ಮತ್ತೆ ಜೈಲು ಸೇರ್ತಾರಾ ಅಲ್ಲು ಅರ್ಜುನ್? ಫುಲ್‌ ಟೆನ್ಷನ್‌ನಲ್ಲಿ 'ಪುಷ್ಪಾ 2' ಸ್ಟಾರ್ ನಟ!

ಹೈದ್ರಾಬಾದ್​​ನ ಸಂಧ್ಯಾ ಥಿಯೇಟರ್​ನಲ್ಲಾದ ಕಾಲ್ತುಳಿತ ಮತ್ತು ಮಹಿಳೆಯ ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ವಿಚಾರಣೆ ಎದುರಿಸಿದ್ದಾರೆ. ಚಿಕ್ಕಡಪಲ್ಲಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಅಲ್ಲು ಅರ್ಜುನ್​ಗೆ ನೋಟೀಸ್ ಕೊಟ್ಟಿದ್ರು. ಅಂತೆಯೇ ತನ್ನ ವಕೀಲರ ಜೊತೆಗೆ ಅಲ್ಲು ಅರ್ಜುನ್ ಠಾಣೆಗೆ ಬಂದು ವಿಚಾರಣೆ ಎದುರಿಸಿದ್ದಾರೆ...
 

First Published Dec 25, 2024, 1:15 PM IST | Last Updated Dec 25, 2024, 1:15 PM IST

ಅಲ್ಲು ಅರ್ಜುನ್​ಗೆ (Allu Arjun) ಮಧ್ಯಂತರ ಬೇಲ್ ಸಿಕ್ಕರೂ ಖಾಕಿ ವಿಚಾರಣೆಯಿಂದ ಮುಕ್ತಿ ಸಿಕ್ಕಿಲ್ಲ. ಇವತ್ತು ಚಿಕ್ಕಡಪಲ್ಲಿ ಠಾಣೆಗೆ ಅಲ್ಲು ಅರ್ಜುನ್​ನ ಕರೆಸಿ ಬರೊಬ್ಬರಿ 4 ಗಂಟೆಗಳ ಕಾಲ ಡ್ರಿಲ್ ಮಾಡಲಾಗಿದೆ. ಸಿಸಿಟಿವಿ ವಿಡಿಯೋವನ್ನ ಎದುರಿಗಿಟ್ಟು ಖಾಕಿಪಡೆ ಕೇಳಿದ ಪ್ರಶ್ನೆಗಳ ಮುಂದೆ ಪುಷ್ಪರಾಜ್ ತತ್ತರಿಸಿ ಹೋಗಿದ್ದಾನೆ.

ಹೌದು, ಹೈದ್ರಾಬಾದ್​​ನ ಸಂಧ್ಯಾ ಥಿಯೇಟರ್​ನಲ್ಲಾದ ಕಾಲ್ತುಳಿತ ಮತ್ತು ಮಹಿಳೆಯ ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಇವತ್ತು ವಿಚಾರಣೆ ಎದುರಿಸಿದ್ದಾರೆ. ಚಿಕ್ಕಡಪಲ್ಲಿ ಪೊಲೀಸರು ಬೆಳಿಗ್ಗೆ 11ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಅಲ್ಲು ಅರ್ಜುನ್​ಗೆ ನೋಟೀಸ್ ಕೊಟ್ಟಿದ್ರು. ಅಂತೆಯೇ ತನ್ನ ವಕೀಲರ ಜೊತೆಗೆ ಅಲ್ಲು ಅರ್ಜುನ್ ಠಾಣೆಗೆ ಬಂದು ವಿಚಾರಣೆ ಎದುರಿಸಿದ್ದಾರೆ.

