡಿದ್ದಾರೆ. ಬರೀ ಸುದೀಪ್ ಸೀನ್ ಮಾತ್ರ ಅಲ್ಲ ತಮನ್ನಾ, ಅನುಷ್ಕಾರ ಒಂದೊಂದು ಸಾಂಗ್​ ಅನ್ನೂ ಕಟ್ ಮಾಡಲಾಗಿದೆ. ಯಾವ ಸೀನ್, ಸಾಂಗ್ ಇಲ್ಲದೇ ಇದ್ರೂ ಕಥೆಯ ಓಟಕ್ಕೆ ಧಕ್ಕೆ ಬರಲ್ಲವೋ ಅದನ್ನ ಕಟ್ ಮಾಡಿದ್ದಾರೆ. ಇದು ಬಾಹುಬಲಿ ಟೀಮ್ ಪಾಲಿಗೆ ಅನಿವಾರ್ಯ. ಆದ್ರೆ ಕಿಚ್ಚನ ಫ್ಯಾನ್ಸ್​ಗೆ ಮಾತ್ರ ಇದು ಕೊಂಚ ಬೇಸರ ತಂದಿದೆ. ಬಾಹುಬಲಿ ಕನ್ನಡದಲ್ಲಿ ರಿಲೀಸ್ ಆದ್ರೂ ಕನ್ನಡಿಗ ಕಿಚ್ಚನೇ ಸಿನಿಮಾದಲ್ಲಿಲ್ಲ ಅಂತ ಬೇಸರ ಹಂಚಿಕೊಳ್ತಾ ಇದ್ದಾರೆ. 

Related Video