ಹೈದ್ರಾಬಾದ್ ಸೆಂಟ್ರಲ್ ಎಸಿಪಿ, ಡಿಸಿಪಿ ಮತ್ತು ಸಬ್ ಇನ್​ಪೆಕ್ಟರ್ ಅಲ್ಲು ಅರ್ಜುನ್​ ಎದುರು 50ಕ್ಕೂ ಹೆಚ್ಚು ಪ್ರಶ್ನೆಗಳನ್ನ ಕೇಳಿದ್ದಾರೆ. ಅದ್ರಲ್ಲೂ ಸಂಧ್ಯಾ ಥಿಯೇಟರ್​ನ ಸಿಸಿಟಿವಿ ಫೂಟೇಜ್ ಇಟ್ಟು ಅಲ್ಲು ಅರ್ಜುನ್​ನ ಪ್ರಶ್ನಿಸಿದ್ದು ಖಾಕಿ ಖಡಕ್ ಪ್ರಶ್ನೆಗಳನ್ನ ಎದುರಿಸೋಕೋಗಾದೇ ಐಕಾನ್ ಸ್ಟಾರ್ ತತ್ತಿರಿಸಿ ಹೋಗಿದ್ದಾರೆ.
ಅಲ್ಲು ಅರ್ಜುನ್​ಗೆ ಖಾಕಿ ಪ್ರಶ್ನೆ :
⦁    ಥಿಯೇಟರ್ಗೆ ಬರುವ ಬಗ್ಗೆ ನೀವು ಯಾರಿಗೆ ತಿಳಿಸಿದ್ದಿರಿ?
⦁    ನೀವು ರೋಡ್ ಶೋಗೆ ಅನುಮತಿ ತೆಗೆದುಕೊಂಡಿದ್ದೀರಾ ಅಥವಾ ಇಲ್ಲವೇ?
⦁    ಅನುಮತಿ ನಿರಾಕರಿಸಲಾಗಿದೆ ಎಂದು ಯಾರೂ ಹೇಳಲಿಲ್ಲವೇ?
⦁    ನಿಮ್ಮ ಕುಟುಂಬದ ಯಾವ ಸದಸ್ಯರು ಥಿಯೇಟರ್​ಗೆ ಬಂದಿದ್ದರು?
⦁    ನೀವು ಥಿಯೇಟರ್​ನಲ್ಲಿ ಇದ್ದಾಗ ರೇವತಿ ಸತ್ತಿದ್ದು ಗೊತ್ತಿರಲಿಲ್ಲವೇ?
⦁    ಎಸಿಪಿ ಮತ್ತು ಸಿಐ ನಿಮ್ಮನ್ನು ಭೇಟಿ ಮಾಡಿದ್ದು ನಿಜವಲ್ಲವೇ?
⦁    ನಿಮ್ಮೊಂದಿಗೆ ಎಷ್ಟು ಬೌನ್ಸರ್ಗಳು ಬಂದರು?  
⦁    ಅಭಿಮಾನಿಗಳ ಮೇಲೆ ದಾಳಿ ಮಾಡಿದ ಬೌನ್ಸರ್ಗಳ ವಿವರಗಳೇನು?
⦁    ಮಹಿಳೆಯ ಸಾವಿನ ಬಗ್ಗೆ ನಿಮಗೆ ಯಾವಾಗ ಗೊತ್ತಾಯಿತು?
⦁    ನೀವು 2:45 ಕ್ಕೆ ಥಿಯೇಟರ್ನಲ್ಲಿದ್ದೀರಿ ಎಂಬುದು ನಿಜವಲ್ಲವೇ?
⦁    850 ಮೀಟರ್ ರೋಡ್ ಶೋ ಮಾಡಿದ್ದು ಏಕೆ?
⦁    ಹೊರಡುವಾಗ ಮತ್ತೇಕೆ ಅಭಿಮಾನಿಗಳತ್ತ ಕೈ ಬೀಸಬೇಕಿತ್ತು?
==
ಯೆಸ್ ಅಲ್ಲು ಅರ್ಜುನ್​ಗೆ ಇಷ್ಟೆಲ್ಲಾ ಪ್ರಶ್ನೆಗಳನ್ನ ಕೇಳಿರೋ ಪೊಲೀಸರು ಅವರ ಉತ್ತರವನ್ನ ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡಿದ್ದಾರೆ. ಸತತ ನಾಲ್ಕು ಗಂಟೆ ವಿಚಾರಣೆ ನಡೆಸಿ ಮುಂದಿನ ಬಾರಿ ನೋಟೀಸ್​ ಕೊಟ್ಟಾಗ ವಿಚಾರಣೆಗೆ ಬರಬೇಕು ಅಂತ ಹೇಳಿ ಕಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..